ಮಂಡ್ಯದಲ್ಲಿ ಅತ್ಯಾಚಾರ ಎಸಗಿ ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ

Published : May 15, 2023, 11:42 AM ISTUpdated : May 15, 2023, 12:20 PM IST
ಮಂಡ್ಯದಲ್ಲಿ ಅತ್ಯಾಚಾರ ಎಸಗಿ ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ

ಸಾರಾಂಶ

ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಗಂಗಾ (38) ಕೊಲೆಯಾದ ದುರ್ದೈವಿ.

ಮಂಡ್ಯ (ಮೇ.15): ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಗಂಗಾ (38) ಕೊಲೆಯಾದ ದುರ್ದೈವಿ. ಇವರು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ನಿಮಿಷಾಂಬ ದೇವಾಲಯದ ಬಳಿಯ ಕಾವೇರಿ ನದಿಯಲ್ಲಿ ಕಾಸು ಹೆಕ್ಕುವ ಕಾಯಕವನ್ನು ಮಾಡುತ್ತಿದ್ದರು. 

ಅಲ್ಲದೇ ಇವರು ಮೈಸೂರು – ಬೆಂಗಳೂರು ಮೇಲ್ಸೇತುವೆಯ ಕೆಳಗೆ ತಮ್ಮ ಗುಂಪಿನೊಂದಿಗೆ ವಾಸಿಸುತ್ತಿದ್ದರು. ಇವರ ಗುಂಪಿನ ಸದಸ್ಯರೆಲ್ಲರೂ ನಿರಾಶ್ರಿತರಾಗಿದ್ದು, ಮಹಿಳೆಯ ಹತ್ಯೆಯ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಮಹಿಳೆ ಸಂಪರ್ಕದಲ್ಲಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga: ಜಮೀನು ವಿವಾದ: ಮಹಿಳೆ ಮೇಲೆ ಹಲ್ಲೆ, ಮನೆ ಧ್ವಂಸ

ಇವಿಎಂ ಕಂಟ್ರೋಲ್‌ ಯೂನಿಟ್‌ ಒಡೆದು ಹಾಕಿದ್ದ ವ್ಯಕಿ ಬಂಧನ: ಮತದಾನ ಮಾಡಲು ಬಂದ ವೇಳೆ ಇವಿಎಂ ಕಂಟ್ರೋಲ್‌ ಯೂನಿಟ್‌ ಒಡೆದು ಹಾಕಿದ್ದ ವ್ಯಕ್ತಿಯ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಹೂಟಗಳ್ಳಿ ನಿವಾಸಿ ಮಾದೇಗೌಡ ಎಂಬವರ ಪುತ್ರ ಶಿವಮೂರ್ತಿ ಬಂಧಿತ ಆರೋಪಿ. ಈತ ಮೇ 10ರಂದು ನಡೆದ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಸಂಖ್ಯೆ-40ರಲ್ಲಿ ಮತದಾನ ಮಾಡಲು ತೆರಳಿದ್ದ. 

ಜೆಡಿಎಸ್‌-ಕಾಂಗ್ರೆಸ್‌ ಒಳಮೈತ್ರಿ ನನ್ನ ಸೋಲಿಗೆ ನಾಂದಿ: ಸಿ.ಟಿ.ರವಿ

ಸಾಲಿನಲ್ಲೆ ನಿಂತು ಮತ ಹಾಕಲು ಮತಗಟ್ಟೆಯೊಳಕ್ಕೆ ಬಂದಿದ್ದ ಆತ ಬೆರಳಿಗೆ ಶಾಯಿ ಹಾಕಿಸಿಕೊಂಡ ಬಳಿಕ ಏಕಾಏಕಿ ಟೇಬಲ್‌ ಮೇಲೆ ಇಟ್ಟಿದ್ದ ಇವಿಎಂ ಯಂತ್ರದ ಕಂಟ್ರೋಲ್‌ ಯೂನಿಟ್‌ ಅನ್ನು ಕಿತ್ತು ನೆಲದ ಮೇಲೆ ಎಸೆದು, ಒಡೆದು ಹಾಕಿದ್ದ ಶಿವಮೂರ್ತಿಯ ಈ ವಿಚಿತ್ರ ವರ್ತನೆ ಕಂಡು ಚುನಾವಣಾ ಸಿಬ್ಬಂದಿ ಬೆಚ್ಚಿಬಿದ್ದರು. ಕೂಡಲೇ ಸ್ಥಳದಲ್ಲಿದ್ಧ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಜನತಾ ಪ್ರಾತಿನಿಧ್ಯ ಅಧಿನಿಯಮ ಅಡಿಯಲ್ಲಿ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!