ಉತ್ತರ ಕನ್ನಡ: ₹10 ಲಕ್ಷ ಮೊತ್ತದ ಚರಸ್‌ ಮಾರಾಟಕ್ಕೆ ಯತ್ನ, ಮೂವರ ಬಂಧನ

By Kannadaprabha NewsFirst Published Mar 17, 2023, 1:08 PM IST
Highlights

ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಮೊತ್ತದ ಮಾದಕ ವಸ್ತುಗಳನ್ನು ಗೋಕರ್ಣ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ .10 ಲಕ್ಷ ರೂ. ಮೌಲ್ಯದ (charas drug) ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ಮಾಡಲಾಗಿದೆ.

ಗೋಕರ್ಣ (ಮಾ.17) : ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಮೊತ್ತದ ಮಾದಕ ವಸ್ತುಗಳನ್ನು ಗೋಕರ್ಣ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ .10 ಲಕ್ಷ ರೂ. ಮೌಲ್ಯದ (charas drug) ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ಮಾಡಲಾಗಿದೆ.

ಇಲ್ಲಿನ ಓಂ ಕಡಲ ತೀರದ ಬಳಿ ಪ್ರವಾಸಿಗರಿಗೆ ಚರಸ್‌ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗೋಕರ್ಣ ಬೇಲೆಹಿತ್ತಲ ನಿವಾಸಿ ತುಳಸು ಹಮ್ಮು ಗೌಡ, ಮೂಲೆಕೇರಿ ನಿವಾಸಿ ಶ್ರೀಧರ ಗೌಡ ಹಾಗೂ ನೇಪಾಳದ ಸಂತ ಬಹದ್ದೂರ ತಮಂಗ್‌ ಆರೋಪಿಗಳಾಗಿದ್ದು, ಚರಸ್‌ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇಲೆ ಗೋಕರ್ಣ ಪೊಲೀಸರು ದಾಳಿ ನಡೆಸಿ .10 ಲಕ್ಷ ಮೌಲ್ಯದ 1.549 ಕೆಜಿ ಚರಸ್‌ ವಶಪಡಿಸಿಕೊಂಡಿದ್ದಾರೆ. ಒಂದು ದ್ವಿಚಕ್ರ ವಾಹನ, 2 ಮೊಬೈಲ್‌ಗಳು, ಎಲೆಕ್ಟ್ರಾನಿಕ್‌ ತಕ್ಕಡಿ ಜಪ್ತು ಮಾಡಲಾಗಿದೆ.

ಆರೋಪಿ ಸಂತ ಬಹದ್ದೂರ ತಮಂಗ ನೇಪಾಳ ದೇಶದ ಪ್ರಜೆಯಾಗಿದ್ದು, ಕಳೆದ 17 ವರ್ಷಗಳಿಂದ ಕುಡ್ಲೆಯಲ್ಲಿ ವಾಸಿಸುತ್ತಿದ್ದಾನೆ. ತುಳಸು ಗೌಡನ ವಿರುದ್ಧ ಈಗಾಗಲೇ 3 ಗಾಂಜಾ ಮಾರಾಟದ ಪ್ರಕರಣಗಳು ದಾಖಲಾಗಿದೆ. ಗೋಕರ್ಣ ಠಾಣೆಯ ಪೊಲೀಸ್‌ ನಿರೀಕ್ಷಕ ಮಂಜುನಾಥ ಎಂ, ಪಿಎಸ್‌ಐ ಹರೀಶ ಎಚ್‌.ವಿ, ಪಿಎಸ್‌ಐ ಶಕ್ತಿವೇಲು, ಎಎಸ್‌ಐ ಅರವಿಂದ ಶೆಟ್ಟಿಹಾಗೂ ಸಿಬ್ಬಂದಿ ವಸಂತ ನಾಯ್ಕ, ರಾಜೇಶ ನಾಯ್ಕ, ಸಚಿನ ನಾಯ್ಕ, ನಾಗರಾಜ ನಾಯ್ಕ, ಜ.ಅ. ರಾಣಿ, ಕಿರಣಕುಮಾರ, ಗಣೇಶ, ದಾಸ, ಕಂದಾಯ ಇಲಾಖೆಯ ಅಧಿಕಾರಿಗಳಾದ ಸಂತೋಷ ಶೇಟ್‌, ಎಚ್‌. ಮಂಜಪ್ಪ ಕಾರ್ಯಾಚರಣೆಯಲ್ಲಿದ್ದರು.

ಇನ್ಮುಂದೆ ದೇಶದಲ್ಲೇ ಔಷಧಗಳ ಮೂಲ ಪದಾರ್ಥ, MRI ಮಷಿನ್ ಉತ್ಪಾದನೆಯೂ ಆಗುತ್ತೆ!

click me!