ಮೊಮ್ಮಗಳ ಮೇಲೆಯೇ ಅತ್ಯಾಚಾರ : 70 ವರ್ಷದ ಮುದುಕನಿಗೆ 20 ವರ್ಷ ಜೈಲು

Published : Feb 07, 2023, 08:24 PM IST
ಮೊಮ್ಮಗಳ ಮೇಲೆಯೇ ಅತ್ಯಾಚಾರ : 70 ವರ್ಷದ ಮುದುಕನಿಗೆ 20 ವರ್ಷ ಜೈಲು

ಸಾರಾಂಶ

ತನ್ನ ಮೊಮ್ಮಗಳಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರ ಮಾಡಿದ್ದ 70ರ ವೃದ್ಧನಿಗೆ ಕೋರ್ಟ್​​ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಬೆಂಗಳೂರಿನ ಎಫ್​​ಟಿಎಸ್​​ಸಿ  1ನೇ ಕೋರ್ಟ್​​ ನ ನ್ಯಾಯಾಧೀಶೆ ಕೆ.ಎನ್​​.ರೂಪ ಈ ಆದೇಶ ಮಾಡಿದ್ದಾರೆ.

ಬೆಂಗಳೂರು: ತನ್ನ ಮೊಮ್ಮಗಳಿಗೆ ಅಶ್ಲೀಲ ವೀಡಿಯೋ ತೋರಿಸಿ ಅತ್ಯಾಚಾರ ಮಾಡಿದ್ದ 70ರ ವೃದ್ಧನಿಗೆ ಕೋರ್ಟ್​​ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಬೆಂಗಳೂರಿನ ಎಫ್​​ಟಿಎಸ್​​ಸಿ  1ನೇ ಕೋರ್ಟ್​​ ನ ನ್ಯಾಯಾಧೀಶೆ ಕೆ.ಎನ್​​.ರೂಪ ಈ ಆದೇಶ ಮಾಡಿದ್ದಾರೆ.  20 ವರ್ಷ ಜೈಲು ಜೊತೆಗೆ 1 ಲಕ್ಷದ 35 ಸಾವಿರ ದಂಡವನ್ನೂ ಕೋರ್ಟ್​ ವಿಧಿಸಿದೆ. ಜೈಲು ಸೇರಿರುವ ಆರೋಪಿ ರಮೇಶ್​​ ತನ್ನ ಮೊಮ್ಮಗಳ ಮೇಲೆ ಸತತ ಐದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರು ದಾಖಲಿಸಲಾಗಿತ್ತು. ಕುಮಾರಸ್ವಾಮಿ ಲೇಔಟ್​ (Kumaraswamy Layout) ಪೊಲೀಸರು ಪ್ರಕರಣ ದಾಖಲಿಸಿಕೊಂಡು 11 ಮಂದಿ ಸಾಕ್ಷಿದಾರರ ಹೇಳಿಕೆ ಪಡೆದು ಆರೋಪಪಟ್ಟಿ ಸಲ್ಲಿಸಿದ್ದರು.

ಸಂತ್ರಸ್ತ ಬಾಲಕಿ (Victim child) ಆರೋಪಿಗೆ ಸ್ವಂತ ಮೊಮ್ಮಗಳಾಗಿದ್ದು, ಆಕೆಯ ಮೇಲೆ 3ನೇ ತರಗತಿಯಿಂದ 8ನೇ ತರಗತಿವರೆಗೂ ಲೈಂಗಿಕ ದೌರ್ಜನ್ಯ ಎಸಗಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಮ್ಮಗಳಿಗೆ ರಮೇಶ್​​ ಮೊಬೈಲ್​ನಲ್ಲಿ ಅಶ್ಲೀಲ ಹಾಗೂ ಬೆತ್ತಲೆ ವಿಡಿಯೋ ತೊರಿಸಿ ಲೈಂಗಿಕವಾಗಿ ಪ್ರಚೋದಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Sexually harrassment) ಎಸಗಿದ್ದ. ಈ ವಿಷಯ ಯಾರಿಗಾದರೂ ಹೇಳಿದ್ರೆ, ನಿನ್ನ ತಂದೆಯನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. 

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

ಈ ಸಂಬಂಧ ಸಾಕ್ಷಿಗಳನ್ನ ಕಲೆ ಹಾಕಿದ್ದ ಪೊಲೀಸರು ಕೋರ್ಟ್​​ಗೆ ಆರೋಪಪಟ್ಟಿ (Chargesheet) ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಫಾಸ್ಟ್​​ಟ್ರಾಕ್​ ಕೋರ್ಟ್​​ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ​​  ಆರೋಪಿಯಿಂದ ವಸೂಲಿ ಮಾಡಿದ ದಂಡದ ಜೊತೆಗೆ ಬಾಲಕಿಗೆ 7 ಲಕ್ಷ ರೂಪಾಯಿ ಪರಿಹಾರ ನೀಡಿದ ಕೋರ್ಟ್​​, 7 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನ ಡಿಎಲ್​ಎಸ್​ಎ ನಿಂದ ಬಾಲಕಿಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ಪರ ಅಭಿಯೋಜಕರಾಗಿ ಶ್ರೀಮತಿ. ಪಿ. ಕೃಷ್ಣವೇಣಿ (Krishnaveni) ವಾದಿಸಿದ್ದರು. 

ವಿದ್ಯಾರ್ಥಿನಿ ಮೇಲೆ ಇನ್ಸ್ಟಾಗ್ರಾಮ್‌ ಗೆಳೆಯನಿಂದ ರೇಪ್: ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಶೇರ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು