ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಸ್ವಂತ ಅಜ್ಜಿಯನ್ನು ಮೊಮ್ಮಗನೇ ಕಾರು ಗುದ್ದಿಸಿ (ಹಿಟ್ ಅಂಡ್ ರನ್) ಕೊಲೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ (ಸೆ.13): ಆಸ್ತಿ, ಹಣ ಹಾಗೂ ಭೂಮಿಯ ವಿಚಾರಕ್ಕೆ ಯಾವುದೇ ಸಂಬಂಧಗಳನ್ನೂ ನೋಡದೇ ವೈಷಮ್ಯ ಸಾಧಿಸುತ್ತಾರೆ. ಅದೇ ರೀತಿ ಹೊಲದಲ್ಲಿನ ಮೋಟರ್ ಹಾಗೂ ಕೇಬಲ್ ತೆಗೆದುಕೊಂಡು ಹೋಗಿದ್ದನೆಂದು ದೂರು ಕೊಟ್ಟ ಸ್ವಂತ ಅಜ್ಜಿಯನ್ನು ಮೊಮ್ಮಗನೇ ಕಾರು ಗುದ್ದಿಸಿ (ಹಿಟ್ ಅಂಡ್ ರನ್) ಕೊಲೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಇತ್ತೀಚೆಗೆ ಬಾಗಲಕೋಟೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಅಪಘಾತವಲ್ಲ, ಪ್ರೀ ಪ್ಲ್ಯಾನ್ಡ್ ಮರ್ಡರ್ ಎಂಬುದು ತಿಳಿದುಬಂದಿದೆ. ಇನ್ನು ಅಪಘಾತ ಪ್ರಕರಣ ಬೇಧಿಸಿದ ಲೋಕಾಪುರ ಠಾಣೆಯ ಪೊಲೀಸರು, ಸ್ವಂತ ಮೊಮ್ಮಗನೇ ತನ್ನ ಅಜ್ಜಿಗೆ ಕಾರು ಗುದ್ದಿಸಿ ಕೊಲೆಗೈದಿದ್ದಾನೆ ಎಂಬ ಸತ್ಯ ಬಯಲಿಗೆ ಬಂದಿದೆ. ಆಗಸ್ಟ್ 20 ರಂದು ಅಪಘಾತ ಘಟನೆ ನಡೆದಿದ್ದು, ಅಜ್ಜಿ ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದರು. ಇನ್ನು ಅಪಘಾತದಿಂದ ಅಜ್ಜಿ ಸಾವನ್ನಪ್ಪಿದ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆಕೆಯ ಮೊಮ್ಮಗನೇ ಕೊಲೆಗೈದ ಸತ್ಯ ಬಯಲಾಗಿದೆ.
undefined
ಬೈಕ್ ಗೆ ಹಿಂಬದಿಯಿಂದ ಗುದ್ದಿದ್ದ ಕಾರು: ಬಾಗಲಕೋಟೆ ಜಿಲ್ಲೆಯ ಲೋಕಾಪುರ- ಖಜ್ಜಿಡೋಣಿ ಮಾರ್ಗ ಮಧ್ಯದ ಚಿಕ್ಕೂರ ಕ್ರಾಸ್ ಬಳಿ ಘಟನೆ ನಡೆದಿದೆ. ತನ್ನ ಎರಡನೇ ಮಗನ ಬೈಕ್‌ನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುವಾಗ ಕಾರು ಗುದ್ದಲಾಗಿತ್ತು. ಈ ವೇಳೆ ಗಾಯಗೊಂಡಿದ್ದ ಅಜ್ಜಿ ತಾಯವ್ವ ದುಂಡಪ್ಪ ಅರಕೇರಿ (68) ಸಾವಿಗೀಡಾಗಿದ್ದರು. ಬೈಕ್ ಚಲಾಯಿಸುತ್ತಿದ್ದ ಮೃತ ತಾಯವ್ವಳ ಮಗ ಶ್ರೀಧರ್ ಅವರಿಗೂ ಗಾಯವಾಗಿತ್ತು. ಇನ್ನು ಹುಟ್ಟು ಮೂಕನಾಗಿದ್ದ ಶ್ರೀಧರ್, ಅಪಘಾತಕ್ಕೂ ಮುಂಚಿತವಾಗಿ ಹಿಂಬದಿ ಬಂದು ಹಾರ್ನ್ ಹಾಕಿದಾಗ ಜಾಗ ಮಾಡಿಕೊಟ್ಟು ಸೈಡಿಗೆ ಹೋಗುವಂತೆ ಕೈ ಸನ್ನೆ ಮಾಡಿದರೂ ಕಾರು ಡಿಕ್ಕಿ ಹೊಡೆದಿದ್ದಾರೆ ಎಂದು ದೂರು ನೀಡಿದ್ದರು.
ಭಾರತದ ಹೈ ಪ್ರೊಫೈಲ್ ಹನಿಟ್ರ್ಯಾಪ್ ರಾಣಿ ಆರತಿ ದಯಾಳ್ ಬೆಂಗಳೂರಿನಲ್ಲಿ ಅರೆಸ್ಟ್
ಇನ್ನು ಈ ಬಗ್ಗೆ ವಿಚಾರಣೆ ನಡೆಸಿದ ಲೋಕಾಪುರ ಪೊಲೀಸರಿಂದ ಪ್ರಕರಣ ಬೆಳಕಿಗೆ ಬಂದಿದೆ. ಖಜ್ಜಿಡೋಣಿ ಗ್ರಾಮದ ದುಂಡಪ್ಪ ಶ್ರೀಕಾಂತ್ ಅರಕೇರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ದುಂಡಪ್ಪ ಮೃತ ತಾಯವ್ವಳ ಮೊದಲ ಮಗನ ಪುತ್ರನಾಗಿದ್ದಾನೆ. ಹೊಲದಲ್ಲಿನ ಬೋರ್ ವೆಲ್‌ನಲ್ಲಿದ್ದ ಮೋಟಾರ್, ಕೇಬಲ್ ಆರೋಪಿ ದುಂಡಪ್ಪ ದೌರ್ಜನ್ಯದಿಂದ ತೆಗೆದುಕೊಂಡು ಹೋಗಿದ್ದನು. ಇದರಿಂದ ಕೃಷಿ ಕಾರ್ಯಕ್ಕೆ ಸಮಸ್ಯೆ ಆಗುತ್ತಿದೆ ಎಂದು ಮೊಮ್ಮಗನ ವಿರುದ್ಧ ಮೃತ ತಾಯವ್ವ ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ನೀಡಿದ್ದಕ್ಕೆ ಸಿಟ್ಟಾಗಿ ಕೊಲೆಗೆ ಪ್ಲ್ಯಾನ್ ಮಾಡಿದ ದುಂಡಪ್ಪ, ತನ್ನ ಮೂಕ ಚಿಕ್ಕಪ್ಪ ಶ್ರೀಧರ್‌ನ ಜೊತೆಗೆ ಅಜ್ಜಿ ತಾಯವ್ವ ಬೈಕಿನಲ್ಲಿ ಹೋಗುವಾಗ ಕಾರಿನಲ್ಲಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದನು. ಇನ್ನು ಆರೋಪಿ ದುಂಡಪ್ಪನಿಗೆ ಸಾಥ್ ನೀಡಿದ್ದ ನಿಂಗಪ್ಪ ನೀಲನ್ನವರ ಎನ್ನುವವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.