ಉತ್ತರಕನ್ನಡ: ಕೊಲೆ ಕೇಸಲ್ಲಿ ಜ್ಯೋತಿಷಿ ಕಮಲಾಕರ ಭಟ್‌ಗೆ ನ್ಯಾಯಾಂಗ ಬಂಧನ

Kannadaprabha News, Ravi Janekal |   | Kannada Prabha
Published : Feb 05, 2026, 07:12 AM IST
Avaraguppa Murder Astrologer Kamalakar Bhat arrested over illicit affair row

ಸಾರಾಂಶ

ಸಿದ್ದಾಪುರದ ಅವರಗುಪ್ಪದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಕಮಲಾಕರ ಭಟ್‌ ಸೇರಿದಂತೆ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಚಿತ್ರಾ ನಾಯ್ಕ ಎಂಬ ಮಹಿಳೆಯೊಂದಿಗಿನ ಅನೈತಿಕ ಸಂಬಂಧದಿಂದ ನಡೆದ ಗಲಾಟೆಯಲ್ಲಿ, ಆಕೆಯ ಗಂಡನ ಸಹೋದರ ವಸಂತ ಜಟ್ಯಾ ನಾಯ್ಕ ಕೊಲೆಯಾಗಿತ್ತು.

ಕಾರವಾರ (ಫೆ.5) ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಸೋಮವಾರ ರಾತ್ರಿ ಮನೆಗೆ ನುಗ್ಗಿ ಒಬ್ಬರ ಹತ್ಯೆ ನಡೆಸಿ, ಉಳಿದವರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಜ್ಯೋತಿಷಿ ಕಮಲಾಕರ ಭಟ್‌ ಸೇರಿದಂತೆ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಮಲಾಕರ ಭಟ್‌ ಜೊತೆಗೆ ಸುಚಿತ್ರಾ ನಾಯ್ಕ ಎಂಬ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರಕ್ಕೆ ಫೆ.2ರಂದು ಅವರಗುಪ್ಪದಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಸುಚಿತ್ರಾ ಗಂಡನ ಸಹೋದರ ವಸಂತ ಜಟ್ಯಾ ನಾಯ್ಕ (43) ಚಾಕುವಿನ ಇರಿತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಈ ಸಂಬಂಧ ಸುಚಿತ್ರಾ, ಲೋಕನಾಥ ನಾಯ್ಕ, ಜ್ಯೋತಿಷಿ ಕಮಲಾಕರ ಭಟ್‌, ಆಕಾಶ್ ಎಂ., ಮಹಮ್ಮದ್ ಮುಫೂಜ್, ಫೈಸಲ್ ಹಾಗೂ ಇರ್ಫಾನ್ ಎಂಬ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯವು 7 ಮಂದಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಅನೈತಿಕ ಸಂಬಂಧ:

ಅವರಗುಪ್ಪದ ಮಹೇಶ ನಾಯ್ಕ ಎಂಬುವರು ಹೊಸೂರಿನ ಸುಚಿತ್ರಾಳನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಸುಚಿತ್ರಾ ಗಂಡನನ್ನು ತೊರೆದು ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗದ ಕಮಲಾಕರ ಭಟ್‌ ಮನೆಯಲ್ಲಿ ವಾಸವಾಗಿದ್ದಳು. ಈ ಹೆಣ್ಣುಮಕ್ಕಳು ಕಮಲಾಕರ-ಸುಚಿತ್ರಾ ನಡುವಿನ ಅನೈತಿಕ ಸಂಬಂಧ ಹಾಗೂ ಅವರು ನೀಡುತ್ತಿದ್ದ ಹಿಂಸೆ ಕುರಿತು ತಂದೆಗೆ ಮಾಹಿತಿ ನೀಡಿದ್ದಾರೆ.

ಆಗ ಫೆ.1ರಂದು ಮಗಳು ಮನೆಗೆ ಬಂದಿದ್ದಳು. ಇದರಿಂದ ಕೋಪಗೊಂಡ ಸುಚಿತ್ರಾ, ಕಮಲಾಕರ, ಉಳಿದ ಆರೋಪಿಗಳೊಂದಿಗೆ ಗಂಡ ಮಹೇಶ ನಾಯ್ಕ ಮನೆಗೆ ನುಗ್ಗಿ ಮಗಳನ್ನು ಕರೆದೊಯ್ಯಲು ಯತ್ನಿಸಿದ್ದಾರೆ. ಆಗ ನಡೆದ ವಾಗ್ವಾದ, ತಳ್ಳಾಟದಲ್ಲಿ ವಸಂತಗೆ ಚಾಕು ಇರಿಯಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆ : ನೀರಿಲ್ಲದೆ ಮುಳುಗದ ಅಜ್ಜಿ ಸೇಫ್