
- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮಾ.4) : ಗುಮ್ಮಟನಗರಿ ವಿಜಯಪುರದಲ್ಲಿ ವೃದ್ಧೆ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.
ಮನೆಗೆ ಹೊಗಬೇಕು ಎಂದು ವಿಜಯಪುರ(Vijayapur) ನಗರದ ವಾಟರ್ ಟ್ಯಾಂಕ್(Water tank) ಬಳಿ ನಿಂತಿದ್ದ ಮಹಿಳೆ ಆಟೋ ಹತ್ತಿದ ವೃದ್ಧೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೋಯ್ದು ಅತ್ಯಾಚಾರ(Rape) ನಡೆಸಲಾಗಿದೆ. ತಡರಾತ್ರಿ ಅಜ್ಜಿಯ ನರಳಾಟ ಕೇಳಿ 112ಗೆ ಕರೆ ಮಾಡಿ ಜೀವರಕ್ಷಿಸಿದ್ದಾರೆ.
Crime news: 58ರ ವೃದ್ಧೆ ಮೇಲೆ ಅತ್ಯಾಚಾರ ಬಳಿಕ ಭೀಕರವಾಗಿ ಹತ್ಯೆಗೈದ 16ರ ಬಾಲಕ!
ವೃದ್ಧೆಯನ್ನು ಬಿಡದ ಕಾಮುಕರು..!
ಅಲ್ಲಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗ್ತಿದ್ದ ಮಹಿಳೆ ಮೇಲೆ ಅತ್ಯಾಚಾರ, ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಚಾಕೊಲೆಟ್ ಆಸೆ ತೋರಿಸಿ ಕಾಮುಕರಿಂದ ಅತ್ಯಾಚಾರಗಳ ಬಗ್ಗೆ ಕೇಳಿದ್ದೇವೆ. ಆದ್ರೆ ವಿಜಯಪುರದಲ್ಲಿ ಕಾಮುಕರು ವೃದ್ಧೆಯನ್ನು ಬಿಡದೆ ಅತ್ಯಾಚಾರವೆಸಗಿ ಜೈಲು ಸೇರಿದ್ದಾರೆ.
ವಿಜಯಪುರ ನಗರದ ಜೆಂಡಾಕಟ್ಟಿ ನಿವಾಸಿಗಳಾದ ಸದ್ದಾಂ ಶೇಖ್(Saddam Sheikh) ಹಾಗೂ ರವಿ(Ravi) ಎಂಬ ಕಾಮುಕರೇ ಅತ್ಯಾಚಾರವೆಸಗಿದವರು.
ರಾತ್ರಿ ಆಟೋಗೆ ಕಾಯ್ತಿದ್ದ ವೃದ್ಧೆಯ ಟಾರ್ಗೆಟ್..!
ಫೆಬ್ರವರಿ 23 ರಂದು ರಾತ್ರಿ 9.30 ರ ಸುಮಾರಿಗೆ ವೃದ್ಧೆ ನಗರದ ವಾಟರ್ ಟ್ಯಾಂಕ್ ಬಳಿ ಆಟೋಗಾಗಿ ಕಾಯ್ತಿದ್ದಳು. ಈ ವೃದ್ಧೆಯನ್ನು ಟಾರ್ಗೆಟ್ ಮಾಡಿಕೊಂಡು ಆಟೋ ಸಮೇತ ಬಂದ ಕಾಮುಕ ಸದ್ದಾಂ ಹಾಗೂ ರವಿ. ಮೊದಲಿಗೆ ಅಜ್ಜಿಗೆ ತಾನು ಹೋಗುವ ಸ್ಥಳಕ್ಕೆ ಡ್ರಾಪ್ ಕೊಡುವುದಾಗಿ ನಂಬಿಸಿದ್ದಾರೆ. ತಡರಾತ್ರಿ ಬೇಗ ಮನೆ ತಲುಪುವ ಅವಸರದಲ್ಲಿ ಕಾಮುಕರ ಮಾತು ನಂಬಿ ಆಟೋ ಹತ್ತಿದ್ದಾಳೆ. ಬಳಿಕ ಆಕೆಯನ್ನ ಆಟೋದಲ್ಲಿ ಕೂರಿಸಿಕೊಂಡ ಹೊರಟ ಕಾಮುಕರು ಹೋಗಿದ್ದು ಮನೆಗೆಲ್ಲ ನಿರ್ಜನ ಪ್ರದೇಶಕ್ಕೆ!
ಆಗ ವೃದ್ಧೆ ಆತಂಕದಿಂದ ಇಲ್ಯಾಕೆ ಕರೆತಂದ್ರಿ ಎನ್ನುವಾಗಲೇ ವೃದ್ಧೆಯನ್ನ ಬೆದರಿಸಿ ಇಬ್ಬರೂ ಅತ್ಯಾಚಾರ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಅಜ್ಜಿನ ನರಳಾಟ ಕೇಳಿ ನೆರವಿಗೆ ಬಂದ ಸ್ಥಳೀಯರು..!
ನಿರ್ಜನ ಪ್ರದೇಶದಲ್ಲಿ ರಾತ್ರಿ ಅತ್ಯಾಚಾರಕ್ಕೊಳಗಾದ ವೃದ್ಧೆ ನರಳಾಡಿದ್ದಾಳೆ. ಸಹಾಯಕ್ಕೆ ಸಣ್ಣ ದನಿಯಲ್ಲೆ ಕೂಗಿದ್ದಾಳೆ. ನಿರ್ಜನ ಪ್ರದೇಶದಲ್ಲಿ ಯಾರೂ ಕೂಡ ಇರದ ಕಾರಣ ತಕ್ಷಣಕ್ಕೆ ಯಾರೊಬ್ಬರು ನೆರವಿಗೆ ಬಂದಿಲ್ಲ. ಬಳಿಕ ಸ್ಥಳೀಯರೊಬ್ಬರು ಅದೆ ಮಾರ್ಗದಲ್ಲಿ ಸಾಗುತ್ತಿದ್ದಾಗ ಅಜ್ಜಿಯ ನರಳಾಟ ಕೇಳಿದೆ. ಸಹಾಯಕ್ಕೆ ಬಂದ ಸ್ಥಳೀಯರು ವೃದ್ಧೆಯ ಸ್ಥಿತಿ ಕಂಡು 112ಗೆ ಕರೆಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ತುರ್ತಾಗಿ ಆಗಮಿಸಿದ 112 ಸಿಬ್ಬಂದಿ ವೃದ್ಧೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ದೂರು ಪಡೆದುಕೊಂಡಿದ್ದಾರೆ.
ಆಟೋ ಚಾಲಕರ ವೇಷದಲ್ಲಿ ನೀಚಕೃತ್ಯ..!
ಆಟೋ ಚಾಲಕರು ಅಂದ್ರೆ ನಂಬಿಕೆಗೆ ಅರ್ಹರು ಅನ್ನೋ ಮಾತಿದೆ. ರಸ್ತೆಯಲ್ಲಿ ನಿಂತಾಗ ಏನಾದ್ರು ಸಮಸ್ಯೆ ಉಂಟಾದ್ರೆ ಪಟ್ ಅಂತಾ ನೆರವಿಗೆ ಬರೋರೆ ಆಟೋ ಚಾಲಕರು. ಹೀಗಾಗಿಯೆ ತಡರಾತ್ರಿಯಾದ್ರೂ ಎಂಥವರು ಆಟೋ ಚಾಲಕರನ್ನ ನಂಬಿ ಆಟೋ ಹತ್ತುತ್ತಾರೆ. ಅಂದಿನಿಂದ ಇಂದಿಗು ಆಟೋ ಚಾಲಕರು ಒಂಥರ ಸಮಾಜಸೇವಕರೆ ಆಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈ ಇಬ್ಬರು ಕಾಮುಕರು ಜನರ ನಂಬಿಕೆಯನ್ನ ಇಲ್ಲಿ ದುರುಪಯೋಗ ಪಡೆಸಿಕೊಂಡಿದ್ದಾರೆ. ಸದ್ದಾಂ ಹಾಗೂ ರವಿ ಆಟೋ ಚಾಲಕರ ವೇಷ ತೊಟ್ಟು ವೃದ್ಧೆಯನ್ನ ನಂಬಿಸಿ ಕೃತ್ಯವೆಸಗಿದ್ದಾರೆ.
43 ವರ್ಷದ ವ್ಯಕ್ತಿಯಿಂದ ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ!
ಸಿಸಿ ಕ್ಯಾಮರಾ ಸಹಾಯದಿಂದ ಸಿಕ್ಕಿಬಿದ್ದ ಕಾಮಕರು..!
ವೃದ್ಧೆಯಿಂದ ದೂರು ಪಡೆದುಕೊಂಡ ಪೊಲೀಸರು ಕಾಮುಕರಿಗಾಗಿ ಪೊಲೀಸರು ಹುಡುಕಾಡಿದ್ದಾರೆ. ರಾತ್ರಿ ಅಡ್ಡಾಡಿದ ಆಟೋಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸಿಸಿಟಿವಿಗಳ ಆಧಾರವಾಗಿ ಆಟೋ ನಂಬರ್ ಪಡೆದುಕೊಂಡು ತನಿಖೆ ಶುರು ಮಾಡಿದ್ದಾರೆ. ಬಳಿಕ ಇಂಥವರೆ ಆಟೋ ತೆಗೆದುಕೊಂಡು ಹೋಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಎಳೆತಂದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಇಬ್ಬರು ಕಾಮುಕರು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡೆಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ