ಗ್ಯಾಸ್ ಕಟರ್‌ನಿಂದ ಎಟಿಎಂ ಮಷಿನ್ ಕತ್ತರಿಸಿ ಖತರ್ನಾಕ ಖದೀಮರು ಲಕ್ಷಾಂತರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿನ ಇಂಡಿಯಾ ಒನ್ ಎಟಿಎಂನಲ್ಲಿ ನಡೆದಿದೆ.
ವಿಜಯಪುರ (ನ.6): ಗ್ಯಾಸ್ ಕಟರ್‌ನಿಂದ ಎಟಿಎಂ ಮಷಿನ್ ಕತ್ತರಿಸಿ ಖತರ್ನಾಕ ಖದೀಮರು ಲಕ್ಷಾಂತರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲಿನ ಇಂಡಿಯಾ ಒನ್ ಎಟಿಎಂನಲ್ಲಿ ನಡೆದಿದೆ.
ಖದೀಮರು ವೃತ್ತಿಪರ ಕಳ್ಳರಾಗಿದ್ದಾರೆ. ಎಟಿಎಂ ದರೋಡೆ ಮಾಡುವ ಮುಂಚೆ ಭಾರೀ ಪ್ಲಾನ್ ಮಾಡಿಕೊಂಡಿದ್ದಾರೆ. ಎಟಿಎಂ ಮಷಿನ್ ಕಟಿಂಗ್ ಮಾಡುವಾಗ ಸಿಸಿಟಿವಿ ಕಣ್ಣಿಗೆ ಬೀಳಬಾರದೆಂಬ ಕಾರಣಕ್ಕೆ ದರೋಡೆಗೆ ಮೊದಲು ಸಿಸಿ ಕ್ಯಾಮೆರಾಕ್ಕೆ ಕಲರ್ ಸ್ಪ್ರೇ ಮಾಡಿರುವ ಖದೀಮರು. ಬಳಿಕ ಗ್ಯಾಸ್ ಕಟಿಂಗ್ ಬಳಸಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಟಿಎಂನಿಂದ 3.60 ಲಕ್ಷ ಕಳ್ಳತನವಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಯಗೊಂಡ ಜನಾರ ಹಾಗೂ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಠಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ.
ಅಮಾಯಕರನ್ನ ಯಾಮಾರಿಸಿ ಕೋಟ್ಯಂತರ ರೂ. ದೋಚಿದ ಖತರ್ನಾಕ್ ದಂಪತಿ!