
ಮುಂಬೈ: ಹುಸಿ ಜ್ಯೋತಿಷ್ಯ ಹೇಳಿ ಮಹಿಳೆಯರನ್ನು ಬೆದರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತಿರುವ ಮಹಾರಾಷ್ಟ್ರದ ನಾಸಿಕ್‌ನ ವಿವಾದಿತ ಜ್ಯೋತಿಷಿ ಅಶೋಕ್ ಖರಾತ್‌ಗೆ ಸೇರಿದ 1500 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಮಹಾರಾಷ್ಟ್ರ ವಿಶೇಷ ತನಿಖಾ ತಂಡ ಪತ್ತೆ ಮಾಡಿದೆ, ಅಲ್ಲದೆ, 100 ಅಶ್ಲೀಲ ವಿಡಿಯೋಗಳು ಬೆಳಕಿಗೆ ಬಂದಿವೆ.
ಹೀಗಾಗಿ ಈತನ ವಿರುದ್ಧ ತನಿಖೆಗೆ ಇದೀಗ ವಿಶೇಷ ತನಿಖಾ ತಂಡದ (ಎಸ್‌ಐಟಿ) ಜತೆ ಆದಾಯ ಇಲಾಖೆ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಅಲ್ಲದೆ ಈತನ ಮನೆಯ ಮೇಲೆ ದಾಳಿ ವೇಳೆ ಅಲ್ಲಿ 21 ಸಜೀವ ಕಾರ್ಟ್ರಿಡ್ಜ್‌ಗಳು ಹಾಗೂ 5 ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಇವನ್ನು ‘ನರಬಲಿ’ ನೀಡಲು ಬಳಸುತ್ತಿದ್ದನೇ ಎಂಬ ಶಂಕೆ ಉಂಟಾಗಿದೆ.
20 ವರ್ಷಗಳ ಕಾಲ ವಾಣಿಜ್ಯ ಹಡಗಿನಲ್ಲಿ ಅಧಿಕಾರಿಯಾಗಿದ್ದ ಅಶೋಕ್ ಬಳಿಕ ಜ್ಯೋತಿಷ್ಯ ಹೇಳಲು ಶುರು ಮಾಡಿದ್ದ. ತನ್ನ ಬಳಿ ಬರುತಿದ್ದ ಸ್ತ್ರೀಯರ ಜತೆ ಅನುಚಿತವಾಗಿ ವರ್ತಿಸಿ ಅದರ ಸಿಸಿಟೀವಿ ದೃಶ್ಯಾವಳಿಗಳನ್ನು ಕಾಪಿಡುತ್ತಿದ್ದ. ಈ ಬಗ್ಗೆ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಮಾ.18ರಂದು ಆತನನ್ನು ಬಂಧಿಸಲಾಗಿತ್ತು. ಇದೀಗ ಆ ವಿಡಿಯೋಗಳನ್ನು ಸೈಬರ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅತ್ತ ಐಟಿ ಇಲಾಖೆಯು ಹಣಕಾಸಿನ ಅಕ್ರಮ ಮತ್ತು ಆಸ್ತಿ ಹಿಡುವಳಿಯ ತನಿಖೆ ನಡೆಸುತ್ತಿದೆ.
- ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಕುಖ್ಯಾತ ಜ್ಯೋತಿಷಿ ಅಶೋಕ್
- ನಿಮ್ಮ ಪತಿಗೆ ಕಂಟಕ ಎಂದು ಹೇಳಿ ಶ್ರೀಮಂತ ಸ್ತ್ರೀಯರಿಗೆ ವಂಚನೆ, ಲೈಂಗಿಕ ಕಿರುಕುಳ
- ಇತ್ತೀಚೆಗೆ ಮಹಿಳೆಯೊಬ್ಬಳು ದೂರು ನೀಡಿದ ಬಳಿಕ ಆರೋಪಿ ಸೆರೆ, ಪೊಲೀಸರ ದಾಳಿ
- ಈ ವೇಳೆ ಜ್ಯೋತಿಷಿಗೆ ಸೇರಿದ ₹1500 ಕೋಟಿ ಮೌಲ್ಯದ ಆಸ್ತಿ, 100 ಸೆಕ್ಸ್ ಸಿಡಿ ಪತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ