
ಬೆಂಗಳೂರು (ಫೆ.24): ನಂಗೆ ಅವನು ಹೊಡೆದುಬಿಟ್ಟ ಮಚ್ಚಾ.. ನಾವೂ ಅವರ ಮನೆಗೆ ನುಗ್ಗಿ ಹೊಡೆದು ಬರೋಣ ಎಂದು ಸ್ನೇಹಿತನನ್ನು ಕರೆದುಕೊಂಡು ಹೋದ ಜೀವದ ಗೆಳೆಯ, ಎದುರಾಳಿಗಳು ತಾನು ಕರೆದೊಯ್ದ ಸ್ನೇಹಿತನಿಗೆ ಚಾಕು ಚುಚ್ಚಿದ್ದಂತೆಯೇ ಅಲ್ಲಿಂದ ಪರಾರಿ ಆಗಿದ್ದಾನೆ. ಆದರೆ, ಗೆಳೆಯನಿಗಾಗಿ ಹೊಡೆದಾಡಲು ಹೋದವನು ಮಾತ್ರ ಎದುರಾಳಿಗಳ ಚಾಕು ಇರಿತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಪುರದಲ್ಲಿ ಘಟನೆ ನಡೆದಿದೆ. ಸುಬ್ರಮಣಿ (23) ಸ್ನೇಹಿತನಿಂದ ಕೊಲೆಯಾದ ವ್ಯಕ್ತಿ. ನಿನ್ನೆ ಸಂಜೆ 8.30ರ ಸುಮಾರಿಗೆ ಘಟನೆ ನಡೆದಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿದ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಡ್ರೈವರ್ ಸುಬ್ರಮಣಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಗಣೇಶ್ ಹಾಗೂ ಮುರಳೀಧರ್ ಎಂಬ ಇಬ್ಬರು ಆರೋಪಿಗಳನ್ಉ ಬಂಧಿಸಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿ ಎಲ್ಲರೂ ಸ್ನೇಹಿತರು. ಎಲ್ಲರೂ ಕೂಡ ಕ್ರಿಕೆಟ್ ಆಡುವಾಗ ಪರಿಚಯ ಆಗಿದ್ದರು. ಯಲಹಂಕದ ಅನಂತಪುರ ಏರಿಯಾದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳಿಗೆ ಭುವನ್ ಎಂಬುವ ಮತ್ತೊಬ್ಬ ಸ್ನೇಹಿತನಿದ್ದ.ಎಲ್ಲರೂ ಆಗಾಗ ಕ್ರಿಕೆಟ್ ಆಡೋಕೆ ಒಂದು ಕಡೆ ಸೇರುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು ಐಟಿ ಆಫೀಸಿಗೆ ಹೊರಟ ಟೆಕ್ಕಿಗೆ ಕಾರಿನಲ್ಲೇ ಹೃದಯಾಘಾತ; ಟ್ರಾಫಿಕ್‌ನಲ್ಲೇ ಕೊನೆಯುಸಿರು!
ನಿನ್ನೆ ಸಂಜೆ 7.3೦ರ ಸುಮಾರಿಗೆ ಕಾರ್ಪೆಂಟರ್ ಒಬ್ಬನ ಬಗ್ಗೆ ವಿಚಾರಿಸಲು ಭುವನ್ ಎನ್ನುವ ವ್ಯಕ್ತಿ ಆರೋಪಿಗಳಾದ ಗಣೇಶ್ ಮತ್ತು ಮುರುಳೀಧರನನ್ನು ಭೇಟಿ ಆಗಿದ್ದನು. ಈ ವೇಳೆ ಸರಿಯಾಗಿ ರೆಸ್ಪಾನ್ಸ್ ಮಾಡಿಲ್ಲ ಎಂದು ಮುರುಳೀಧರ್ ಮೇಲೆ ಭುವನ್ ಹಲ್ಲೆ ಮಾಡಿದ್ದನು. ಮುರುಳಿಧರನ ಹಲ್ಲೆ ಮಾಡಿದ್ದಕ್ಕೆ ಭುವನ್ ಮನೆವರೆಗೂ ಹುಡುಕಿಕೊಂಡು ಹೋಗಿ ಹೊಡೆದಿದ್ದರು. ನಂತರ ಭುವನ್ ಮನೆಯವರು ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ, ಮನೆಯವರೆಗೂ ಬಂದು ಹೊಡೆದಿದ್ದಕ್ಕೆ ಭುವನ್ ಮತ್ತಷ್ಟು ಸಿಟ್ಟಿಗೆದ್ದಿದ್ದನು.
ಮುರುಳೀಧರ ಮತ್ತು ಗಣೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಭುವನ್ ತನ್ನ ಸ್ನೇಹಿತ ಮುರುಳೀಧರನನ್ನು ಕರೆದುಕೊಂಡು ನಿನ್ನೆ 8 ಗಂಟೆಗೆ ಆರೋಪಿಗಳ ಮನೆಗೆ ಹೋಗಿದ್ದನು. ಈ ವೇಳೆ ಮನೆಯಲ್ಲಿದ್ದ ಮುರುಳೀಧರ್ ಸಿಂಗ್ ಮತ್ತು ಗಣೇಶ್ ಇಬ್ಬರ ಮೇಲೂ ಹಲ್ಲೆಗೆ ಮಾಡಿದ್ದಾರೆ. ಈ ವೇಳೆ ಹಲ್ಲೆ ಮಾಡುವುದಕ್ಕೆ ಬಂದ ಸುಬ್ರಮಣಿ ಮೇಲೆ ಆರೋಪಿಗಳು ಚಾಕು ಚುಚ್ಚಿದ್ದಾರೆ. ಈ ವೇಳೆ ಭುವನ್ ತನ್ನನ್ನೂ ಇವರು ಕೊಲ್ಲಬಹು ಎಂದು ಎಚ್ಚೆತ್ತುಕೊಂಡು ಗಾಯಾಳು ಸ್ನೇಹಿತ ಸುಬ್ರಮಣಿಯನ್ನ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಯಲಹಂಕ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಜಗಳಕ್ಕೆ ಕರೆದುಕೊಂಡು ಹೋಗಿ, ನಡುವೆ ಕೈಬಿಟ್ಟು ಪಾರಾರಿ ಆಗಿರುವ ಭುವನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರಿಗೆ ಬೆಂಕಿ ಹಚ್ಚಿದ ರೌಡಿ, ತಾನೇ ಕೊಡಿಸಿದ್ದ ಕಾರಿಗೂ ಬೆಂಕಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ