Arpita Mukherjee ಬಳಿ 1.5 ಕೋಟಿ ಪ್ರೀಮಿಯಂನ 31 ವಿಮೆ ಪಾಲಿಸಿ..! Partha Chatterjeeಯಿಂದ ಹಣ ಪಾವತಿ..!

By Kannadaprabha NewsFirst Published Sep 21, 2022, 8:09 AM IST
Highlights

ಅರ್ಪಿತಾ ಮುಖರ್ಜಿ 1.5 ಕೋಟಿ ರೂ. ವಾರ್ಷಿಕ ಮೊತ್ತದ ಜೀವ ವಿಮೆ ಪಾಲಿಸಿ ಹೊಂದಿದ್ದಳು. ಅದನ್ನು ಪಾರ್ಥ ಚಟರ್ಜಿಯೇ ವಿವಿಧ ಬ್ಯಾಂಕ್‌ ಅಕೌಂಟ್‌ಗಳ ಮೂಲಕ ಪಾವತಿಸುತ್ತಿದ್ದರು ಎಂದು ಇಡಿ ಹೇಳಿದೆ. 

ನವದೆಹಲಿ: ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ (West Bengal School Service Commission Scam) ಆರೋಪಿಯಾಗಿರುವ ಅರ್ಪಿತಾ ಮುಖರ್ಜಿ ವಾರ್ಷಿಕ 1.5 ಕೋಟಿ ರೂ. ಪ್ರೀಮಿಯಂ ಪಾವತಿಸುವ ಒಟ್ಟು 31 ಜೀವವಿಮೆ ಪಾಲಿಸಿಗಳನ್ನು (Life Insurance Policy) ಹೊಂದಿದ್ದಳು ಎಂಬ ಅಚ್ಚರಿಯ ಸಂಗತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) (ಇ.ಡಿ) ಬಹಿರಂಗಪಡಿಸಿದೆ. ಅಲ್ಲದೆ ಈ ಎಲ್ಲ ಪಾಲಿಸಿಗಳಿಗೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ವಾರಸುದಾರರಾಗಿದ್ದಾರೆ. ಅಲ್ಲದೆ ಪಾರ್ಥ ಚಟರ್ಜಿಯೇ ತನ್ನ ವಿವಿಧ ಬ್ಯಾಂಕ್‌ ಖಾತೆಗಳಿಂದ ಈ ಪಾಲಿಸಿಗಳಿಗೆ ಪ್ರೀಮಿಯಂ (Premium) ಪಾವತಿಸಿದ್ದಾರೆ ಎಂದು ಇ.ಡಿ. ಹೇಳಿದೆ. ಅರ್ಪಿತಾಳ ಮನೆಯಲ್ಲಿ ಸುಮಾರು 50 ಕೋಟಿ ರೂ. ನಗದು ಪತ್ತೆಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ. 

ಅದರಲ್ಲಿ ಅರ್ಪಿತಾ ಮುಖರ್ಜಿಯ ಜೀವವಿಮೆ ಪಾಲಿಸಿಗಳ ಕರ್ಮಕಾಂಡವನ್ನು ಬಿಚ್ಚಿಡಲಾಗಿದೆ. ಪಾಲಿಸಿಯಲ್ಲಿ ಪಾರ್ಥ ಚಟರ್ಜಿ ಈಕೆಯ ಅಂಕಲ್‌ ಎಂದು ನಮೂದಿಸಲಾಗಿದೆ. ಈ ಪಾಲಿಸಿಗಳೇ ಅರ್ಪಿತಾ ಮುಖರ್ಜಿ ಮತ್ತು ಪಾರ್ಥ ಚಟರ್ಜಿ ನಡುವಿನ ಸಖ್ಯವನ್ನು ಸಾಬೀತುಪಡಿಸಲು ಇರುವ ಪ್ರಮುಖ ಸಾಕ್ಷ್ಯ ಎಂದು ಇ.ಡಿ. ಹೇಳಿದೆ. ಕೇಂದ್ರೀಯ ಏಜೆನ್ಸಿ ವಸೂಲಿ ಮಾಡಿದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ದಾಖಲೆಗಳ ಪ್ರಕಾರ, ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವರ ವಿವಿಧ ಬ್ಯಾಂಕ್ ಖಾತೆಗಳಿಂದ ಇಷ್ಟು ದೊಡ್ಡ ಪ್ರೀಮಿಯಂ ಪಾವತಿಸಲಾಗಿದೆ ಎಂಬುದು ಹೆಚ್ಚು ಆಸಕ್ತಿದಾಯಕವಾಗಿದೆ.

ಇದನ್ನು ಓದಿ: ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ, ಆಪ್ತೆ ಅರ್ಪಿತಾಗೆ 14 ದಿನ ನ್ಯಾಯಾಂಗ ಬಂಧನ

"ವಿಮಾ ಪಾಲಿಸಿಗಳ ಈ ಸಂಪೂರ್ಣ ಅನುಕ್ರಮ ಮತ್ತು ಅವುಗಳ ಪಾವತಿ ಪ್ರಕ್ರಿಯೆಯು ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಕೇವಲ ಪರಿಚಯಸ್ಥರು ಎಂದು ಕೆಲವು ವಿಭಾಗಗಳು ಎತ್ತಿರುವ ವಾದವನ್ನು ರದ್ದುಗೊಳಿಸಲು ಸಾಕಷ್ಟು ಪುರಾವೆಯಾಗಿದೆ. ಈ ಜೀವ ವಿಮಾ ಪಾಲಿಸಿಗಳು ಇಬ್ಬರೂ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ದೃಢವಾದ ಪುರಾವೆಯಾಗಿದೆ" ಎಂದು ED ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಜೀವ ವಿಮಾ ಪಾಲಿಸಿಗಳ ಹೊರತಾಗಿ, ಚಟರ್ಜಿ ಮತ್ತು ಮುಖರ್ಜಿ ಜಂಟಿಯಾಗಿ ಒಡೆತನದ ಇತರ ಕೆಲವು ಭೂ ಆಸ್ತಿಯು ಕೇಂದ್ರೀಯ ಏಜೆನ್ಸಿಗಳಿಗೆ ಇಬ್ಬರ ನಡುವೆ ನಿಕಟ ಸಂಬಂಧವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ಪ್ರಕರಣದ ಚಾರ್ಜ್ ಶೀಟ್‌ನಲ್ಲಿ, ಜಾರಿ ನಿರ್ದೇಶನಾಲಯ ಒಟ್ಟು 8 ವ್ಯಕ್ತಿಗಳನ್ನು ಹೆಸರಿಸಿದೆ - ಈ ಪೈಕಿ ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ ಮತ್ತು ಆರು ಶೆಲ್ ಕಂಪನಿಗಳ ನಿರ್ದೇಶಕರು ಹಗರಣದ ಆದಾಯವನ್ನು ವಿವಿಧ ಕಡೆ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೆ, ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಹೊಂದಿರುವ 103.10 ಕೋಟಿ ಮೌಲ್ಯದ ಆಸ್ತಿಯನ್ನು ತನಿಖಾ ಸಂಸ್ಥೆ ಉಲ್ಲೇಖಿಸಿದೆ.

ಇದನ್ನೂ ಓದಿ: ಇಡಿ ಕಸ್ಟಡಿ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ

ಜುಲೈನಲ್ಲಿ ಕೋಲ್ಕತ್ತಾದಲ್ಲಿರುವ ಅರ್ಪಿತಾ ಮುಖರ್ಜಿ ಅವರ ಎರಡು ನಿವಾಸಗಳಿಂದ ವಶಪಡಿಸಿಕೊಂಡ ಆಸ್ತಿಯಲ್ಲಿ 49.80 ಕೋಟಿ ರೂಪಾಯಿ ನಗದು ಮತ್ತು 5.08 ಕೋಟಿ ರೂಪಾಯಿ ಮೌಲ್ಯದ ಚಿನ್ನ ಸೇರಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತನಾಗಿದ್ದ ಪಾರ್ಥ ಚಟರ್ಜಿ ಬಂಗಾಳದಲ್ಲಿ ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ನೂರಾರು ಕೋಟಿ ರೂ. ಹಗರಣ ಎಸಗಿದ್ದಾರೆ ಎನ್ನಲಾಗಿದ್ದು, ಲಂಚದ ಹಣವನ್ನು ಅರ್ಪಿತಾಳ ಮನೆಯಲ್ಲಿ ಬಚ್ಚಿಟ್ಟಿದ್ದರು ಎಂದು ಹೇಳಲಾಗಿದೆ.

click me!