
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜು.25): ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸ್ತಾ ಇದ್ದ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ತಡೆಯೊಡ್ಡಿದ್ದು, ಪಾರ್ಟಿಯಲ್ಲಿ ತೊಡಗಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪಬ್‌ನಿಂದ ಹೊರಗೆ ಕಳುಹಿಸಿದ ಘಟನೆ ಮಂಗಳೂರಿನ ಬಲ್ಮಠ ಬಳಿ ನಡೆದಿದೆ.
ಮಂಗಳೂರಿನ ಬಲ್ಮಠದ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ಪಾರ್ಟಿಗೆ ಭಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು. ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿ ಆರೋಪಿಸಿ ಭಜರಂಗದಳ ತಡೆ ಒಡ್ಡಿದೆ. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಸುದ್ದಿಯಾಗಿದ್ದ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು, ಪದವಿ ವಿದ್ಯಾರ್ಥಿಗಳಿಂದ ಪಬ್‌ನಲ್ಲಿ ಮೋಜು ಮಸ್ತಿ ಹಿನ್ನೆಲೆ ತಡೆ ಒಡ್ಡಲಾಗಿದೆ.
ಹೆದ್ದಾರಿ ಹೊಂಡಕ್ಕೆ ಬಿದ್ದು ಬಲ ಗೈ ಮುರಿತ: ಪರೀಕ್ಷೆ ವಂಚಿತಳಾದ ವಿದ್ಯಾರ್ಥಿನಿ!
ಪಬ್ ಒಳ ಹೊಕ್ಕು ಪಾರ್ಟಿ ನಿಲ್ಲಿಸಿದ ಬಜರಂಗದಳದ ಕಾರ್ಯಕರ್ತರು, ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿ ಬಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದು, ಸದ್ಯ ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ತುಂಡುಡುಗೆ ತೊಟ್ಟು ಕುಡಿದು ವಿದ್ಯಾರ್ಥಿಗಳಿಂದ ಮೋಜು ಮಸ್ತಿ ಆರೋಪದ ಮೇಲೆ ಸುಮಾರು 30-40 ಬಜರಂಗದಳದ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ.
ಲಿಪ್ ಲಾಕ್ ವಿಡಿಯೋ ವೈರಲ್ ವೇಳೆಯೇ ಎಚ್ಚರಿಕೆ ನೀಡಿದ್ದ ಬಜರಂಗದಳ!: ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವರ್ತನೆಯ ವಿಡಿಯೋ ವೈರಲ್ ಆದಾಗಲೇ ಬಜರಂಗದಳ ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಕೃತ್ಯದ ಹಿಂದೆ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಅಡಗಿರುವ ಬಗ್ಗೆ ಸಂಶಯವಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿತ್ತು. ಇದೇ ಕಾಲೇಜಿನ ವಿದ್ಯಾರ್ಥಿನಿಯರು ಕೆಲ ತಿಂಗಳ ಹಿಂದೆ ಬೀದಿ ಹೊಡೆದಾಟ ಮಾಡಿದ್ದು, ಮಾದಕ ವಸ್ತು ಸೇವನೆ ಮಾಡಿ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ನಡೆದಿದೆ.
ನನ್ನ ತೇಜೋವಧೆ ವಿರುದ್ಧ ಮಾನನಷ್ಟಕೇಸ್: ಕಂಬಳ ‘ಉಸೇನ್ ಬೋಲ್ಟ್’ ಶ್ರೀನಿವಾಸ ಗೌಡ
ದೇಶ-ವಿದೇಶದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಮಂಗಳೂರಿಗೆ ಎಜುಕೇಶನ್ ಹಬ್ ಎಂಬ ಹೆಸರಿದ್ದು, ವಿದ್ಯಾರ್ಥಿಗಳ ಈ ಅನುಚಿತ ವರ್ತನೆಗೆ ಮಂಗಳೂರಿನ ಹೆಸರಿಗೆ ಕಳಂಕ ತರುತ್ತಿದೆ. ಈ ಕೃತ್ಯದ ಹಿಂದೆ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಅಡಗಿರುವ ಬಗ್ಗೆ ಸಂಶಯವಿದ್ದು, ಕೂಡಲೇ ಕಾಲೇಜಿಗಳ ಆಡಳಿತ ಮಂಡಳಿ ಕಾಲೇಜಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಎಂದು ಬಜರಂಗದಳ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಆಗ್ರಹಿಸಿದ್ದರು. ಇದಾದ ಬೆನ್ನಿಗೆ ಮತ್ತೇ ಅದೇ ಕಾಲೇಜಿನ ವಿದ್ಯಾರ್ಥಿಗಳು ಪಬ್ ಪಾರ್ಟಿ ನಡೆಸಿದ ಕಾರಣಕ್ಕೆ ಭಜರಂಗದಳ ತಡೆಯೊಡ್ಡಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ