ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಗೈದ್ದ ಇಬ್ಬರು ಶಾರ್ಪ್ ಶೂಟರ್‌ಗಳನ್ನು ಅಮೃತಸರ್‌ದಲ್ಲಿ ಬುಧವಾರ ಪೊಲೀಸರು 5 ತಾಸು ಘೋರ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ 3 ಪೋಲಿಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.
ಚಂಡೀಗಢ (ಜು.21): ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆಗೈದ್ದ ಇಬ್ಬರು ಶಾರ್ಪ್ ಶೂಟರ್‌ಗಳನ್ನು ಅಮೃತಸರ್‌ದಲ್ಲಿ ಬುಧವಾರ ಪೊಲೀಸರು 5 ತಾಸು ಘೋರ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ 3 ಪೋಲಿಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಪಂಜಾಬ್ ಪೊಲೀಸರ ಗ್ಯಾಂಗಸ್ಟರ್ ನಿಗ್ರಹ ಟಾಸ್ಕ್ ಫೋರ್ಸ್ ಅಮೃತಸರದಿಂದ 20 ಕಿ.ಮೀ. ದೂರದಲ್ಲಿ ಎನ್‌ಕೌಂಟರ್ ನಡೆಸಿದ್ದಾರೆ. ಮೃತರನ್ನು ಜಗರೂಪ್ ಸಿಂಗ್ ರೂಪಾ ಹಾಗೂ ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನು ಕೂಸಾ ಎಂದು ಗುರುತಿಸಲಾಗಿದೆ.
ಆಗಿದ್ದೇನು?: ಹಂತಕರು ಸಾಗುತ್ತಿದ್ದಾರೆ ಎಂಬ ಸುಳಿವು ಅರಿತ ಟಾಸ್ಕ್‌ಫೋರ್ಸ್ ಸಿಬ್ಬಂದಿ ಅವರನ್ನು ಬೆನ್ನಟ್ಟಿದರು. ಆಗ ಹಂತಕರು ಅಮೃತಸರ ಬಳಿಯ ಗ್ರಾಮದ ಸನಿಯ ಪ್ರತಿದಾಳಿ ಆರಂಭಿಸಿದರು. ಜಗರೂಪ ಸಿಂಗ್ ರೂಪಾನನ್ನು ಮೊದಲು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು. ಬಳಿಕ ಮನ್‌ಪ್ರೀತ್ ಸಿಂಗ್ ಸುಮಾರು 1 ಗಂಟೆಗಳ ಕಾಲ ಏಕಾಂಗಿಯಾಗಿ ಪೊಲೀಸರ ಮೇಲೆ ಗುಂಡಿನ ಸುರಿಮಳೆ ಮುಂದುವರೆಸಿದ. ಆದರೂ ಸುಮಾರು 1 ಗಂಟೆ ಸತತ ಗುಂಡಿನ ಚಕಮಕಿ ಬಳಿಕ ಸಾಯಂಕಾಲ 4 ಗಂಟೆಗೆ ಮನ್‌ಪ್ರೀತ್‌ನನ್ನು ಕೂಡ ಹತ್ಯೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಸುದ್ದಿವಾಹಿನಿಯ ಕ್ಯಾಮರಾಮೆನ್‌ಗೂ ಬಲಗಾಲಿಗೆ ಗುಂಡು ತಗುಲಿದೆ. ಹಂತಕರಿಂದ ಎಕೆ 47 ರೈಫಲ್, 1 ಪಿಸ್ತೂಲು ವಶಪಡಿಸಕೊಳ್ಳಲಾಗಿದೆ,
ಸಿಧು ಮೂಸೆ ವಾಲ ಹತ್ಯೆ ಬಳಿಕ ಕಾರಿನಲ್ಲಿ ಸಂಭ್ರಮ ಆಚರಿಸಿದ್ದ ಹಂತಕರು, ವಿಡಿಯೋ ವೈರಲ್!
11 ಹಂತಕರು: ಸಿಧು ಹತ್ಯೆಯಲ್ಲಿ 11 ಶಾರ್ಪ್ ಶೂಟರ್‌ಗಳು ಭಾಗಿಯಾಗಿದ್ದರು. ಈ ಪೈಕಿ 8 ಮಂದಿಯನ್ನು ಬಂಧಿಸಲಾಗಿತ್ತು. ಈಗ ಇಬ್ಬರು ಹತರಾಗಿದ್ದಾರೆ. ಕೊನೆಯ ಹಂತಕ ದೀಪಕ್ ಮುಂಡಿ ಪರಾರಿಯಾಗಿದ್ದು, ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬಿಷ್ಣೋಯ್, ಮೂಸೇವಾಲಾ ಹತ್ಯೆ ಕೇಸ್ ಮಾಸ್ಟರ್‌ಮೈಂಡ್: ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದಿದ್ದ ಖ್ಯಾತ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಬಂಧಿತನಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಮೂಸೇವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಎಂದು ದಿಲ್ಲಿ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮೂಸೇವಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದ ಸಿದ್ದೇಶ್ ಹಿರಾಮನ್ ಕಾಮ್ಲೆಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಜೊತೆಗೆ ದಾಳಿ ನಡೆಸಿದ ಉಳಿದ 5 ಆರೋಪಿಗಳನ್ನೂ ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ
ಮೇ 29ರಂದು ಜೀಪಿನಲ್ಲಿ ತೆರಳುತ್ತಿದ್ದ ಮೂಸೇವಾಲಾನನ್ನು ವಾಹನದಲ್ಲಿ ಬಂದ ಗುಂಪೊಂದು ಗುಂಡಿನ ದಾಳಿ ನಡೆಸಿ ಹತ್ಯೆಗೈದಿತ್ತು. ಈ ಘಟನೆಯ ಹೊಣೆಯನ್ನು ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೊತ್ತಿದ್ದ. ಈಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗಿನ ಸದಸ್ಯನಾಗಿದ್ದ ಕಾರಣ, ಬಿಷ್ಣೋಯ ಮೇಲೆ ಅನುಮಾನವಿತ್ತು. ಪ್ರಾರಂಭದಲ್ಲಿ ಈತನ ವಿಚಾರಣೆ ನಡೆಸಿದಾಗ ತನ್ನ ಸೋದರನ ಗ್ಯಾಂಗ್‌ನವರು ದಾಳಿ ನಡೆಸಿರಬಹುದು. ಆದರೆ ತನ್ನ ಕೈವಾಡವಿಲ್ಲ ಎಂದು ನಾಟಕವಾಡಿದ್ದ.