ಬೆಂಗ್ಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ವಸೂಲಿ ದಂಧೆ, ಚಾಲಾಕಿ ಪೊಲೀಸರೇ ಬಲೆಗೆ!

By Suvarna NewsFirst Published Dec 15, 2019, 10:56 PM IST
Highlights

ಇವರು ಅಂತಿಂಥ ಪೊಲೀಸರಲ್ಲ/ ಖಾಸಗಿ ಮೀಟರ್ ಇಟ್ಟುಕೊಂಡು ಜನರಿಂದ ಹಣ ಸಂಪಾದನೆ/ ಕುಡಿದು ವಾಹನ ಚಲಾಯಿಸುವವರೆ ಟಾರ್ಗೆಟ್/ ಸಾರ್ವಜನಿಕರ ಮಾಹಿತಿ ಆಧರಿಸಿ ದಾಳಿ

ಬೆಂಗಳೂರು(ಡಿ. 15)  ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಪೊಲೀಸರು ಸುಲಿಗೆ ಮಾಡುತ್ತಿರುವ ವಿಚಾರ ಬಯಲಿಗೆ ಬಂದಿದೆ.  ಖಾಸಗಿ ಅಲ್ಕೋ ಹಾಲ್ ಮೀಟರ್ ಇಟ್ಕೊಂಡು ವಾಹನ ಸವಾರರ ಬಳಿ ಸುಲಿಗೆ ಮಾಡುತ್ತಿದ್ದರು.

ಅಶೋಕ ನಗರ ಸಂಚಾರಿ ಪೊಲೀಸ್ ಠಾಣಾ  ಎಎಸ್ಐ ಹಾಗೂ ಇಬ್ಬರು ಪೇದೆ ಗಳಿಂದ ವಸೂಲಿ ದಂಧೆ ಕೇಳಿ ಬಂದಿದೆ. ವಿವೇಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಗಿಲೂ ಜಂಕ್ಷನ್ ಬಳಿ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಎಎಸ್ ಐ ಮುನಿಯಪ್ಪ, ಗಂಗರಾಜು ,ನಾಗರಾಜ್ ವಸೂಲಿ ದಂಧೆಯಲ್ಲಿ ಇದ್ದರು.

ಕುಡಿದು ವ್ಯಕ್ತಿಗೆ ಚಾಕು ಹಾಕಿದ ದಿನಪತ್ರಿಕೆ ಉದ್ಯೋಗಿ

ಕೆಲಸದ ಸಮಯದಲ್ಲಿ ಅಲ್ಲದೇ ಖಾಸಗಿ ಅಲ್ಕೋ ಮೀಟರ್ ಇಟ್ಕೊಂಡು ವಾಹನ ಸವಾರರ ಬಳಿ ವಸೂಲಿ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಕಳೆದ ಒಂದು ತಿಂಗಳಿಂದ ಇದೇ ರೀತಿ ಮಾಡುತ್ತಿದ್ದರು. ಇದಾದ ನಂತರ ಪೊಲೀಸರ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡಿ ಅಮಾನತು ಆದೇಶ ನೀಡಲಾಗಿದೆ.

ಕೋರ್ಟಿಗೆ ಹೋದ್ರೆ 15 ಸಾವಿರ ಆಗುತ್ತೆ ನಮ್ಮ ಬಳಿ ಹಣ ಕಟ್ಟಿದ್ರೆ ಕಡಿಮೆ ಆಗುತ್ತೆಂದು ಅಂತ ಚಾಲಕರಿಗೆ ಬೆದರಿಕೆ ಹಾಕಿ ಪೆಟಿಎಂ ಹಾಗೂ ನಗದು ಹಣ ಪಡೆಯುತ್ತಿದ್ದರು ಎಂಬುದು ಬಹಿರಂಗವಾಗಿದೆ.

ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಈ ಪೊಲೀಸ್ ತಂಡದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.  ವಸೂಲಿ ಮಾಡಿದ 32 ಸಾವಿರ ನಗದು ಹಾಗೂ ಖಾಸಗಿ ಅಲ್ಕೋಹಾಲ್ ಮೀಟರ್ ವಶಕ್ಕೆ ಪಡೆಯಲಾಗಿದೆ. ವಿವೇಕ ನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!