ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ: ಮಾಜಿ ಕಾರ್ಪೊರೇಟರ್ ಬಂಧನ

Published : Feb 14, 2024, 11:03 AM IST
ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ: ಮಾಜಿ ಕಾರ್ಪೊರೇಟರ್ ಬಂಧನ

ಸಾರಾಂಶ

ನಿನ್ನೆ ರಾತ್ರಿ 11:1 ನಿಮಿಷಕ್ಕೆ ಆರೋಪಿ ಪದ್ಮರಾಜ್ ಮಾಜಿ ಸಚಿವ ಕೆ. ಗೋಪಾಲಯ್ಯರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದರಂತೆ. ಜತೆಗೆ ಅವಾಚ್ಯ ಶಬ್ಧಗಳಿಂದ ಪದ್ಮರಾಜ್ ನಿಂದಿಸಿದ್ದರು. 

ಬೆಂಗಳೂರು(ಫೆ.14):  ಮಾಜಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಾಜಿ ಕಾರ್ಪೊರೇಟರ್ ಪದ್ಮರಾಜ್ ಎಂಬಾತನೇ ಮಾಜಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿ ಇದೀಗ ಪೊಲೀಸರು ಅತಿಥಿಯಾಗಿದ್ದಾನೆ. ಪದ್ಮರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕೊಲೆ ಬೆದರಿಕೆ ಬಂದ ಹಿನ್ನಲೆಯಲ್ಲಿ ಕೆ. ಗೋಪಾಲಯ್ಯ ಅವರು ಸ್ಪೀಕರ್ ಯು.ಟಿ. ಖಾದರ್‌ ಅವರಿಗೆ ದೂರು ನೀಡಿದ್ದರು. ಪದ್ಮರಾಜ್ ಬೆದರಿಕೆ ಬಗ್ಗೆ ಸ್ಪೀಕರ್ ಕಚೇರಿಗೆ ತೆರಳಿ ಗೋಪಾಲಯ್ಯ ದೂರು ನೀಡಿದ್ದಾರೆ. ಅಧಿವೇಶನ ನಡೆಯುತ್ತಿರುವ ಕಾರಣ ಸ್ಪೀಕರ್ ವ್ಯಾಪ್ತಿಯೊಳಗೆ ವಿಧಾನಸಭೆ ಸದಸ್ಯರು ಬರ್ತಾರೆ. ಹಾಗಾಗಿ ಗಂಭೀರವಾಗಿ ಪ್ರಕರಣ ಪರಿಗಣಿಸಲು ಗೋಪಾಲಯ್ಯ ಮನವಿ ಮಾಡಿಕೊಂಡಿದ್ದಾರೆ. 

ರಾಮನಗರ: ಆಸ್ತಿಗಾಗಿ ಮಗನಿಂದಲೇ ಹೆತ್ತ ತಾಯಿ ಮೇಲೆ ಹಲ್ಲೆ

ನಿನ್ನೆ ರಾತ್ರಿ 11:1 ನಿಮಿಷಕ್ಕೆ ಆರೋಪಿ ಪದ್ಮರಾಜ್ ಮಾಜಿ ಸಚಿವ ಕೆ. ಗೋಪಾಲಯ್ಯರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದಿದ್ದರಂತೆ. ಜತೆಗೆ ಅವಾಚ್ಯ ಶಬ್ಧಗಳಿಂದ ಪದ್ಮರಾಜ್ ನಿಂದಿಸಿದ್ದರು.  ಈ ಹಿನ್ನೆಲೆಯಲ್ಲಿ ತಡರಾತ್ರಿ ಮಾಜಿ ಸಚಿವ ಗೋಪಾಲಯ್ಯ ದೂರು ದಾಖಲಿಸಿದ್ದರು. ಪದ್ಮರಾಜ್ ವಿರುದ್ಧ ದೂರು ದಾಖಲಿಸಿ ಬಂಧನ ಮಾಡುವಂತೆ ಆಗ್ರಹಿಸಿದ್ದರು. ತಡ ರಾತ್ರಿಯೇ ಪದ್ಮರಾಜ್ ಮನೆ ಬಳಿ ಪೊಲೀಸರು ತೆರಳಿದ್ದರು. ಡೋರ್ ಓಪನ್ ಮಾಡದೇ ಪದ್ಮರಾಜ್ ತಲೆ ಮರೆಸಿಕೊಂಡಿದ್ದ, ಬೆಳಿಗ್ಗೆ ಡೋರ್ ಓಪನ್ ಮಾಡುತ್ತಿದ್ದಂತೆ ಪದ್ಮರಾಜ್‌ನನ್ನ ಪೊಲೀಸರು ಬಂಧಿಸಿದ್ದಾರೆ. 

ಪದ್ಮರಾಜ್‌ ವಿರುದ್ಧ 504, 506 ಅಡಿ ಕೇಸ್ ದಾಖಲಾಗಿದೆ. ಕೊಲೆ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ನೋಟಿಸ್ ಕಳುಹಿಸುವ ಸಾಧ್ಯತೆ ಇದೆ. ಠಾಣಾ ಬೇಲ್ ನೀಡಿ ನೋಟೀಸ್ ನೀಡುವ ಸಾಧ್ಯತೆ ಇದ್ದು, ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟೀಸ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ಕೊಲೆ ಪ್ರಕರಣ, ಜೈಲಾಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಸಿದ ಆರೋಪ, ನ್ಯಾಯಾಂಗ ನಿಂದನೆ ಅರ್ಜಿ
ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್