ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ: ಗಂಗಾಧರಯ್ಯನ ಇತಿಹಾಸವೇ ಬೆಚ್ಚಿ ಬೀಳಿಸುತ್ತೆ!

Published : Apr 24, 2023, 11:11 AM ISTUpdated : Apr 24, 2023, 11:26 AM IST
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ತಿಮಿಂಗಲ: ಗಂಗಾಧರಯ್ಯನ ಇತಿಹಾಸವೇ ಬೆಚ್ಚಿ ಬೀಳಿಸುತ್ತೆ!

ಸಾರಾಂಶ

ಅಕ್ರಮ ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕ (ಎಡಿಟಿಪಿ) ಗಂಗಾಧರಯ್ಯ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಬೆಂಗಳೂರು (ಏ.24):  ಅಕ್ರಮ ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕ (ಎಡಿಟಿಪಿ) ಗಂಗಾಧರಯ್ಯ ಮನೆಯ ಮೇಲೆ ದಾಳಿ ಮಾಡಿದ್ದಾರೆ.  80 ಲಕ್ಷ ರೂ. ನಗದು ಹಣ, ಸುಮಾರು 50 ಲಕ್ಷ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಆದರೆ, ಈತನ ಇತಿಹಾಸ ಮಾತ್ರ ರಣ ರೋಚಕವಾಗಿದೆ.

ಮಾರುತಿ ನಗರ ಬಳಿಯ ಸತ್ಯನಾರಾಯಣ ಲೇಔಟ್ ನಲ್ಲಿರುವ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಲು ಹೋದರೂ ಕೂಡ 30 ನಿಮಿಷ ಬಾಗಿಲು ತೆರಯದೇ ಲೋಕಾಯುಕ್ತ ಸಿಬ್ಬಂದಿಯನ್ನು ಕಾಯಿಸಿದ್ದಾರೆ. ನಂತರ ಬಾಗಿಲು ತೆರೆದಿದ್ದು,  15 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧನೆ ಮಾಡಿದಾಗ ಬೆಳಗ್ಗೆ 9 ಗಂಟೆ ವೇಳೆಗೆ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಂಗ್ರಹಣೆ ಮಾಡಿಟ್ಟಿರುವುದು ಪತ್ತೆಯಾಗಿದೆ. 

Bengaluru: ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯ ಆತ್ಮಹತ್ಯೆ: ವೈಯಕ್ತಿಕ ಕಾರಣ

ಪಾರ್ಕಿಂಗ್‌ ಜಾಗದಲ್ಲಿ ಆಸ್ತಿಗಳ ದಾಖಲೆ: ಇನ್ನು ಲೋಕಾಯುಕ್ತ ದಾಳಿಯ ವೇಳೆ ಮನೆಯಲ್ಲಿ ಸುಮಾರು 80 ಲಕ್ಷ ನಗದು ಹಣ, ಚಿನ್ನಾಭರಣ,ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಸುಮಾರು 50 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಜೊತೆಗೆ ಹಲವು ದೇಶಗಳ ವಿದೇಶಿ ಕರೆನ್ಸಿ ಕೂಡ ಲಭ್ಯವಾಗಿವೆ. ಇನ್ನು ಅವರ ಯಲಹಂಕದಲ್ಲಿರುವ ಕಚೇರಿ, ಮಹಾಲಕ್ಷ್ಮೀ ಲೇಔಟ್ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಇನ್ನು ಮಾರುತಿನಗರದ ಮನೆಯ ಪಾರ್ಕಿಂಗ್ ಜಾಗದಲ್ಲಿ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಎಲ್ಲವನ್ನೂ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಇಲ್ಲಿದೆ ಗಂಗಾಧರಯ್ಯನ ಇತಿಹಾಸ: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಲೋಕಾಯುಕ್ತರು ದಾಳಿ ಮಾಡಿರುವ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಇತಿಹಾಸವೇ ರೋಚಕವಾಗಿದೆ. ಇವರು ಮೂಲತಃ ಬಿಬಿಎಂಪಿ ಸೇವೆಗೆ ಆಯ್ಕೆಯಾದ ಅಧಿಕಾರಿಯಲ್ಲ. ಮೂಲತಃ ಲೋಕೋಪಯೋಗಿ ಇಲಾಖೆ (PWD) ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಮಾತೃ ಇಲಾಖೆ PWDಯಿಂದ ಓಓಡಿ ಮೇಲೆ ಬಿಬಿಎಂಪಿಗೆ ಬಂದಿದ್ದರು. ಕೇವಲ 3 ವರ್ಷ ಅವಧಿಗೆ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿ ಮಾತೃ ಇಲಾಖೆಗೆ ಹೋಗಬೇಕು. ಆದರೆ ಕಳೆದ 12 ವರ್ಷಗಳಿಂದ ಬಿಬಿಎಂಪಿ ಟೌನ್ ಪ್ಲಾನಿಂಗ್ ನಲ್ಲೇ ಕೆಲಸ ಮಾಡಿಕೊಂಡು ಇದ್ದಾರೆ.

ಇದನ್ನೂ ಓದಿ: ಬೃಹತ್‌ ಟ್ರಕ್‌ಗಳ ಮುಖಾಮುಖಿ ಡಿಕ್ಕಿ: ಲಾರಿಗಳ ಮುಂಭಾಗ ಛಿದ್ರ ಛಿದ್ರ

ಪ್ರಭಾವ ಬಳಸಿಕೊಂಡು ವರ್ಗಾವಣೆ ತಡೆಯುತ್ತಿದ್ದ: ಬಿಬಿಎಂಪಿ ಅತ್ಯಂತ ಹೆಚ್ಚು ಆದಾಯವಿರುವ ವಲಯಗಳಾದ ಯಲಹಂಕ ವಲಯ, ಮಹಾದೇವಪುರ ವಲಯ ಹಾಗೂ ಪುನಃ ಯಲಹಂಕ ವಲಯಕ್ಕೆ ವರ್ಗಾವಣೆ ಆಗಿ ಕೆಲಸ ಮಾಡುತ್ತಿದ್ದರು. ಬಿಬಿಎಂಪಿಯಿಂದ ಮಾತೃ ಇಲಾಖೆಗೆ ಕಳುಹಿಸಲಿ ಹಿರಿಯ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರೂ ತನ್ನ ಪ್ರಭಾವವನ್ನು ಬಳಸಿಕೊಂಡು ಬಿಬಿಎಂಪಿ ಸೇವೆಯಲ್ಲಿಯೇ ಮುಂದುವರೆಯುತ್ತಿದ್ದನು. ಹೀಗಾಗಿ, ತನ್ನ ಪ್ರಭಾವ ಬಳಸಿ ಯಲಹಂಕ ವಲಯಕ್ಕೆ ವಾಪಸ್ ಬಂದಿದ್ದನು. ಲಂಚ ಪಡೆಯುತ್ತಿರುವ ಆರೋಪಗಳು ಬಂದಾಗ ಬೇರೆ ಕಡೆ ವರ್ಗಾವಣೆ ಮಾಡಿದರೆ, ಪುನಃ ಯಲಹಂಕ ವಲಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದನು. ಹೀಗೆ, ತನಗೆ ಹಿಡಿತವಿರುವ ವಲಯದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗ ಅವರನ್ನು ಬ್ಯಾಟರಾಯನಪುರ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು.

ನಗರ ಯೋಜನೆಯ ಅರ್ಜಿಗೆ ಲಂಚ ಕೊಟ್ಟರೆ ಮಾತ್ರ ಸಹಿ: ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಗಾಧರಯ್ಯ ಅವರು ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ಸಾರ್ವಜನಿಕರಿಂದ ಭಾರಿ ಪ್ರಮಾಣದಲ್ಲಿ ಲಂಚವನ್ನು ಪಡೆಯುತ್ತಿದ್ದರು ಎಂಬ ಆರೋಪಯೂ ಕೇಳಿಬಂದಿದೆ. ಇನ್ನು ಪ್ರತಿಯೊಂದು ಅರ್ಜಿಗೆ ಸಹಿ ಹಾಕಲು ಹಣ ಕೇಳುತ್ತಿದ್ದರು ಎಂಬ ಆರೋಪವಿದ್ದು, ಹಣ ಕೊಡದಿದ್ದರೆ ಯಾವುದಾದರೂ ಒಂದು ತಕರಾರು ಇರುವುದನ್ನು ತೋರಿಸಿ ವರ್ಷಾನುಗಟ್ಟಲೆ ಕಡತಗಳಿಗೆ ಸಹಿ ಹಾಕದೇ ಬಿಡಲಾಗುತತಿತ್ತು. ಲಂಚ ವಸೂಲಿಗೆ ಕೆಲವು ಮಧ್ಯವರ್ತಿಗಳನ್ನು ಕೂಡ ಇಟ್ಟುಕೊಂಡಿದ್ದರೆಂದ ಆರೋಪವೂ ಕೇಳಿಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ