ಹಾವೇರಿ ಜಿಲ್ಲಾ ಪೊಲೀಸರು ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ನಗದು, ಐದು ಕಾರುಗಳು, ಒಂದು ಏರ್ ಗನ್, 6 ಮೊಬೈಲ್ ಫೋನ್ ಗಳು ಮತ್ತು 3 ಲ್ಯಾಪ್ ಟಾಪ್ ಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಹಾವೇರಿ (ಡಿ.23): ಹಾವೇರಿ ಜಿಲ್ಲಾ ಪೊಲೀಸರು ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ನಗದು, ಐದು ಕಾರುಗಳು, ಒಂದು ಏರ್ ಗನ್, 6 ಮೊಬೈಲ್ ಫೋನ್ ಗಳು ಮತ್ತು 3 ಲ್ಯಾಪ್ ಟಾಪ್ ಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಅಂತೋನಿ ಅಲಿಯಾಸ್ ಅಂಟಪ್ಪನ್(22 ವರ್ಷ), ಅಬ್ಬಾಸ್ ಇ.ಎಸ್ ಪಿರಾಯಿರಿ(38 ವರ್ಷ), ನಿಶಾದಬಾಬು ಅಲಿಯಾಸ್ ಬಾಬು.ಟಿ(47 ವರ್ಷ) ಮತ್ತು ಭರತಕುಮಾರ ಅಲಿಯಾಸ್ ಕುಟ್ಟಾ(29 ವರ್ಷ) ಎಂಧು ಗುರುತಿಸಲಾಗಿದೆ. ಈ ಗ್ಯಾಂಗ್ ಹವಾಲಾ ಹಣ ಸಾಗಣೆ ಮಾಡುವ ಮತ್ತು ಬಂಗಾರವನ್ನು ಕಳ್ಳಸಾಗಣೆ ಮಾಡುವ ವ್ಯಾಪಾರಿಗಳನ್ನು ಗುರಿಯಾಗಿಟ್ಟುಕೊಂಡು ಕೃತ್ಯ ಎಸುಗುತ್ತಿತ್ತು ಎಂಬುದಾಗಿ ತಿಳಿದುಬಂದಿದೆ.
ನಕಲಿ ಎನ್ಓಸಿ ತಯಾರು, ಲಕ್ಷ ಲಕ್ಷ ಹಣ ಸುರಿದು ಕಾರು ಕೊಂಡವರಿಗೆ ಪಂಗನಾಮ
undefined
ಹಾವೇರಿ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದು, ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಈ ಭರ್ಜರಿ ಭೇಟೆಯಾಡಿದ್ದಾರೆ. ಆರೋಪಿಗಳ ವಿರುದ್ಧ ಬ್ಯಾಡಗಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು. ಡಿವೈಎಸ್ಪಿ ಶಿವಾನಂದ ಚಲವಾದಿ, ಸಿಪಿಐಗಳಾದ ಸಿದ್ದಾರೂಢ ಬಡಿಗೇರ, ಸಂತೋಷ ಪಾಟೀಲ ನೇತೃತ್ವದ ತಂಡದ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.
Detected the case , recovered Rs 34.50 L. cash ;5 mobiles & hotspot dongles ;Air gun ;4 Cars ;arrested 4 offenders,total of Rs 1.08 Cr. property. pic.twitter.com/3SMhOQlxBA
— Hanumantharaya IPS (@hanumanthraya18)ಪೊಲೀಸರ ತಂಡ ಜಪ್ತಿ ಮಾಡಿದ ವಸ್ತುಗಳು
1. 34 ಲಕ್ಷ 50 ಸಾವಿರ ನಗದು ಹಣ.
2. ವಿವಿಧ ಕಂಪನಿಯ 5 ಕಾರುಗಳು.
3. ಒಂದು ಏರ್ ಗನ್, 6 ರೌಂಡ್ಸ್, 32 ಬಾಕ್ಸ್ ಪೆಲ್ಲೆಟ್ಸ್, 9 ಏರ್ ಕಾಂಪ್ರೇಸರ್.
4. 10 ಫಾಸ್ಟ್ ಟ್ಯಾಗ್ ಗಳು.
5. ಜಿಯೋ ಕಂಪನಿಯ 5 ವೈಫೈ ಡೋಂಗಲ್ ಗಳು.
6. ಎರಡು ಡಮ್ಮಿ ವಾಕಿಟಾಕಿಗಳು.
7. ಪ್ರೆಸ್, ಆಂಜನೇಯ ಫೋಟೋ ಇರುವ ರೇಡಿಯಂ ಸ್ಟಿಕ್ಕರ್ ಗಳು.
8. ನಾಲ್ಕು ಮಾಸ್ಕ್ ಗಳು, ನಾಲ್ಕು ಮಂಕಿ ಕ್ಯಾಪ್ ಗಳು.
9. ಎರಡು ಟೂ ಸೈಡ್ ಗೇಮ್ ಸ್ಟಿಕ್ಕರ್ ಗಳು.
10. ಒಂದು ಟಾರ್ಚ್.
11. ಆರು ಮೊಬೈಲ್ ಫೋನ್ ಗಳು.
12. ಮೂರು ಲ್ಯಾಪ್‌ಟಾಪ್ ಗಳು.
13. ಹತ್ತು ಮೊಬೈಲ್ ಚಾರ್ಜರ್ ಗಳು.
14. ನಾಲ್ಕು ಕಬ್ಬಿಣದ ರಾಡುಗಳು.
Udupi: 2 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಕದ್ದಿದ್ದ ಕಾರ್ಕಳ ಮನೆಗಳ್ಳರ ಬಂಧನ