
ಶಿವಮೊಗ್ಗ (ಫೆ.29): ಬ್ಯೂಟಿ ಪಾರ್ಲರ್ ನಡೆಸುವ ಮಹಿಳೆಗೆ ಅಪರಿಚಿತರು ಬೈಕಿನಲ್ಲಿ ಹಿಂಬಾಲಿಸಿ ಚೂರಿ ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ.
ನಾಜೀಮಾ (38) ಚೂರಿ ಇರಿತದಿಂದ ಗಾಯಗೊಂಡಿರುವ ಮಹಿಳೆ. ಬುರ್ಖಾ ಧರಿಸಿದ್ದ ಮಹಿಳೆ. ಬಲ ತೋಳಿನ ಮೇಲ್ಭಾಗ ಚಾಕುವಿನ ಇರಿತದಿಂದ ಸಣ್ಣ ಗಾತ್ರದ ಗಾಯವಾಗಿದೆ. ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. ಅಪರಿಚಿತ ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದು ಹಿಂಬದಿ ಸವಾರ ಮಾಸ್ಕ್ ಹಾಕಿದ್ದನೆಂದು ಗಾಯಗೊಂಡ ಮಹಿಳೆ ಮಾಹಿತಿ ನೀಡಿದ್ದಾರೆ.
ಹೊಸನಗರದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ. ಎಂದಿನಂತೆ ಊಟಕ್ಕೆ ಮನೆಗೆ ಬಂದಿರುವ ಮಹಿಳೆ. ಊಟ ಮುಗಿಸಿ ಪಾರ್ಲರ್‌ಗೆ ಹೋಗುತ್ತಿದ್ದಾಗ ನಡೆದಿರುವ ಕೃತ್ಯ. ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಹೊರಟಿದ್ದ ವೇಳೆ ಮಹಿಳೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿರುವ ಆರೋಪಿಗಳು. ಹತ್ತಿರಬರುತ್ತಿದ್ದಂತೆ ಚಾಕುವಿನಿಂದ ದಾಳಿ ಮಾಡಿರುವ ದುಷ್ಕರ್ಮಿಗಳು. ಮಹಿಳೆಯ ಬಲಗೈ ತೋಳಿನ ಮೇಲೆ ಇರಿದು ಪರಾರಿಯಾಗಿದ್ದಾರೆ. ಅಪರಿಚಿತರ ಯಾಕೆ ದಾಳಿ ನಡೆಸಿದರು ಎಂಬ ಬಗ್ಗೆ ಸ್ಷಪ್ಟ ಮಾಹಿತಿ ಇಲ್ಲ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ ನಗರಕ್ಕೆ ನುಗ್ಗಿದ ಕರಡಿ: ವ್ಯಕ್ತಿ ಮೇಲೆ ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ