ಗರ್ಭಿಣಿಗೆ ಡಿಕ್ಕಿ ಹೊಡೆದ ಟ್ರಕ್‌, ಗರ್ಭದಿಂದ ಹೊರಬಂತು ಜೀವಂತ ಮಗು!

By Santosh NaikFirst Published Jul 21, 2022, 11:15 AM IST
Highlights

ಉತ್ತರಪ್ರದೇಶದ ಫೀರೋಜಾಬಾದ್‌ ಜಿಲ್ಲೆಯಲ್ಲಿ ಬುಧವಾರ ಭೀಕರ ಘಟನೆ ನಡೆದಿದ್ದು, ಎಂಟು ತಿಂಗಳ ಗರ್ಭಿಣಿಯ ಮೇಲೆ ಟ್ರಕ್‌ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.ಆದರೆ, ಟ್ರಕ್‌ ಅಡಿಗೆ ಬಿದ್ದ ರಭಸಕ್ಕೆ ಹೊಟ್ಟೆಯಿಂದ ಮಗು ಹೊರಬಂದಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾಗಿದೆ.

ಆಗ್ರಾ (ಜುಲೈ 21): ಬದುಕುವ ಕೂದಲೆಳೆ ಅವಕಾಶವಿದ್ದರೂ, ದೇವರು ನಮ್ಮನ್ನು ಕಾಪಾಡ್ತಾನೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಉತ್ತರಪ್ರದೇಶದಲ್ಲೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದ್ದು, ಎಂಟು ತಿಂಗಳ ಗರ್ಭಿಣಿ ಟ್ರಕ್‌ನ ಅಡಿಗೆ ಬಿದ್ದು ಸಾವು ಕಂಡಿದ್ದಾರೆ. ಆದರೆ, ಡಿಕ್ಕಿ ಹೊಡೆದ ರಭಸಕ್ಕೆ ಹೊಟ್ಟೆಯಲ್ಲಿದ್ದ ಮಗು ಜೀವಂತವಾಗಿ ಹೊರಬಂದಿದ್ದು, ಮಗು ಕ್ಷೇಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಪಘಾತವಾದ ಬಳಿಕ ಮಗುವನ್ನು ಫಿರೋಜಾಬಾದ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು "ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ. ನವಜಾತ ಚಿಕಿತ್ಸೆಯ ಅಗತ್ಯವಿದೆ" ಎಂದು ಹೇಳಿದ್ದಾರೆ. ನಾರ್ಖಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬರ್ತಾರಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಎಸ್‌ಎಚ್‌ಒ ಫತೇ ಬಹದ್ದೂರ್ ಸಿಂಗ್ ಬಧೋರಿಯಾ ಹೇಳಿದ್ದಾರೆ. 26 ವರ್ಷದ ಮಹಿಳೆಯನ್ನು ಆಗ್ರಾ ನಿವಾಸಿ ಕಾಮಿನಿ ಎಂದು ಗುರುತಿಸಲಾಗಿದೆ. ಆಕೆ ಮತ್ತು ಆಕೆಯ ಪತಿ ಕೋಟ್ಲಾ ಫರಿಹಾ ಪ್ರದೇಶದಲ್ಲಿರುವ ತನ್ನ ಪೋಷಕರ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ಯತ್ನಿಸಿದ ಆಕೆಯ ಪತಿ ರಾಮು ಬೈಕ್‌ನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಮಿನಿ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟ್ರಕ್ ಆಕೆಯ ಮೇಲೆ ಹರಿದಿದೆ. 

ಕಾಮಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಟ್ರಕ್‌ ಡಿಕ್ಕಿ ಹೊಡೆದ ರಭಸಕ್ಕೆ ಹೊಟ್ಟೆಯಿಂದ ಮಗು ಹೊರಬಂದಿದೆ. ಈ ವೇಳೆ ಮಗು ಜೀವಂತವಾಗಿತ್ತು ಆಸ್ಪತ್ರೆಗೆ ದಾಖಲಿಸಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ, ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ, ಪತಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್‌ಎಚ್‌ಒ ಬಧೋರಿಯಾ ಹೇಳಿದ್ದಾರೆ. ನವಜಾತ ಶಿಶುವಿಗೆ ಅಗತ್ಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ತಂದೆ ರಾಮು ಕೂಡ ಸುರಕ್ಷಿತವಾಗಿದ್ದು, ಅವರನ್ನೂ ಅಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Latest Videos

Punjab: ಗಾಯಕ ಸಿಧು ಮೂಸೇವಾಲ ಹಂತಕರ ಎನ್‌ಕೌಂಟರ್‌

ಪತಿ  ರಾಮು ಮಾತು: ಆಗ್ರಾ ಜಿಲ್ಲೆಯ ಧನೌಲಾ ನಿವಾಸಿ ರಾಮು ಬುಧವಾರ ಪತ್ನಿ ಕಾಮಿನಿಯೊಂದಿಗೆ ಬೈಕ್‌ನಲ್ಲಿ ಅತ್ತೆಯ ಮನೆಗೆ ಹೋಗುತ್ತಿದ್ದರು. ಫಿರೋಜಾಬಾದ್‌ನ ನಾರ್ಖಿ ಪೊಲೀಸ್ ಠಾಣೆ ವ್ಯಾಪ್ತಿಯ ವಜೀರ್‌ಪುರ ಕೋಟ್ಲಾದಲ್ಲಿ ಅವರ ಅತ್ತೆ ವಾಸವಾಗಿದ್ದಾರೆ. ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು. ಬುಧವಾರ ಬೆಳಗ್ಗೆ ಕರೆ ಮಾಡಿದ್ದ ಕಾಮಿನಿ, ಮನೆಗೆ ಕರೆದುಕೊಂಡು ಹೋಗಿ ಎಂದಿದ್ದಳು.ಕುಟುಂಬದವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಮಗುವಾದ ನಂತರ 4 ತಿಂಗಳ ಕಾಲ ಹೋಗಲು ಸಾಧ್ಯವಾಗುವುದಿಲ್ಲ. ನಾನು 9 ಗಂಟೆಗೆ ಬೈಕ್‌ನಿಂದ ಹೊರಟಿದ್ದೆ. ಮನೆಯಿಂದ ಅತ್ತೆ ಮನೆ 40 ಕಿಲೋಮೀಟರ್‌ ದೂರವಿದೆ' ಎಂದು ಹೇಳಿದ್ದಾರೆ.

ಬೆಂಗಳೂರು: ಮದುವೆ ಆಗದ್ದಕ್ಕೆ ಮಹಿಳೆ ನೇಣಿಗೆ ಶರಣು

ಆಕೆಯ ಶವದೊಂದಿಗೆ ಆಸ್ಪತ್ರೆಗೆ ಹೋದೆ: ಸ್ವಲ್ಪ ಹೊತ್ತು ಪ್ರಯಾಣದ ನಂತರ ಕಾಮಿನಿ ಚಹಾ ಕೊಡಿಸುವಂತೆ ಕೇಳಿದಳು, ಢಾಬಾದಲ್ಲಿ ಚಹಾ ಕುಡಿದೆವು. ಬಹುಶಃ ನಾವು ಕಷ್ಟಪಟ್ಟು 5 ಕಿಲೋಮೀಟರ್ ದೂರ ಹೋಗಿರಬೇಕು, ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಕಾಮಿನಿ ಬೈಕ್‌ನಿಂದ ಬಿದ್ದಿದ್ದಳು "ಅಪಘಾತದ ನಂತರ ನಾನು ಹಾರಿಹೋದೆ, ನಾನು ನನ್ನ ಹೆಂಡತಿಯನ್ನು ನೋಡುತ್ತಿದ್ದೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಜನರು ನನ್ನ ಹೆಣ್ಣು ಮಗುವನ್ನು ಎತ್ತಿಕೊಂಡರು, ನಾನು ಅವಳನ್ನು ಎತ್ತಿಕೊಂಡು ಕುಳಿತಿದ್ದೆ, ನಂತರ ಕೆಲವು ಒಳ್ಳೆಯ ಜನರು ಅವಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆಂಬ್ಯುಲೆನ್ಸ್ ಬಂದ ನಂತರನಾನು ನನ್ನ ಹೆಂಡತಿಯ ಶವದೊಂದಿಗೆ ಆಸ್ಪತ್ರೆ ತಲುಪಿದೆ. ಅಲ್ಲಿ ನಾನು ನನ್ನ ಕುಟುಂಬ ಸದಸ್ಯರಿಗೆ ಹೇಳಿದೆ, ಕಾಮಿನಿ ಇನ್ನಿಲ್ಲ. ಮದುವೆಯಾಗಿ 3 ವರ್ಷವಾಯಿತು. ಇದು ನಮ್ಮ ಮೊದಲ ಮಗು ಎಂದು ರಾಮು ಅಳುತ್ತಲೇ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲೂ ಇದೇ ರೀತಿಯ ಘಟನೆ: ಬಾಂಗ್ಲಾದೇಶದ ನಗರ ಮೈಮೆನ್‌ಸಿಂಗ್‌ನ ತ್ರಿಶಾಲ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾಲಕರು ಹಾಗೂ ಒಡಹುಟ್ಟಿದವರು ಸಾವು ಕಂಡರೂ, ಪವಾಡಸದೃಶ್ಯ ರೀತಿಯಲ್ಲಿ ಮಗುವೊಂದು ಜನಿಸಿದೆ. ಸೋಮವಾರ ರಾತ್ರಿ ಮೈಮೆನ್‌ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ, ಮಗುವಿನ ರಕ್ತದಲ್ಲಿ ಬಿಲಿರುಬಿನ್ ಮಟ್ಟವು ಹೆಚ್ಚಾಗಿರುವುದರಿಂದ ಆಕೆಯ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನವಜಾತ ಶಿಶುವಿನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮೈಮೆನ್‌ಸಿಂಗ್‌ನ ಲಬಿಬ್ ಆಸ್ಪತ್ರೆಯ ಮಾಲೀಕ ಎಂಡಿ ಷಹಜಹಾನ್ ಅವರು ಈ  ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ಐವರು ಸದಸ್ಯರ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಮಂಡಳಿಯ ಸದಸ್ಯ ಕಾರ್ಯದರ್ಶಿ, ವೈದ್ಯ ನಜ್ರುಲ್ ಇಸ್ಲಾಂ ಮಾತನಾಡಿ, ಮಗು ರಕ್ತಹೀನತೆ ಮತ್ತು ಜಾಂಡೀಸ್‌ನಿಂದ ಬಳಲುತ್ತಿದೆ. ಇದಲ್ಲದೆ, ಅವರು ಉಸಿರಾಟದ ತೊಂದರೆಗಳೂ ಇದೆ ಮಗುವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಿತಿಯು ಈಗಾಗಲೇ ಸಭೆಯನ್ನು ಆಯೋಜಿಸಿದೆ.

click me!