ಆಂಟಿ ಪ್ರೀತ್ಸೆ ಅಂತ ಹೋದವನ ಮರ್ಡರ್: ಹಣದಾಸೆಗೆ ಹಳೇ ಪ್ರಿಯಕರನನ್ನು ಫಿನಿಶ್‌ ಮಾಡಿದ ಆಂಟಿ

By Sathish Kumar KH  |  First Published Nov 5, 2023, 8:23 PM IST

ಗಂಡ ಬಿಟ್ಟ ಮಹಿಳೆಯ ಹಿಂದೆ ಆಂಟಿ ಪ್ರೀತ್ಸೆ ಎಂದು ಹೋದ ಯುವಕನನ್ನು ಹಣದಾಸೆಗೆ ಕೊಲೆ ಮಾಡಿ ಬೀಸಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರು/ ಆನೇಕಲ್ (ನ.05): ಹಾಸನದಿಂದ ಬಂದು ಮದುವೆಯಾಗಿ ಸುಖ ಸಂಸಾರ ಮಾಡಿಕೊಂಡಿರದೇ ಅತ್ತೆ-ಮಾವನಿಗೆ ಕಿರುಕುಳ ಕೊಟ್ಟು ಕುಟುಂಬದಿಂದ ದೂರವಿದ್ದ ಆಂಟಿ ಮಾಡಿದ್ದು ಎರಡೆರಡು ಲವ್‌. ಇಬ್ಬರ ಪ್ರೀತಿಯಲ್ಲಿ ಮಿಂಚುತ್ತಿದ್ದ ಪಾತರಗಿತ್ತಿ ಆಂಟಿ ಹಣದಾಸೆಗೆ ಹಳೆಯ ಲವರ್‌ನನ್ನೇ ಕೊಲೆಗೈದು ಬೀದಿ ಹೆಣವನ್ನಾಗಿ ಮಾಡಿದ್ದಾಳೆ. 

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಳೆದ ತಿಂಗಳು ಅಕ್ಟೋಬರ್ 6ರಂದು ಮುಗಳೂರು ದಕ್ಷಿಣ ಪಿನಾಕಿನಿ ನದಿಯಲ್ಲಿ ಅಪರಿಚಿತ ಯುವಕನ ದೇಹ ಪತ್ತೆಯಾಗಿತ್ತು. ಆ ದೇಹ ಕಂಡ ತಕ್ಷಣ ಪೊಲೀಸರಿಗೆ ಅನುಮಾನ ಮೂಡಿತ್ತು. ಅನುಮಾನದ ಜಾಡು ಹಿಡಿದ ಪೊಲೀಸರಿಗೆ ಅಲ್ಲೊಂದು ಸುಳಿವು ಸಿಕ್ಕಿತ್ತು. ಅದೊಂದು ಸುಳಿವು ಬಾರ್‌ಗೆ ಕರೆದೊಯ್ದಿತ್ತು. ಬಾರ್‌ನಲ್ಲಿ ಎಣ್ಣೆ ಪಾರ್ಟಿ ಮಾಡಿ ಬಂದು ಮುಗಳೂರು ಸೇತುವೆಯ ಮೇಲೆ ಮಚ್ಚಿನಿಂದ ತಲೆಗೆ ಹೊಡೆದು ಅಲ್ಲಿಂದ ಬಿಸಾಕಿದ್ದರು. ಅದಾದ ಮೇಲೆ ಯಾರಿಗೂ ಅನುಮಾನವೊಂದ ರೀತಿಯಲ್ಲಿ ಎಸ್ಕೇಪ್ ಆಗಿದ್ದರು.

Tap to resize

Latest Videos

undefined

ದಂಡುಪಾಳ್ಯ ಗ್ಯಾಂಗ್‌ ಮಾದರಿಯಲ್ಲಿ ಕೊಲೆಯಾದ್ರಾ ಸರ್ಕಾರಿ ಅಧಿಕಾರಿ ಪ್ರತಿಮಾ? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ!

ಅತ್ತೆ- ಮಾವನಿಗೆ ಕಿರುಕುಳ ಕೊಟ್ಟು ಜೈಲಿಗೆ ಹೋಗಿದ್ದ ಶೋಭಾ: ದಕ್ಷಿಣ ಪಿನಾಕಿನಿ ನದಿಯಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹ ಪತ್ತೆ ಪೊಲೀಸರಿಗೆ ಸವಾಲಿನಾದಾಗಿತ್ತು. ಸರ್ಜಾಪುರ ಇನ್ಸ್‌ಪೆಕ್ಟರ್ ನವೀನ್ ತಂಡ ಎರಡು ದಿನಗಳ ಕಾಲ ಮಿಸ್ಸಿಂಗ್ ಕಂಪ್ಲೇಂಟ್‌ಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಎರಡು ದಿನದ ಬಳಿಕ ಕೆ.ಆರ್ ಪುರಂನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಒಂದು ಪತ್ತೆಯಾಗಿತ್ತು. ಆತನ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು ಆಂಟಿ ಶೋಭಾ. ಹೌದು, ಹೀಗೆ ಪೋಟೊದಲ್ಲಿ ಕಾಣ್ತಿದ್ದಾಳಲ್ಲ ಈಕೆ ಹೆಸರು ಶೋಭಾ ಅಂತ. ಹಾಸನ ಜಿಲ್ಲೆಯ ಗ್ರಾಮದಿಂದ ಬಂದು ಪವನ್ ಕುಮಾರ್ ಎಂಬಾತನನ್ನು ಮದುವೆಯಾಗಿ ಅತ್ತಿಬೆಲೆ ವಾಸವಾಗಿದ್ದರು. ಈಕೆಗೆ 4 ವರ್ಷದ ಗಂಡು ಮಗನೂ ಇದ್ದಾನೆ. ಆದರೆ, ಕೆಲವು ದಿನಗಳ ಹಿಂದೆ ಅತ್ತೆ, ಮಾವ ಹಾಗೂ ಅಳಿಯನನ್ನು ಕೊಠಡಿಯಲ್ಲಿ ಕೂಡಿಹಾಕಿ ಹಿಂದೆ ಕೊಟ್ಟು ವಿಕೃತಿ ಮೆರೆದಿದ್ದಳು. ಹೀಗಾಗಿ, ಜೈಲಿಗೆ ಹೋಗಿ ಬಂದು ಕುಟುಂಬದಿಂದ ದೂರವಾಗಿದ್ದಳು. 

8 ತಿಂಗಳು ಪ್ರೀತಿಸಿ ಎಂಜಾಯ್‌ ಮಾಡಿದ ಆಂಟಿ ಹಣದಾಸೆಗೆ ವರಸೆ ಬದಲಿಸಿದ್ಲು: ಆಂಟಿ ಶೋಭ ಕುಟುಂಬದಿಂದ ತೊರೆದು ಕೆ.ಆರ್. ಪುರಂ ಬಳಿಯ ಟಿ.ಸಿ. ಹಳ್ಳಿಯಲ್ಲಿ ಪಾರ್ಲರ್‌ ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅಯ್ಯಪ್ಪ ನಗರದ ನಿವಾಸಿ ಚೇತನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಇನ್ನು ಚೇತನ್‌ ಮದುವೆಯಾಗದ ಹುಡುಗನಾಗಿದ್ದರೂ 8 ತಿಂಗಳ ಕಾಲ ಪರಸ್ಪರ ಪ್ರೀತಿಸುತ್ತಾ ಲೈಫ್‌ ಎಂಜಾಯ್‌ ಮಾಡುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ಶೋಭಾ ಆಂಟಿ ಪ್ರೀತಿಯ ಗಾಳಕ್ಕೆ ಮತ್ತೊಬ್ಬ ಎಂಟ್ರಿ ಕೊಟ್ಟಿದ್ದನು. ಯುವಕ ಚೇತನ್‌ ಬಳಿ ಹಣವಿದ್ದುದರಿಂದ ತನಗೆಬೇಕಾದ ಧನ ಲಾಭವನ್ನು ಮಾಡಿಕೊಂಡ ಶೋಭಾ, ತನ್ನ ಹೊಸ ಪ್ರಿಯಕರನೊಂದಿಗೆ ಸೇರಿಕೊಂಡು ಯುವಕ ಚೇತನ್‌ನನ್ನು ಕೊಲೆಗೈದು ಬೀದಿ ಹೆಣ ಮಾಡಿದ್ದಳು. 

ಬೆಂಗಳೂರು ವಾಹನ ಸವಾರರ ಮೇಲೆ 68 ಲಕ್ಷ ಟ್ರಾಫಿಕ್‌ ರೂಲ್ಸ್ ಉಲ್ಲಂಘನೆ ಕೇಸ್‌ ಹಾಕಿದ ಸಂಚಾರಿ ಪೊಲೀಸರು!

ಮುಗಳೂರು ಸೇತುವೆ ಬಳಿ ಕೊಲೆ: ಮೃತ ಯುವಕ ಚೇತನ್ ಪ್ರಕಾಶ್ ರೆಡ್ಡಿ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿದ್ದನು. ದಂಪತಿ ಪ್ರಾವಿಷನ್ ಸ್ಟೋರ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಚೇತನ್‌ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಾ ಹಣ ಹೆಸರು ಗಳಿಸಿದ್ದನು. ಆದರೆ, ಆಂಟಿ ಪ್ರೀತ್ಸೆ ಎಂದು ಬೆನ್ನುಬಿದ್ದು ಬೀದಿ ಹೆಣವಾಗಿದ್ದಾನೆ. ಕಳೆದ ಅಕ್ಟೋಬರ್‌ 26 ನೇ ತಾರೀಖಿನಂದು ಆನೇಕಲ್ ತಾಲೂಕಿನ ಮುಗಳೂರು ಬ್ರಿಡ್ಜ್ ಬಳಿ ಕೊಲೆ ಚೇತನ್‌ ಎನ್ನುವ ಯುವಕನನ್ನು ಕೊಲೆ ಮಾಡಿ ಬೀಸಾಡಿದ್ದರು. 

ಚೇತನ್‌ ಬಿಟ್ಟು ಸತೀಶ್‌ನನ್ನು ಪ್ರೀತಿಸಿದ ಶೋಭಾ: ಚೇತನ್‌ ಹಾಗೂ ಶೋಭಾ ಪ್ರೀತಿಯ ನಡುವೆ ಎಂಟ್ರಿ ಕೊಟ್ಟಿದ್ದ ಸ್ಥಳೀಯ ಸತೀಶ್‌ನೊಂದಿಗೆ ಸಲುಗೆ ಬೆಳೆಸಿಕೊಂಡ ಶೋಭಾ ಚೇತನ್‌ ಸಹವಾಸವನ್ನು ಬಿಟ್ಟುಬಿಡಲು ಮುಂದಾಗಿದ್ದಳು. ಆದರೆ, ತಮ್ಮ ಸಂಬಂಧ ಕಡಿದುಕೊಳ್ಳಲು ಕಾರಣವೇ ಇರಲಿಲ್ಲ. ಜೊತೆಗೆ, ತನಗಾಗಿ ಮಾಡಿದ ಧನಸಹಾಯವನ್ನು ವಾಪಸ್‌ ಕೊಡಬೇಕೆಂದರೆ ಅವಳ ಬಳಿ ದುಡ್ಡೂ ಇರಲಿಲ್ಲ. ಇನ್ನು ಹೊಸದಾಗಿ ಪರಿಚಿತವಾಗಿದ್ದ ಸತೀಶನಿಗೆ ಜಮೀನು ಮಾಡಿದ್ದ 40 ಲಕ್ಷ ರೂ, ಹಣ ಬಂದಿತ್ತು. ಅದರಲ್ಲಿ 20 ಲಕ್ಷ ರೂ. ಖರ್ಚು ಮಾಡಿ ಶೋಭಾಳಿಗೆ ಹೊಸ ಬ್ಯೂಟಿ ಪಾರ್ಲರ್‌ ಮಾಡಿಕೊಟ್ಟಿದ್ದನು. ಇನ್ನು ಚೇತನ್‌ನನ್ನು ದೂರವಿಟ್ಟರೂ ಆತ ಕಿರುಕುಳ ಮುಂದುವರೆಸಿದ್ದರಿಂದ ಹೊಸಕೋಟೆಯ ಐಶ್ವರ್ಯಾ ಬಾರ್‌ಗೆ ಕರೆದೊಯ್ದು ಎಣ್ಣೆ ಪಾರ್ಟಿ ಮಾಡಿ, ವಾಪಸ್‌ ಬರುವಾಗ ಚೇತನ್‌ನನ್ನು ಕೊಲೆ ಮಾಡಿ ಬೀಸಾಡಿದ್ದಾರೆ. ಇದಕ್ಕೆ ಸತೀಶ್ನ ಸ್ನೇಹಿನ ಶಶಿ ಎನ್ನುವವನೂ ಸಾಥ್‌ ನಿಡಿದ್ದಾನೆ. ಈಗ ಎಲ್ಲರೂ ಕಂಬಿ ಎಣಿಸುತ್ತಿದ್ದಾರೆ.

click me!