ಮಂಗಳೂರು: ದೇವಸ್ಥಾನದ ಹುಂಡಿ ದೋಚಿ, ಕಾಂಡೋಮ್‌ ಹಾಕಿದ ದುಷ್ಕರ್ಮಿಗಳು

By Kannadaprabha News  |  First Published Feb 26, 2021, 8:49 AM IST

ಮಂಗಳೂರಿನ ಕೋಟೆದ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ನಡೆದ ಘಟನೆ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| ಮಂಗಳೂರು ವ್ಯಾಪ್ತಿಯಲ್ಲಿ ನಡೆದ ನಾಲ್ಕನೇ ಪ್ರಕರಣ| 


ಮಂಗಳೂರು(ಫೆ.26): ದೇವಸ್ಥಾನದ ಹುಂಡಿ ದೋಚಿ, ಹುಂಡಿಗೆ ಅವಹೇಳನಕಾರಿ ಬರಹ ಮತ್ತು ಕಾಂಡೋಮ್‌ ಹಾಕಿ ಅಪವಿತ್ರಗೊಳಿಸಿರುವ ಪ್ರಕರಣ ಮಂಗಳೂರಿನ ಉರ್ವ ಬಳಿಯ ದಡ್ಡಲ್‌ಕಾಡ್‌ನಲ್ಲಿರುವ ಕೋಟೆದ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. 

ಗುರುವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾಲ್ಕನೇ ಪ್ರಕರಣ ಇದಾಗಿದೆ.

Tap to resize

Latest Videos

undefined

ಆಂಜ​ನೇಯ ವಿಗ್ರ​ಹಕ್ಕೆ ಬೆಂಕಿ ಹಚ್ಚಿ ಹುಂಡಿ ಕದ್ದ ಖದೀಮರು

ಕಳೆದ ಒಂದು ತಿಂಗಳ ಹಿಂದೆ ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ದೇವಸ್ಥಾನ, ಪಂಪುವೆಲ್‌ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಬೊಕ್ಕಪಟ್ನ ಅಯ್ಯಪ್ಪ ದೇವಸ್ಥಾನ, ಉಳ್ಳಾಲ ಕೊರಗಜ್ಜ ದೇವಸ್ಥಾನದ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್‌ಗಳನ್ನು ಹಾಕಿ ಅಪವಿತ್ರಗೊಳಿಸಲಾಗಿತ್ತು.

click me!