
ಧಾರವಾಡ (ಫೆ.29): ಮಲಗುವಾಗ ಮಗು ಅಳುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ವತಃ ತಂದೆಯೇ ಹೆಣ್ಣುಮಗುವನ್ನು ಗೋಡೆಗೆ ಎಸೆದು ರಾಕ್ಷಸಿ ಕೃತ್ಯ ಮೆರೆದ ಘಟನೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದ್ದು, ತಲೆಗೆಕ ತೀವ್ರ ಪೆಟ್ಟಾಗಿ ಒಂದು ವರ್ಷದ ಹೆಣ್ಣುಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಶಂಬುಲಿಂಗಯ್ಯ ಶಾಪುರಮಠ ಮಗುವನ್ನು ಗೋಡೆಗೆ ಎಸೆದಿರುವ ಪಾಪಿ ತಂದೆ. ಕಳೆದ ರಾತ್ರಿ ಮಗು ಮಲಗುವ ಸಮಯಕ್ಕೆ ಹಸಿವಿನಿಂದಲೋ, ಹೊಟ್ಟೆ ನೋವು ಮಗು ಅಳಲು ಶುರು ಮಾಡಿದೆ. ಮಗು ಅಳುತ್ತಿದ್ದರಿಂದ ನಿದ್ದೆಗೆ ಭಂಗವಾಗಿ ಕೋಪಗೊಂಡಿದ್ದ ಪಾಪಿ ತಂದೆ. ಅಳುವ ಮಗುವನ್ನು ಸಮಾಧಾನ ಪಡಿಸಲಾಗದೆ ಕೋಪದ ಕೈಗೆ ಬುದ್ಧಿ ಏಕಾಏಕಿ ಮಲಗಿದ್ದ ಮಗುವಿನ ಕಾಲು ಹಿಡಿದು ಎತ್ತಿ ಗೋಡೆಗೆ ಎಸೆದಿರುವ ಆರೋಪಿ. ಗೋಡೆಗೆ ಒಗೆದ ರಭಸಕ್ಕೆ ಮಗುವಿನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.
Family death: ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದು, ತಾನೂ ನೇಣಿಗೆ ಶರಣಾದ ತಾಯಿ
ಹೆತ್ತ ತಂದೆಯೇ ಮಗುವಿನ ಜೀವಕ್ಕೆ ಕುತ್ತು ತಂದಿದ್ದು ಸದ್ಯ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು. ತಂದೆಯ ಪೈಶಾಚಿಕೃತ್ಯಕ್ಕೆ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಗರಗ ಪೊಲೀಸ್ ಠಾಣೆಯಲ್ಲಿ ಶಂಬುಲಿಂಗಯ್ಯ ಶಾಪುರಮಠ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿ ಜೈಲಿಗೆ ದಬ್ಬಿದ್ದಾರೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯನ್ನ ನಡೆದ ಘಟನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ