ಪ್ರೀತಿಸಿ, ಮದುವೆಯಾಗಿ ಅಪ್ರಾಪ್ತೆಯನ್ನು ಕೊಲೆ ಮಾಡಿದ್ನಾ ಪ್ರಿಯಕರ?

By Suvarna News  |  First Published Jan 1, 2020, 2:47 PM IST

ಅಪ್ರಾಪ್ತೆ ಬಾಲಕಿಯೊಂದಿಗೆ ಪ್ರೀತಿ, ಪ್ರಿಯಕರನ  ವಿರುದ್ಧ ಕೊಲೆ ಆರೋಪ| ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಪ್ರೀತಿಸಿ ಕೊಲೆ ಮಾಡಿರೋ ಆರೋಪ| ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್ಪಿ ಗ್ರಾಮದಲ್ಲಿ ಘಟನೆ..
 


ಬಾಗಲಕೋಟೆ[ಜ.01]: ಪ್ರಿಯಕರನೊಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಕುಮಾರ ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ್ದಾನೆ. ಬಳಿಕ ಆಕೆಗೆ ಅರಿಶಿನ ಕೊಂಬು ಕಟ್ಟಿ ಮದುವೆಯೂ ಆಗಿದ್ದಾನೆ. ಅಲ್ಲದೇ ಈ ವಿಚಾರ ಮನೆಯವರಿಗೆ ಹೇಳಿದ್ರೆ ಕೊಲೆ ಮಾಡುತ್ತಾರೆಂದು ನಂಬಿಸಿದ್ದಾನೆ.

Tap to resize

Latest Videos

ಆದರೆ ಅಪ್ರಾಪ್ತೆ ಬಾಲಕಿ ಮನೆಯವರಿಗೆ ಮಗಳ ಪ್ರೀತಿ ಹಾಗೂ ಮದುವೆ ವಿಚಾರ ತಿಳಿದಿದೆ. ಇದರ ಬೆನ್ನಲ್ಲೇ ಕುಮಾರ್ ಅಪ್ರಾಪ್ತೆ ಬಾಲಕಿಗೆ ವಿಷ ಕುಡಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅಪ್ರಾಪ್ತೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಗುಳೇದಗುಡ್ಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಕುಮಾರ್ ನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಸದ್ಯ ಈ ಸಂಬಂಧ ಕುಮಾರ್ ವಿರುದ್ಧ ಅಪ್ರಾಪ್ತೆ ಬಾಲಕಿ ತಂದೆ ಬಾಳಪ್ಪ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆತ ತನ್ನ ಮಗಳನ್ನು ಕೊಲೆಗೈದಿರುವುದಗಿ ದೂರಿನಲ್ಲಿ ತಿಳಿಸಿದ್ದಾರೆ.

click me!