ಇನ್ನೊಬ್ಬ ಬೆಳಗಾವಿ ಕಂಟ್ರಾಕ್ಟರ್‌ ಲಾಡ್ಜ್‌ನಲ್ಲಿ ಆತ್ಮಹತ್ಯೆ: ಕಾರಣ ಮಾತ್ರ ನಿಗೂಢ..?

By Girish Goudar  |  First Published Apr 28, 2022, 4:43 AM IST

*  ಬೆಳಗಾವಿ ಗುತ್ತಿಗೆದಾರ ಬಸವರಾಜ್‌ ಬಾಳೆಹೊನ್ನೂರು ಲಾಡ್ಜ್‌ನಲ್ಲಿ ಆತ್ಮಹತ್ಯೆ
*  ಪೊಲೀಸರಿಗೆ ಮಾಹಿತಿ ನೀಡಿದ್ದ ಲಾಡ್ಜ್‌ ಸಿಬ್ಬಂದಿ
*  ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ


ಬಾಳೆಹೊನ್ನೂರು(ಏ.28): ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil) ಉಡುಪಿ ಲಾಡ್ಜ್‌ನಲ್ಲಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಅದೇ ಜಿಲ್ಲೆಯ ಮತ್ತೋರ್ವ ಗುತ್ತಿಗೆದಾರ ಬಾಳೆಹೊನ್ನೂರಿನ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ನಡೆದಿದೆ.

ಬೆಳಗಾವಿ(Belagavi) ಮೂಲದ ಬಸವರಾಜ್‌ (47) ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ. ಪಟ್ಟಣದ ಖಾಸಗಿ ಲಾಡ್ಜ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ಕೊಠಡಿ ಪಡೆದಿದ್ದ ಬಸವರಾಜ್‌(Basavaraj) ಬುಧವಾರ ಬೆಳಗ್ಗೆ ವೇಳೆಗೆ ಕೊಠಡಿಯಿಂದ ಹೊರಬಂದಿದ್ದ ಎನ್ನಲಾಗಿದೆ. ಆ ಬಳಿಕ ಕೊಠಡಿ ಒಳಗೆ ತೆರಳಿದವರು ಪುನಃ ವಾಪಸ್‌ ಬಂದಿಲ್ಲ ಎಂದು ತಿಳಿದುಬಂದಿದೆ.

Tap to resize

Latest Videos

Chamarajanagara ಶೀಲಶಂಕಿಸಿ ಪತಿಯ ಕಿರುಕುಳ, ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬುಧವಾರ ಮಧ್ಯಾಹ್ನದ ವೇಳೆಗೆ ಕೊಠಡಿ ಬಾಗಿಲು ತೆರೆಯದ್ದನ್ನು ಕಂಡ ಲಾಡ್ಜ್‌(Lodge) ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ(Police) ಮಾಹಿತಿ ನೀಡಿದರು. ಪೊಲೀಸರು ಬಂದು ಪರಿಶೀಲಿಸಿದಾಗ ಈತ ಲಾಡ್ಜ್‌ ಕೊಠಡಿಯ ಫ್ಯಾನ್‌ಗೆ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಸವರಾಜ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ಬೆಳಗಾವಿಯಿಂದ ಕುಟುಂಬಸ್ಥರು ಬಂದ ಬಳಿಕ ಆತ್ಮಹತ್ಯೆ ಕುರಿತು ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕುಟುಂಬಸ್ಥರು ಬಂದ ಬಳಿಕ ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

"

click me!