Davanagere: ಹಣಕಾಸಿನ ಜಗಳ ಮಧ್ಯೆ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ: ಯುವತಿಯರು ಸೇರಿ ನಾಲ್ವರ ಬಂಧನ

By Govindaraj S  |  First Published Jan 26, 2023, 1:00 AM IST

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಯುವತಿಯರು ಹಾಗು ಯುವಕರ ನಡುವೆ ನಡೆದ ಜಗಳವನ್ನು ಬಿಡಿಸಲು ಮಧ್ಯೆ ಪ್ರವೇಶಿಸಿದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಯುವತಿ ಹಲ್ಲೆ ಮಾಡಿರುವ ಘಟನೆ ಕಳೆದ ದಿನ ತಡರಾತ್ರಿ ಜರುಗಿದೆ. 


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ

ದಾವಣಗೆರೆ (ಜ.26): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಯುವತಿಯರು ಹಾಗು ಯುವಕರ ನಡುವೆ ನಡೆದ ಜಗಳವನ್ನು ಬಿಡಿಸಲು ಮಧ್ಯೆ ಪ್ರವೇಶಿಸಿದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಯುವತಿ ಹಲ್ಲೆ ಮಾಡಿರುವ ಘಟನೆ ಕಳೆದ ದಿನ ತಡರಾತ್ರಿ ಜರುಗಿದೆ. ಇನ್ನು ಹಲ್ಲೇ ಮಾಡಿದ ಬೇನಲ್ಲೇ ಮಹಿಳಾ ಪೋಲಿಸ್ ಕಾನ್ಸ್‌ಟೇಬಲ್‌ಗೆ ಕೈಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಪೋಲಿಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. 

Tap to resize

Latest Videos

ಇನ್ನು ಈ ಘಟನೆ ದಾವಣಗೆರೆಯ ವಿದ್ಯಾನಗರದ ಕೊನೆ ಬಸ್ ಸ್ಟಾಪ್ ಬಳಿ ಕಳೆದ ದಿನ‌ತಡರಾತ್ರಿ ಜರುಗಿದೆ. ಇಬ್ಬರು ಯುವತಿಯರು, ಮಂಜುನಾಥ ಮತ್ತು ಹರ್ಷಾ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರ ಮೂಲದ  ಯುವತಿಯರನ್ನು ನಗರಕ್ಕೆ ಕರೆಸಿ ವೇಶ್ಯಾವಾಟಿಕೆಗೆ ತಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕೊಡಮಾಡುವ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಿರುವಾಗಲೇ ಕುಸಿಯುತ್ತಿದ್ದ ತಡೆಗೋಡೆ ತೆರವು!

ಘಟನೆಯ ಹಿನ್ನಲ್ಲೇ ಹಿಂದೆ ಹೈಟೆಕ್ ವೇಶ್ಯಾವಾಟಿಕೆ ಕರಿನೆರಳು: ದಾವಣಗೆರೆಯ ಯೋಗೀಶ್, ಕುಮಾರ್ ನಾಯ್ಕ್, ಹೇಮರಾಜ್ ಅವರ ಜೊತೆ ಪೋನ್ ಸಂಪರ್ಕದಲ್ಲಿದ್ದ ಮಹಾರಾಷ್ಟ್ರ ಮೂಲದ ಯುವತಿಯರು ದಾವಣಗೆರೆಗೆ ಆಗಮಿಸಿದ್ದರು. ಮಂಗಳವಾರ ತಡ ರಾತ್ರಿ ಗಿರಾಕಿಗಳಾದ ಶಿವಮೊಗ್ಗ ಮೂಲದ ಹರೀಶ್ ಮತ್ತು ಮಂಜುನಾಥ್ ಜೊತೆ ವಿದ್ಯಾನಗರದ ಲಾಸ್ಟ್ ಬಸ್‌ಸ್ಟಾಪ್‌ನಲ್ಲಿ ಕಿತ್ತಾಡಿಕೊಂಡಿದ್ದಾರೆ. 

ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಪೊಲೀಸರು. ಜಗಳ ಬಿಡಿಸಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಓರ್ವ ಮಹಿಳಾ ಪೊಲೀಸ್ ಕಾನ್ಸಟೇಬಲ್‌ಗೆ ಗಾಯವಾಗಿದ್ದು, ಕುಡಿದ ಮತ್ತಿನಲ್ಲಿದ್ದ ಯುವತಿಯರು ಗಲಾಟೆ ಎಬ್ಬಿಸಿ ರಾದ್ದಾಂತ ಮಾಡಿದ್ದಾರೆ. ಕೊನೆಗೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಬಿಜೆಪಿ ಎಂಬ ಬುಲ್ಡೋಜರ್‌ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು

ಎಸ್ಪಿ ಸಿಬಿ‌ ರಿಷ್ಯಂತ್ ಹೇಳಿದ್ದೇ‌ನು?: ವಿದ್ಯಾನಗರ ಠಾಣೆ ಆಗಮಿಸಿದ ಇಬ್ಬರು ಯುವತಿಯರು ಹುಡುಗರು ತೊಂದರೆ ಕೊಡ್ತಿದ್ದಾರೆಂದು ದೂರುಕೊಡಲು ಮುಂದಾಗಿದ್ರು, ವಿಚಾರಣೆ ನಡೆಸಿದಾಗ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದರು, ವಿಚಾರಣೆ ನಡೆಸಿದಾಗ ಅವರಿಬ್ಬರೂ ಮುಂಬೈ ಮೂಲದ ಯುವತಿಯರು, ಯೋಗೆಶ್ ಎಂಬುವನು ಮುಂಬೈನಿಂದ ಇಬ್ಬರು ಯುವತಿಯರನ್ನು ಕರೆದುಕೊಂಡು ಬಂದಿದ್ದಾ, ಯುವತಿರನ್ನು ಬಳಸಿಕೊಂಡಿದ್ದಾರೆ ಎಂದು ಯುವತಿಯರು ವಿಚಾರಣೆಯಲ್ಲಿ ಮಾಹಿತಿ ನೀಡಿದ ಬೆನ್ನಲ್ಲೇ ಯೋಗೇಶ್, ಕುಮಾರ್ ನಾಯ್ಕ್, ಹೇಮರಾಜ್ ವಿರುದ್ಧ ಹಾಗು ಪೋಲಿಸರ ಮೇಲೆ ಹಲ್ಲೆ‌ ಮಾಡಿದ ಯುವತಿಯರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಇನ್ನು ಇವೆಂಟ್ ಮ್ಯಾನೇಜ್ಮೆಂಟ್‌ಗೆ ಕರೆಸಲಾಗಿತ್ತು ಎಂದು ಹೇಳಲಾಗುತ್ತಿದ್ದು, ತನಿಖೆ ಬಳಿಕ ಮಾಹಿತಿ ಹೊರಬರಬೇಕಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದರು.

click me!