ಮುರುಘಾ ಶರಣರ ವಿರುದ್ಧ ಕೇಸ್ ದಾಖಲಿಸಲು ಪಿತೂರಿ ಪ್ರಕರಣದಲ್ಲಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜನ್ ಪರ ವಕೀಲ ಜಯಪ್ಪ ಜಾಮೀನಿಗಾಗಿ ಇಂದು ಚಿತ್ರದುರ್ಗ ಎರಡನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.16): ಮುರುಘಾ ಶರಣರ ವಿರುದ್ಧ ಕೇಸ್ ದಾಖಲಿಸಲು ಪಿತೂರಿ ಪ್ರಕರಣದಲ್ಲಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವರಾಜನ್ ಪರ ವಕೀಲ ಜಯಪ್ಪ ಜಾಮೀನಿಗಾಗಿ ಇಂದು ಚಿತ್ರದುರ್ಗ ಎರಡನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಬಸವರಾಜನ್ ಪರ ಕಾರ್ಯಕರ್ತರು 2023ರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಯಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ)ಗೆ ಅರ್ಜಿ ಸಲ್ಲಿಸಿದ್ದಾರೆ.
undefined
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ (Basavarajan) ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಮೊನ್ನೆ ಚಿತ್ರದುರ್ಗ (Chitradurga) ಒಂದನೇ ಹೆಚ್ಚುವರಿ ನ್ಯಾಯಾಲಯ ಅವರನ್ನು ನ.28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಇಂದು ಬಸವರಾಜನ್ ಪರ ವಕೀಲ ಜಯಪ್ಪರಿಂದ ಜಾಮೀನು ಅರ್ಜಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ (Coutrt) ಸಲ್ಲಿಸಲಾಗಿದೆ. ಜಾಮೀನು ಅರ್ಜಿಯಲ್ಲಿ (Bail Application) ಬಸವರಾಜನ್ ಕುರಿತು ಮಾಜಿ ಶಾಸಕ, ಗೌರವಾನ್ವಿತ ವ್ಯಕ್ತಿ ಹಾಗೂ ಬಸವರಾಜನ್ ವಿರುದ್ಧ ಪಿತೂರಿ ಎಂದು ಉಲ್ಲೇಖಿಸಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ಸ್ವೀಕರಿಸಿ ತಕರಾರು ಸಲ್ಲಿಕೆಗೆ ಅವಕಾಶ ನೀಡಲಿರುವ ಕೋರ್ಟ್, ನಾಳೆ ತಕರಾರು ಸಲ್ಲಿಸುವ ದಿನಾಂಕ ನಿಗದಿ ಪಡಿಸುವ ಸಾಧ್ಯತೆಯಿದೆ.
ಸರ್ಕಾರದ ಕೈ ಸೇರಲಿದೆಯಾ ಮುರುಘಾ ಮಠ: ಸಿಎಂ ಬೊಮ್ಮಾಯಿ ಅಂತಿಮ ನಿರ್ಧಾರ
ಪೀಠದಿಂದ ವಜಾಕ್ಕೆ ಆಗ್ರಹ: ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ (Muruga Shree)ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುರುಘಾ ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾ (Dismiss) ಮಾಡುವಂತೆಯೂ ಮನವಿ ಸಲ್ಲಿಕೆಯಾಗಿದೆ. ಮುರುಘಾಶ್ರೀ ವಿರುದ್ಧ ಫೋಕ್ಸೋ (POCSO), ಅಟ್ರಾಸಿಟಿ ಪ್ರಕರಣ ಹಾಗೂ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ -1988 ಕಾಯ್ದೆಯಡಿ ಪ್ರಕರಣ ((Case)ದಾಖಲಾಗಿರುವುದರಿಂದ ಅವರನ್ನು ಮಠದ ಪೀಠಾದ್ಯಕ್ಷ ಸ್ಥಾನದಿಂದ ವಜಾ ಮಾಡಬೇಕಜು ಎಂದು ಸಾಮಾಜಿಕ ಕಾರ್ಯಕರ್ತ, ವಕೀಲ ಡಾ.ಮಧು ಚಿತ್ರದುರ್ಗ (Chitradurga) ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜೊತೆಗೆ ಪತ್ರದಲ್ಲಿ ಅವರು ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕವಾಗುವವರೆಗೆ ಆಡಳಿತಾಧಿಕಾರಿ (Administrator) ನೇಮಿಸಲು ಮನವಿ ಮಾಡಿಕೊಂಡಿದ್ದಾರೆ. ಈ ದೂರಿನ ಪ್ರತಿಯನ್ನು ಅವರು ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಾರ್ಯದರ್ಶಿಗೂ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್‌ಗಾಗಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರ್ಜಿ!
ಕೆಪಿಸಿಸಿ ಟಿಕೆಟ್‌ಗೆ ಅರ್ಜಿ ಸಲ್ಲಿಕೆ: ಮತ್ತೊಂದೆಡೆ ಪಿತೂರಿ (Conspiracy) ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಸವರಾಜನ್ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿಗೆ (KPCC) ಅರ್ಜಿ ಸಲ್ಲಿಸಲಾಗಿದೆ. 2 ಲಕ್ಷ ರೂ. ಬಿಲ್ಡಿಂಗ್ ಫಂಡ್ ಭರಿಸಿ ಬಸವರಾಜನ್ ಪರ ಕಾರ್ಯಕರ್ತರು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. 2008ರಲ್ಲಿ ಜೆಡಿಎಸ್‌ನಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಸ್.ಕೆ. ಬಸವರಾಜನ್ 2013ರಲ್ಲಿ ಸ್ಪರ್ಧಿಸಿ ಸೋತಿದ್ದರು. ಮತ್ತೆ 2018ರಲ್ಲಿ ಅವರು ಚುನಾವಣೆಗೆ (Election) ಸ್ಪರ್ಧಿಸಿರಲಿಲ್ಲ. ಆದರೆ, ಜಿಲ್ಲಾ ಕಾಂಗ್ರೆಸ್ ನಾಯಕರ ತೀರ್ಮಾನ ಏನು? ಬಸವರಾಜನ್ ಗೆ ಈ ಬಾರಿ ಟಿಕೆಟ್ (Ticket) ಸಿಗುತ್ತದೆಯೇ ಎಂಬುದನ್ನ ಕಾದು ನೋಡಬೇಕಿದೆ.