ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಭಜರಂಗದಳ ಮುಖಂಡನ ಶವ ಪತ್ತೆ!

By Ravi Janekal  |  First Published Jan 12, 2023, 1:33 PM IST

ನೇತ್ರಾವತಿ ನದಿಯಲ್ಲಿ ಭಜರಂಗದಳದ ಮುಖಂಡನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸದ್ಯ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ಸೇತುವೆಯಲ್ಲಿ ದ್ವಿಚಕ್ರವಾಹನ ಪತ್ತೆಯಾದ ಹಿನ್ನೆಲೆ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಕೊಲೆಯೋ, ಅಪಘಾತವೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜ.12) : ನೇತ್ರಾವತಿ ನದಿಯಲ್ಲಿ ಭಜರಂಗದಳದ ಮುಖಂಡನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸದ್ಯ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. 

Tap to resize

Latest Videos

ದ.ಕ ಜಿಲ್ಲೆಯ ಬಂಟ್ವಾಳ(Bantwal) ತಾಲೂಕಿನ ಪಾಣೆಮಂಗಳೂರು(Panemangaluru) ನೇತ್ರಾವತಿ ನದಿ(Netravati river)ಯಲ್ಲಿ ಭಜರಂಗದಳ(Bhajarangadala) ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್(Gou rakshak pramuk) ರಾಜೇಶ್ ಪೂಜಾರಿ(Rajesh Poojary) (26) ಮೃತದೇಹ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. 

Shivamogga: ಭಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ತಲ್ವಾರ್ ಅಟ್ಯಾಕ್, ಜಸ್ಟ್ ಮಿಸ್!

ಸೇತುವೆಯಲ್ಲಿ ದ್ವಿಚಕ್ರವಾಹನ ಪತ್ತೆಯಾದ ಹಿನ್ನೆಲೆ ಸಂಶಯಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡ ಕಾರ್ಯಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ. ರಾಜೇಶ್ ಪೂಜಾರಿ ಸಾವಿನ ಬಗ್ಗೆ ಸ್ಥಳೀಯವಾಗಿ ಅನುಮಾನ ವ್ಯಕ್ತವಾಗಿದ್ದು, ಆತ್ಮಹತ್ಯೆ ಅಥವಾ ಅಪಘಾತವೋ ಎಂಬ ಬಗ್ಗೆ ಅನುಮಾನ ಮೂಡಿದೆ.

 ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ರಾಜೇಶ್ ಸಜೀಪದ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಹಳೆಯ ಪಾಣೆಮಂಗಳೂರು ಸೇತುವೆಗೆ ದ್ವಿಚಕ್ರವಾಹನ ಡಿಕ್ಕಿಯಾಗಿ ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿರಬಹುದಾ? ಎಂಬ ಸಂದೇಹ ವ್ಯಕ್ತವಾಗಿದೆ. 

ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಸಾಗರ ಬಂದ್ ಗೆ ಕರೆ: ಆರೋಪಿ ಬಂಧನಕ್ಕೆ 3 ತಂಡ ರಚನೆ

ದ್ವಿಚಕ್ರ ವಾಹನ ಅಪಘಾತವಾದ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ. ಅಥವಾ ಇನ್ನಾವುದೋ ಕಾರಣವಿರಬಹುದಾ? ಎಂಬ ಬಗ್ಗೆಯೂ ಪೋಲೀಸರು ತನಿಖೆಗೆ ಮುಂದಾಗಿದ್ದಾರೆ. ರಾಜೇಶ್ ಭಜರಂಗದಳದ ಜವಾಬ್ದಾರಿ ಹೊಂದಿದ್ದ ಮುಖಂಡನಾಗಿದ್ದು, ಹಲವು ಸಾಮಾಜಿಕ ‌ಮತ್ತು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

click me!