ಬಾಗಲಕೋಟೆಯಲ್ಲಿ ಚಿಂದಿ ಆಯುವ ನೆಪದಲ್ಲಿ ಕಳ್ಳತನ; ನಿರ್ಮಾಣ ಹಂತದ ಮನೆಗಳೇ ಟಾರ್ಗೆಟ್! ದೇವರ ವಿಗ್ರಹವನ್ನೂ ಬಿಡದೇ ದೋಚ್ತಾರೆ!

Published : May 18, 2025, 02:44 PM IST
ಬಾಗಲಕೋಟೆಯಲ್ಲಿ ಚಿಂದಿ ಆಯುವ ನೆಪದಲ್ಲಿ ಕಳ್ಳತನ; ನಿರ್ಮಾಣ ಹಂತದ ಮನೆಗಳೇ ಟಾರ್ಗೆಟ್! ದೇವರ ವಿಗ್ರಹವನ್ನೂ ಬಿಡದೇ ದೋಚ್ತಾರೆ!

ಸಾರಾಂಶ

ಚಿಂದಿ ಆಯುವ ನೆಪದಲ್ಲಿ ಬೆಳ್ಳಂಬೆಳಗ್ಗೆ ಬಂದು, ನಿರ್ಮಾಣ ಹಂತದ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಿ, ಬೀಗ ಮುರಿದು ಸ್ಟೀಲ್, ವೈಯರ್‌ಗಳನ್ನು ದೋಚುವ ಕಳ್ಳಿಯರ ಗ್ಯಾಂಗ್ ಹಾವಳಿಗೆ ಬಾಗಲಕೋಟೆ ಜನ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಬಾಗಲಕೋಟೆ (ಮೇ.18): ಚಿಂದಿ ಆಯುವ ನೆಪದಲ್ಲಿ ಬೆಳ್ಳಂಬೆಳಗ್ಗೆ ಬಂದು, ನಿರ್ಮಾಣ ಹಂತದ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಿ, ಬೀಗ ಮುರಿದು ಸ್ಟೀಲ್, ವೈಯರ್‌ಗಳನ್ನು ದೋಚುವ ಕಳ್ಳಿಯರ ಗ್ಯಾಂಗ್ ಹಾವಳಿಗೆ ಬಾಗಲಕೋಟೆ ಜನ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

 ದೇವರ ವಿಗ್ರಹಗಳನ್ನೂ ಬಿಡದ ಕಳ್ಳಿಯರು!

 ಈ ಚಾಲಾಕಿ ಮಹಿಳೆಯರ ತಂಡದ ಕೃತ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.  ಬಾಗಲಕೋಟೆಯ ವಿದ್ಯಾಗಿರಿಯ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರಸ್ಥರು ಪೂಜೆಗಾಗಿ ಪ್ರತಿಷ್ಠಾಪಿಸಿದ್ದ 10-15 ಕೆಜಿ ತೂಕದ ಕಂಚಿನ ಗಣೇಶ ವಿಗ್ರಹವನ್ನು ಒಬ್ಬ ಮಹಿಳೆ ಕಳವು ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಯಾವುದೇ ಅಂಜಿಕೆ ಅಳುಕಿಲ್ಲದೇ ಖತರ್ನಾಕ್ ಗ್ಯಾಂಗ್ ಬಿಂದಾಸ್‌ ಆಗಿ ವಿಗ್ರಹವನ್ನು ದೋಚಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಅಪಘಾತ 9 ಜನರು ದುರ್ಮರಣ! ಹನುಮ ಜಯಂತಿ ಡಿಜೆ ನೋಡಲು ಹೋಗಿದ್ದ ಬಾಲಕರು ಮಸಣಕ್ಕೆ!
  
ಸ್ಟೋರ್‌ ರೂಂನಿಂದ ವೈಯರ್ ಕಳವು: ಮತ್ತೊಂದು ಘಟನೆಯಲ್ಲಿ, ಇನ್ನೊಬ್ಬ ಮಹಿಳೆ ಸ್ಟೋರ್‌ ರೂಂನ ಬೀಗವನ್ನು ಮುರಿದು ಅಲ್ಲಿದ್ದ ವೈಯರ್‌ ಬಂಡಲ್‌ಗಳನ್ನು ಕಳವು ಮಾಡಿದ್ದಾಳೆ. ಈ ಘಟನೆಯೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳ್ಳಿಯರ ಧೈರ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಕಳ್ಳಿಯರ ಹಾವಳಿ ಹೆಚ್ಚಳ: ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಪ್ರದೇಶಗಳಲ್ಲಿ ಈ ಕಳ್ಳಿಯರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಚಿಂದಿ ಆಯುವ ರೀತಿಯಲ್ಲಿ ಬಂದು, ಯಾರಿಗೂ ಸಂಶಯ ಬಾರದಂತೆ ವಸ್ತುಗಳನ್ನು ಎಗರಿಸಿ ಸ್ಥಳದಿಂದ ಪರಾರಿಯಾಗುವ ಈ ತಂಡದ ಕೃತ್ಯಗಳಿಂದ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. 

ಇದನ್ನೂ ಓದಿ: Bengaluru: ಬಾಸ್‌ನ 1.51 ಕೋಟಿ ಕದ್ದು, ದೇವಸ್ಥಾನದ ಹುಂಡಿಗೆ ಹಾಕಿದ ಡ್ರೈವರ್‌!

ಪೊಲೀಸರ ಕ್ರಮಕ್ಕೆ ಒತ್ತಾಯ: ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ಕಳ್ಳತನಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಈ ರೀತಿಯ ಘಟನೆಗಳು ಪದೇಪದೆ ಮರುಕಳಿಸುತ್ತಿರುವುದರಿಂದ ಸ್ಥಳೀಯರು ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!