'ಪಬ್ಲಿಕ್‌ನಲ್ಲಿ ಮೂತ್ರಮಾಡಬೇಡಿ'  ಬುದ್ಧಿ ಹೇಳಿದ್ದಕ್ಕೆ ಜಜ್ಜಿ ಕೊಂದರು

By Suvarna News  |  First Published Jun 6, 2021, 5:30 PM IST

* ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ
* ಬುದ್ಧಿವಾದ  ಹೇಳಿದ ವ್ಯಕ್ತಿಯನ್ನು ಥಳಿಸಿದ ದುಷ್ಕರ್ಮಿಗಳು
* ಕಾರಿನ ಅಡಿಗೆ ದೂಡಿ ಹಲ್ಲೆ
* ಹಲ್ಲೆಗೊಳಗಾದ ವ್ಯಕ್ತಿ ಸಾವು 


ಕಾನ್ಪುರ(ಜೂ.  06)  ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಬುದ್ಧಿಹೇಳಿದ ಮನುಷ್ಯನ  ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.  ಮೆಕ್ಯಾನಿಕ್ ಆಗಿ  ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಅಂಗಡಿ ಸಮೀಪ ಮೂತ್ರ ವಿಸರ್ಜನೆ ಮಾಡುತ್ತಿದ್ದ ನಾಲ್ವರನ್ನು ಪ್ರಶ್ನೆ ಮಾಡಿದ್ದಾನೆ. ಇದೇ ಕಾರಣಕ್ಕೆ ಕ್ರೋಧಗೊಂಡ ಗುಂಪು ಆತನನ್ನು ಕಾರಿನ ಅಡಿಗೆ ತಳ್ಳಿ ಥಳಿಸಿದೆ. ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಮದ್ಯದ ನಶೆಯಲ್ಲಿದ್ದ ಆರೋಪಿಗಳು ಪ್ರಶ್ನೆ ಮಾಡಿದ ಅಶ್ರಫ್ ಮೇಲೆ ದಾಳಿ ಮಾಡಿದ್ದಾರೆ. ಫಹೀಮಾಬಾದ್ ಚಮಂಗಂಜ್ ಅಶ್ರಫ್ ನೌಬಸ್ತಾದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.

Tap to resize

Latest Videos

ತಂಗಿ ಎಂಗೇಜ್‌ ಮೆಂಟ್ ದಿನ ತರಕಾರಿ ತರಲು ಹೋದ ಅಣ್ಣನ ಕೊಲೆ

ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಅಶ್ರಫ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ  ಎದುರಿಗೆ ನಿಲ್ಲಿಸಿದ್ದ ಕಾರನಿನಲ್ಲಿ ಏನೋ ನಡೆಯುತ್ತಿರುವುದು ಗೊತ್ತಾಗಿದೆ.  ಮದ್ಯದ ಸಮಾರಾಧನೆಯಲ್ಲಿದ್ದ ನಾಲ್ವರು ವ್ಯಕ್ತಿಗಳು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಲು ಮುಂದಾಗಿದ್ದಾರೆ. ಅಶ್ರಫ್ ಇದನ್ನು ಪ್ರಶ್ನೆ ಮಾಡಿದ್ದಾರೆ.

ಅಶ್ರಫ್ ಗೆ ಬೆದರಿಕೆ  ಹಾಕಿದ ದುಷ್ಕರ್ಮಿಗಳು  ನಿನ್ನ ಮಾಲೀಕ ಅನುರಾಗ್ ಕಪೂರ್ ನನ್ನು ಕರೆದುಕೊಂಡು ಬಾ.. ಆತನ ಬಳಿಯೇ ಮಾತನಾಡುತ್ತೇವೆ ಎಂದು ಅವಾಜ್ ಹಾಕಿದ್ದಾರೆ. ಘಟನೆಯನ್ನು ದೂರದಿಂದ ನೋಡಿದ ವ್ಯಕ್ತಿಯೊಬ್ಬರು ಪೊಲೀಸರು ಮತ್ತು ಆಸ್ಪತ್ರೆಗೆ ಮಾಹಿತಿ ನೀಡಿದ್ದಾಋಎ. ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. 

 

click me!