Bengaluru: ಡಬಲ್‌ ಚಾರ್ಜ್‌ ಕೊಡದ ಅಸ್ಸಾಂ ಸಹೋದರರಿಗೆ ಚಾಕು ಚುಚ್ಚಿದ ಆಟೋ ಚಾಲಕ: ದಾರುಣ ಸಾವು

Published : Jun 12, 2023, 12:13 PM ISTUpdated : Jun 12, 2023, 03:24 PM IST
Bengaluru: ಡಬಲ್‌ ಚಾರ್ಜ್‌ ಕೊಡದ ಅಸ್ಸಾಂ ಸಹೋದರರಿಗೆ ಚಾಕು ಚುಚ್ಚಿದ ಆಟೋ ಚಾಲಕ: ದಾರುಣ ಸಾವು

ಸಾರಾಂಶ

ಬೆಂಗಳೂರಿನಲ್ಲಿ ರಾತ್ರಿ ವೇಳೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಡಬಲ್‌ ಚಾರ್ಜ್‌ ಕೊಡಲಿಲ್ಲವೆಂದು ಆಟೋ ಚಾಲಕ ಚಾಕು ಚುಚ್ಚಿದ ಘಟನೆ ಯಶವಂತಪುರದಲ್ಲಿ ನಡೆದಿದೆ.

ಬೆಂಗಳೂರು (ಜೂ.12): ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಆಟೋದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಬಳಿ ಡಬಲ್‌ ಚಾರ್ಜ್‌ ಕೊಡುವಂತೆ ಕೇಳಿದ ಚಾಲಕನೊಂದಿಗೆ ಗಲಾಟೆ ಆರಂಭಿಸಿದ್ದಾರೆ. ಇದರಿಂದ ಕೋಪಗೊಂಡ ಆಟೋ ಚಾಲಕ ಇಬ್ಬರು ಪ್ರಯಾಣಿಕರಿಗೆ ಚಾಕು ಚುಚ್ಚಿದ್ದು, ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಬೆಂಗಳೂರಿನ ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ಘಟನೆ ನಡೆದಿದೆ. ಆಟೋ ಬಾಡಿಗೆ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ರಾತ್ರಿಯಾಗಿದ್ದು, ಡಬಲ್‌ ಚಾರ್ಜ್‌ ಕೊಡುವಂತೆ ಹೇಳಿದಾಗ, ಚಾರ್ಜ್‌ ಕೊಡಲೊಪ್ಪದ ಪ್ರಯಾಣಿಕರ ಮೇಲೆ ಆಟೋ ಚಾಲಕ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರು ಪ್ರಯಾಣಿಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಘಟನೆಯಲ್ಲಿ ಓರ್ವ ಪ್ರಯಾಣಿಕ ಸಾವು, ಮತ್ತೊರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ. 

Bengaluru: ಮದ್ವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ದಾರುಣ ಸಾವು

ಇನ್ನು ಮೃತ ಯುವಕನ್ನು ಅಸ್ಸಾಂ ಮೂಲದ ಅಹ್ಮದ್ (28) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಯುವಕ ಅಯೂಬ್ ಅನ್ನು ಸ್ಥಳೀಯರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಟೋ ಚಾಲಕ ಅಶ್ವಥ್ ಕೃತ್ಯ ಎಸಗಿದವರಾಗಿದ್ದಾರೆ. ಮೃತ ಅಹ್ಮದ್ ಮತ್ತು ಅಯೂಬ್ ಇಬ್ಬರು ಸಹೋದರರು. ಅಸ್ಸಾಂನಿಂದ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಗರದ ಯಶವಂತಪುರದಲ್ಲಿ ವಾಸವಿದ್ದವರ ಮೇಲೆ ಚಾಕು ಚುಚ್ಚಿದ ಘಟನೆ ನಡೆದಿದೆ. 

ಬಾಡಿಗೆ ವಿಚಾರಕ್ಕೆ ಪ್ರಯಾಣಿಕರನ್ನೇ ಡೆಡ್‌ ಬಾಡಿ ಮಾಡಿದ:  ಇನ್ನು ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಸಹೋದರರು, ಆಟೋ ಹಿಡಿದು ಮನೆಯ ವಿಳಾಸವನ್ನು ಹೇಳಿ ಆಟೋದಲ್ಲಿ ತೆರಳಿದ್ದಾರೆ. ಆಟೋ ಹತ್ತಿಸಿಕೊಂಡ ಚಾಲಕ ಪ್ರಯಾಣಿಕ ಸಹೋದರರಿಂದ ಡಬಲ್ ಬಾಡಿಗೆ ಕೇಳಿದ್ದಾರೆ. ಡಬಲ್ ಬಾಡಿಗೆ ವಿಚಾರಕ್ಕೆ ಪ್ರಯಾಣಿಕರು ಮತ್ತು ಆಟೋ ಚಾಲಕನ ನಡುವೆ ಗಲಾಟೆ ಸಂಭವಿಸಿದೆ. ಈ ವೇಳೆ ಚಾಲಕ ತನ್ನ ಬಳಿಯಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಆರ್ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಮಹಿಳೆ ಸ್ನಾನ ಮಾಡೋದನ್ನ ಕದ್ದು ನೋಡ್ತಿದ್ದ ಯುವಕನಿಗೆ ಧರ್ಮದೇಟು: ಬೆಂಗಳೂರು(ಜೂ.12):  ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕಾಮುಕನೊಬ್ಬನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುನೇನಕೊಳಲು ಮಂಜುನಾಥನಗರ ನಿವಾಸಿ ನಿತಿನ್‌ (25) ಬಂಧಿತ. ನಗರದ ಖಾಸಗಿ ಫಾರ್ಮಾಸ್ಕೂ್ಯಟಿಕಲ್‌ ಕಂಪನಿಯೊಂದರ ಉದ್ಯೋಗಿಯಾಗಿರುವ ನಿತಿನ್‌, ಶನಿವಾರ ಬೆಳಗ್ಗೆ ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಸ್ನಾನ ಮಾಡುವಾಗ ಈತನನ್ನು ಗಮನಿಸಿರುವ ಮಹಿಳೆ, ಜೋರಾಗಿ ಕಿರುಚಿದ್ದಾರೆ. ತಕ್ಷಣ ಮಹಿಳೆಯ ಪತಿ ಹಾಗೂ ಅಕ್ಕಪಕ್ಕದ ಮನೆಯವರು ಓಡಿ ಬಂದಾಗ, ನಿತಿನ್‌ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನನ್ನು ಬೆನ್ನಟ್ಟಿಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಪದೇ ಪದೆ ಚಾಳಿ ಮುಂದಯುವರೆಸಿದ್ದ ಯುವಕ: ಆರೋಪಿ ನಿತಿನ್‌ ಬಹಳ ದಿನಗಳಿಂದ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡುತ್ತಿದ್ದ. ಆದರೆ, ಮಹಿಳೆ ಗಮನಿಸಿರಲಿಲ್ಲ. ಶನಿವಾರ ಆರೋಪಿ ತನ್ನ ಚಾಳಿ ಮುಂದುವರೆಸಿದ್ದಾಗ ಮಹಿಳೆ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ