ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರ ಕೊಲೆ; ಕತ್ತು ಸೀಳಿ ಹೆದ್ದಾರಿಯಲ್ಲಿ ಬೀಸಾಡಿದ ಕಿಡಿಗೇಡಿಗಳು!

Published : Jul 23, 2025, 06:46 PM IST
Bengaluru BJP Leaders

ಸಾರಾಂಶ

ಬೆಂಗಳೂರು ಮೂಲದ ಇಬ್ಬರು ಬಿಜೆಪಿ ಮುಖಂಡರಾದ ತಂದೆ-ಮಗನನ್ನು ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಲು ತೆರಳಿದ್ದ ವೇಳೆ, ರಾಜಿ ಮಾಡಿಕೊಳ್ಳೋಣವೆಂದು ಕರೆದಾಗ ಈ ಘಟನೆ ನಡೆದಿದೆ.

ಬೆಂಗಳೂರು (ಜು.23): ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರನ್ನು ಆಂಧ್ರ ಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿ, ಹೆದ್ದಾರಿ ಬಳಿಯಲ್ಲಿ ಬೀಸಾಡಲಾಗಿದೆ.

ಇಬ್ಬರು ಬಿಜೆಪಿ ಮುಖಂಡರ ಬರ್ಬರ ಘಟನೆ ಆಂಧ್ರ ಪ್ರದೇಶ ರಾಜ್ಯದ ಬಾಪಟ್ಲ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಇವರಿಬ್ಬರೂ ತಂದೆ-ಮಗ ಆಗಿದ್ದಾರೆ. ರಿಯಲ್ ಎಸ್ಟೇಟ್ ಸಂಬಂದಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದಾಗ, ಇಬ್ಬರನ್ನೂ ಅಪಹರಿಸಿ ಕೊಲೆ ಬರ್ಬರವಾಗಿ ಕತ್ತು ಸೀಳಿದ್ದಾರೆ. ಮೃತರನ್ನು ಮಹದೇವಪುರ ಬಿಜೆಪಿ ಯುವ ಮುಖಂಡ ಮತ್ತು ಉದ್ಯಮಿ ಪ್ರಶಾಂತರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಎಂದು ಗುರುತಿಸಲಾಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದ ತಂದೆ-ಮಗ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ ರೆಡ್ಡಿ ಇಬ್ಬರೂ ಇಬ್ಬರೂ ಬೆಂಗಳೂರಿನ ಕಾಡುಗುಡಿ ಮೂಲದ ಉದ್ಯಮಿಗಳು ಆಗಿದ್ದರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆಪ್ತ ಮೂಲಗಳಲ್ಲಿ ಇವರು ಗುರುತಿಸಿಕೊಂಡು, ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದರು. ಹೀಗಾಗಿ, ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಆದರೆ, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂದಿಸಿದ ಕೋರ್ಟ್ ಕೇಸ್ ವಿಚಾರಣೆಗೆ ಆಂಧ್ರ ಪ್ರದೇಶ ರಾಜ್ಯಕ್ಕೆ ತೆರಳಿದ್ದರು. ಈ ವೇಳೆ ಇಬ್ಬರನ್ನೂ ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ಪ್ರಶಾಂತ್ ಮತ್ತು ವೀರಸ್ವಾಮಿರೆಡ್ಡಿ ಇಬ್ಬರೂ ಮಾರ್ವಲ್ ಬಿಲ್ಡರ್ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಆಂಧ್ರ ಮೂಲದ ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಅಪ್ಪ- ಮಗನ ಮೇಲೆ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು. ನಿನ್ನೆ ವಿಮಾನದ ಮೂಲಕ ಅಪ್ಪ-ಮಗ ಕೋರ್ಟ್ ಕೇಸ್ ಗೆ ತೆರಳಿದ್ದರು. ಇಂದು ಬೆಳ್ಳಗ್ಗೆಯಿಂದ ಮದ್ಯಾಹ್ನ 12ಗಂಟೆವರೆಗೂ ಅಪ್ಪ-ಮಗ ಇಬ್ಬರೂ ಕೋರ್ಟ್ ಬಳಿಯೇ ಇದ್ದರು. ಆದರೆ, 12 ಗಂಟೆ ಸುಮಾರಿಗೆ ಕೋರ್ಟ್ ಬಳಿಯೇ ತಂದೆ-ಮಗ ಇಬ್ಬರನ್ನೂ ಮಾತುಕತೆಗೆ ಕರೆದ ಮಾಧವರೆಡ್ಡಿ ಮತ್ತು ಅನಿಲ್ ರೆಡ್ಡಿ ರಾಜಿಯಾಗೋಣವೆಂದು ಮಾತನಾಡುತ್ತಲೇ, ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಕೂರಿಸಿಕೊಂಡ ಕಿಡ್ನ್ಯಾಪ್ ಮಾಡಿದ್ದಾರೆ. ಇದಾದ ಬಳಿಕ 12.20ಕ್ಕೆ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಹೆದ್ದಾರಿಯಲ್ಲೇ ಬೀಸಾಡಿ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ