
ಮಂಡ್ಯ (ಅ.16): ಕುರಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ.
ಮತ್ತಿಕೆರೆ ಗ್ರಾಮಕ್ಕೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು. ಗ್ರಾಮಸ್ಥ ಕುರಿ ಮೇಯಿಸುತ್ತಿದ್ದಾಗ ಹೊಂಚುಹಾಕಿ ಕುರಿ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಕುರಿ ಕಳ್ಳತನದ ದೃಶ್ಯ ಕಂಡು ಮಾಲೀಕ ಕಳ್ಳರನ್ನು ಹಿಂಬಾಲಿಸಿದ್ದಾನೆ. ಗ್ರಾಮದ ಯುವಕರು ಸಹ ಕಳ್ಳರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು. ಬಳಿಕ ಕಳ್ಳರಿಗೆ ಯುವಕರಿಂದ ಧರ್ಮದೇಟು. ಈ ವೇಳೆ ತಪ್ಪಾಗಿದೆ ನಮ್ಮನ್ನು ಬಿಟ್ಟುಬಿಡಿ ಎಂದು ಅಂಗಲಾಚಿರುವ ಕಳ್ಳರು. ಕೈಮುಗಿದು ಬೇಡಿಕೊಂಡರು ಬಿಡದ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕೆಆರ್ ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಅಸಹ್ಯವಾಗಿ ಮುಟ್ತಿದ್ದ ಕಾಮುಕ ಶಿಕ್ಷಕ: ಪೋಷಕರಿಂದ ಧರ್ಮದೇಟು!
ಕ್ರಿಕೆಟ್ ಬೆಟ್ಟಿಂಗ್ ಮೂವರು ಆರೋಪಿಗಳ ಬಂಧನ
ಮಂಗಳೂರು : ಕ್ರಿಕೆಟ್ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ಕಟ್ಟಿ ಜೂಜಾಟವಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಕೇಸ್: 30ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಸಂಕಷ್ಟ?
ಹಳೆಯಂಗಡಿ ನಿವಾಸಿ ದೀಪಕ್(33) ಮತ್ತು ಮರಕಡ ನಿವಾಸಿ ಸಂದೀಪ್ ಶೆಟ್ಟಿ(38), ಸಂದೀಪ್ ಪೈ(44) ಬಂಧಿತ ಆರೋಪಿಗಳು. ಮೊಬೈಲ್ ಫೋನ್ ನಲ್ಲಿ ಅ್ಯಪ್ ಉಪಯೋಗಿಸಿಕೊಂಡು ಬೆಟ್ಟಿಂಗ್. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಸಿಸಿಬಿ ಪೊಲೀಸರು. ಆರೋಪಿಗಳಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು 31 ಸಾವಿರ ನಗದು ಹಾಗೂ 4 ಮೊಬೈಲ್ ಫೋನ್ ವಶಪಡಿಕೊಂಡ ಪೊಲೀಸರು. ಸದ್ಯ ಘಟನೆ ಸಂಬಂಧ ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲ ಮಾಡಲಾಗಿದೆ. ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ