ಇತ್ತಿಚೆಗೆ ಬೆಳಗಾವಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ 26 ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ (ಜೂ.29): ಇತ್ತಿಚೆಗೆ ಬೆಳಗಾವಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ 26 ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಡಿಸಿಪಿ ರವೀಂದ್ರ ಗಡಾದಿ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ ಮೂವರು ರೌಡಿಗಳ ಮನೆಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದೆ.
ರೌಡಿಗಳಾದ ರುಕ್ಮಿಣಿ ನಗರದ ನಿವಾಸಿ ಶ್ರೀಧರ ತಳವಾರ (29), ಮಹಾದ್ವಾರ ರಸ್ತೆಯ ನಿವಾಸಿ ವಿನಾಯಕ ಪ್ರಧಾನ (45), ಖಂಜರ್ ಗಲ್ಲಿ ನಿವಾಸಿ ಅಲ್ತಾಫ್ ಸುಬೇದಾರ(36) ಮನೆಯಲ್ಲಿ ಮಾರಕಾಸ್ತ್ರಗಳು ಸಿಕ್ಕಿವೆ. ಇನ್ನು ಮಾಳಮಾರುತಿ, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪಿ ರೌಡಿಗಳ ಮನೆಯಲ್ಲಿ ತಲ್ವಾರ್ ಸೇರಿ ಮಾರಕಾಸ್ತ್ರ ಪತ್ತೆಯಾದ ಹಿನ್ನಲೆಯಲ್ಲಿ ರೌಡಿಗಳ ವಿರುದ್ಧ ಕೇಸ್ ದಾಖಲಿಸಿ ಪೊಲೀಸರು ಕ್ರಮ ಕೈಗೊಂಡು ಮೂವರು ರೌಡಿಗಳನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ಬಂಧನ: ಪಿಸ್ತೂಲ್, 5 ಜೀವಂತ ಗುಂಡು ಸೀಝ್
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ: ಜೈಲಿಗೆ ಹೋಗಿಬಂದರೂ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಕುಖ್ಯಾತ ರೌಡಿಶೀಟರ್ ನನ್ನು ಬಾಗಲಗುಂಟೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಗಳ ರೌಡಿಶೀಟರ್ ಆಗಿರುವ ಚೇತನ್ ಕುಮಾರ್ ಆಲಿಯಾಸ್ ಚಿಕ್ಕ ಚೇತು ವಿರುದ್ಧ ಗೂಂಡಾ ಕಾಯ್ದೆಯಡಿ ಜೈಲಿಗಟ್ಟಿದ್ದಾರೆ. ಅನ್ನಪೂರ್ಣೆಶ್ವರಿ ನಗರ, ಮಾದನಾಯಕಹಳ್ಳಿ, ಸೋಲದೇವನಹಳ್ಳಿ ಹಾಗೂ ಚಂದ್ರಾಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ ಕೊಲೆಯತ್ನ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.
ಬಳ್ಳಾರಿಯಲ್ಲಿ ಮಟ್ಕಾ ಬುಕ್ಕಿಗಳ ಗಡಿಪಾರು: ಬೆಚ್ಚಿಬಿದ್ದ ರೌಡಿಶೀಟರ್‌ಗಳು..!
2012ರಿಂದ 2022ರವರೆಗೆ 10ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿಬಂದು ಮತ್ತೆ ಕ್ರೈಂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಹಲವು ಬಾರಿ ನ್ಯಾಯಾಲಯ ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರೂ ಕೋರ್ಟ್ ಗೆ ಗೈರು ಹಾಜರಾಗಿದ್ದ. ರೌಡಿ ಆ್ಯಕ್ಟಿವಿಟಿಯಲ್ಲಿ ಸಕ್ರಿಯನಾಗಿದ್ದ ಚೇತು ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸರು ಕೊಲೆಯತ್ನ ಪ್ರಕರಣ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.