ನಕಲಿ‌ ಎನ್ಓಸಿ ತಯಾರು, ಲಕ್ಷ ಲಕ್ಷ ಹಣ ಸುರಿದು ಕಾರು ಕೊಂಡವರಿಗೆ ಪಂಗನಾಮ

By Gowthami KFirst Published Dec 23, 2022, 7:36 PM IST
Highlights

ಓರ್ವ ಕಾರ್ ಡೀಲರ್, ಮತ್ತೋರ್ವ ಖಾಸಗಿ ಬ್ಯಾಂಕ್ ನ ಮಾಜಿ ಉದ್ಯೋಗಿ. ಈ ಜೋಡಿ ಅಂತಿಂಥ ಜೋಡಿ ಅಲ್ವೇ ಅಲ್ಲ. ಇವ್ರನ್ನ ನಂಬಿದವ್ರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ದುಡ್ಡು ಸುರಿದವ್ರು ಕಣ್ಣೀರು ಹಾಕೊ ಸ್ಥಿತಿ ಉಂಟಾಗಿದೆ. ಇಲ್ಲಿದೆ ಇಲ್ಲಿದೆ ಇಂಟ್ರೆಸ್ಟಿಂಗ್  ಸುದ್ದಿ.

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಡಿ.23): ಓರ್ವ ಕಾರ್ ಡೀಲರ್, ಮತ್ತೋರ್ವ ಖಾಸಗಿ ಬ್ಯಾಂಕ್ ನ ಮಾಜಿ ಉದ್ಯೋಗಿ. ಈ ಜೋಡಿ ಅಂತಿಂಥ ಜೋಡಿ ಅಲ್ವೇ ಅಲ್ಲ. ಇವ್ರನ್ನ ನಂಬಿದವ್ರು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ದುಡ್ಡು ಸುರಿದವ್ರು ಕಣ್ಣೀರು ಹಾಕೊ ಸ್ಥಿತಿ ಉಂಟಾಗಿದೆ. ಪ್ರಭಾಕರ್ ಕಾರು ಮಾರಾಟ ಮಾಡಿಸೊ ಬ್ರೋಕರ್ ಈ ಕಿರಣ ಖಾಸಗಿ ಬ್ಯಾಂಕ್ ನ ಮಾಜಿ ಉದ್ಯೋಗಿ ಕೋಟಿಯಷ್ಟು ಸಾಲ ಮಾಡಿಕೊಂಡಿದ್ದ ಪ್ರಭಾಕರ್ ಹೇಗಾದ್ರು ಮಾಡಿ ದುಡ್ಡು ಮಾಡೊ ಹುಚ್ಚಿಗೆ ಬಿದ್ದಿದ್ದ. ಇನ್ನೂ ಕೆಲಸ ಬಿಟ್ಟಿದ್ದ ಕಿರಣ್ ಗೂ ಹಣ ಮಾಡೊ ಆಸೆ ಹಾಗಾಗಿ ಇಬ್ಬರು ಸೇರಿಕೊಂಡು ನಕಲಿ ಎನ್ ಓ ಸಿ ತಯಾರು ಮಾಡಿ ಕಾರು ಮಾರಾಟ ಮಾಡಿ ಅದ್ರಿಂದ ದುಡ್ಡು ಮಾಡೋಕೆ ಮುಂದಾಗಿದ್ರು ಆದ್ರೆ ಗ್ರಹಚಾರ ಕೆಟ್ಟಿತ್ತು ನೋಡಿ. ಈ ಇಬ್ಬರು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾಗಾದ್ರೆ ಇವ್ರು ಸೆಕೆಂಡ್ ಹ್ಯಾಂಡ್ ಕಾರುಗಳ ಎನ್ಓಸಿ ನಕಲು ಮಾಡಿ ಹೇಗೆ ಮಾರಾಟ ಮಾಡ್ತಿದ್ರು ಅನ್ನೋದೆ ಸಖತ್ ಇಂಟರಸ್ಟಿಂಗ್ ಅದನ್ನೇ ಹೇಳ್ತಿವಿ ನೋಡಿ. ಬ್ರೋಕರ್ ಆಗಿರುವ ಪ್ರಭಾಕರ್ ಗೆ ಕಾರು ಮಾರಾಟ ಮಾಡೊ ಜನಗಳ ಸಂಪರ್ಕ ಸುಲಭವಾಗಿ ಸಿಗ್ತಾ ಇತ್ತು. ಅದ್ರಲ್ಲಿ ಈ ಇಎಂಐ ಕಟ್ಟಲಾಗದೆ ಸಂಕಷ್ಟದಲ್ಲಿರೋರನ್ನ ಟಾರ್ಗೆಟ್ ಮಾಡ್ತಿದ್ದ‌. ಉದಾಹರಣೆಗೆ ಒಬ್ಬ ವ್ಯಕ್ತಿ ಮೂರ್ನಾಲ್ಕು ವರ್ಷದ ಹಿಂದೆ ಒಂದು ಕಾರನ್ನ 25 ಲಕ್ಷ ಕೊಟ್ಟು ಖರೀದಿ ಮಾಡಿದ್ದ ಅನ್ಕೊಳ್ಳಿ.

ಹಾವೇರಿ ಜಿಲ್ಲಾ ಪೊಲೀಸರ ಭರ್ಜರಿ ಬೇಟೆ, ನಾಲ್ವರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಸದ್ಯ ಆ ಕಾರಿನ ಮೌಲ್ಯ 15 ಲಕ್ಷ ಇರುತ್ತೆ ಎಂತಾದರೆ 12 ಲಕ್ಷ ದಷ್ಟು ಇಎಂಐ ಬ್ಯಾಂಕ್ ನಲ್ಲಿ ಇನ್ನೂ ಪೆಂಡಿಂಗ್ ಇರತ್ತೆ ಅಂತಹ ಮಾಲೀಕರನ್ನ ಟಾರ್ಗೆಟ್ ಮಾಡ್ತಿದ್ದ ಆರೋಪಿ 3 ಲಕ್ಷ ಕೊಟ್ಟು ನಾನೇ ಉಳಿದ 12 ಲಕ್ಷ ಇಎಂಐ ಕಟ್ಟಿಕೊಳ್ತಿನಿ ಎಂದು ಪತ್ರಗಳಿಗೆ ಸಹಿ ಮಾಡಿಸಿ ಕಾರನ್ನ ಪಡೆದುಕೊಳ್ತಿದ್ದ. ನಂತರ ಕಿರಣ್ ಸಹಾಯದ ಮೂಲಕ ನಕಲಿ ಎನ್ಓಸಿ ತಯಾರು ಮಾಡ್ತಿದ್ದ. ಅದನ್ನ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳೋರಿಗೆ ಈ ಕಾರಿನ ಮೇಲೆ ಯಾವುದೇ ಲೋನ್ ಇಲ್ಲ ಎಂದು 15 ಲಕ್ಷಕ್ಕೆ ಮಾರಾಟ ಮಾಡಿಬಿಡ್ತಿದ್ದ. ಕೆಲವರು ಸೆಕೆಂಡ್ ಹ್ಯಾಂಡ್ ಕಾರಿನ ಮೇಲೂ ಲೋನ್ ಮಾಡಿಸಿಕೊಳ್ತಿದ್ರು. ಹೀಗೆ ಮೋಸ ಮಾಡಿ ಕಾರು ಮಾರಾಟ ಮಾಡಿ ನಂತರ ಅವರ ಸಂಪರ್ಕಕ್ಕೆ ಸಿಗದೆ ಪರಾರಿಯಾಗ್ತಿದ್ರು.

CRIME NEWS: ಎರಡು ಹೆಣ ಉರುಳಿಸಿ ಪ್ರೇಯಸಿ ಜೊತೆ ಹೋಗಿದ್ದ: ಸ್ಕಾಚ್ ಬಾಟಲ್‌ನಿಂದ ತಗ್ಲಾಕಿಕೊಂಡ ಹಂತಕರು

ಇನ್ನೂ ಈ ಕಿರಣ ತಾನೇ ಖುದ್ದು ಎನ್ ಓ ಸಿ ತಯಾರು ಮಾಡ್ತಿದ್ದ. ಅಲ್ಲದೇ ಆರ್ ಟಿ ಓ ಗೆ ತೆರಳಿ ಅಧಿಕಾರಿಗಳ ಸಹಿ ಕೂಡ ಮಾಡಿಸಿಕೊಂಡು ಬರ್ತಿದ್ದನಂತೆ. ಇದನ್ನ ನಂಬಿ ಹಣ ಕೊಟ್ಟು ಕಾರು ಖರೀದಿ ಮಾಡಿದವ್ರು ಈಗ ದಿಕ್ಕೇ ತೋಚದಂತಾಗಿದ್ದಾರೆ. ಸದ್ಯ ಆರ್ ಟಿ ಓ ಅಧಿಕಾರಿಗಳ ಮೇಲೆಯೂ ಅನುಮಾನ ಮೂಡಿದ್ದು, ಬನಶಂಕರಿ ಠಾಣೆ ಪೊಲೀಸರು ತುಮಕೂರು, ಜಯನಗರ, ಇಂದಿರಾನಗರ ಆರ್ ಟಿ ಓ ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ. ಸಂಪೂರ್ಣ ತನಿಖೆ ಬಳಿಕವಷ್ಟೇ ಈ ವಂಚಕರ ಗ್ಯಾಂಗ್ ನಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಗೊತ್ತಾಗಲಿದೆ.

click me!