ಮದುವೆ ಆಗುವುದಾಗಿ ನಂಬಿಸಿ ಗೃಹಿಣಿಗೆ ಅರ್ಚಕ ಮೋಸ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ.
ಮೈಸೂರು (ಜೂ. 23): ಮದುವೆ ಆಗುವುದಾಗಿ ನಂಬಿಸಿ ಗೃಹಿಣಿಗೆ ಅರ್ಚಕ ಮೋಸ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ. ಹತ್ತು ದಿನಗಳ ಹಿಂದೆ 21 ವರ್ಷದ ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಈಗ ಕಾಡಿನಲ್ಲಿ ಪತ್ತೆಯಾಗಿದ್ದಾಳೆ. ಕಾಡಿನಲ್ಲಿ ಗೃಹಿಣಿಯನ್ನು ಬಿಟ್ಟು ಅರ್ಚಕ ಪರಾರಿಯಾಗಿದ್ದಾನೆ. ಮಹದೇಶ್ವರ ದೇವಸ್ಥಾನದಲ್ಲಿ ಶಾಸ್ತ್ರ ಕೇಳಲು ಹೋದಾಗ ಅರ್ಚಕ ಪರಿಚಯವಾಗಿದ್ದ ಎನ್ನಲಾಗಿದೆ.
ಬಾಳು ಕೊಡುವುದಾಗಿ ನಂಬಿಸಿ ಅರ್ಚಕ ಸಂತೋಷ ಮಹಳೆಯನ್ನು ಕರೆದುಕೊಂಡು ಹೋಗಿದ್ದ. ಹತ್ತು ದಿನಗಳ ಹಿಂದೆ ಗೃಹಿಣಿ ನಾಪತ್ತೆಯಾಗಿದ್ದಳು. ಆಕೆಯೊಂದಿಗೆ ಹತ್ತು ದಿನಗಳಿಂದ ಒಡನಾಟ ಬೆಳೆಸಿದ ಸಂತೋಷ ಬಳಿಕ ಕಾಡಂಚಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 21 ವರ್ಷದ ಅರ್ಚಕನ ಜೊತೆ ಪರಾರಿಯಾದ ಎರಡು ಮಕ್ಕಳ ತಾಯಿ ಈಗ ಅತಂತ್ರಳಾಗಿದ್ದಾಳೆ.
undefined
35 ವರ್ಷದ ಗೃಹಿಣಿ ಜೂನ್ 12 ರಂದು ತಂದೆ ಮನೆಯಿಂದ ನಾಪತ್ತೆಯಾಗಿದ್ದಳು. ಬಾಳು ಕೊಡುವುದಾಗಿ ನಂಬಿಸಿದ್ದ ಅರ್ಚಕ ಗ್ರಹಿಣಿಯನ್ನು ಕರೆದುಕೊಂಡು ಹೋಗಿದ್ದ. ಆದರೆ ರಾತ್ರೋರಾತ್ರಿ ಅರ್ಚಕ ಎಸ್ಕೇಪ್ ಆಗಿದ್ದು ಇಡೀ ರಾತ್ರಿ ಒಂಟಿಯಾಗಿ ಕಾಡಿನಲ್ಲಿ ಗೃಹಿಣಿ ಕಾಲ ಕಳೆದಿದ್ದಾಳೆ.
ಇದನ್ನೂ ಓದಿ: ಸಾಕ್ಷ್ಯಾಧಾರ ಕೊರತೆ: ತ್ರಿಪಲ್ ಮರ್ಡರ್ ಕೇಸ್ ಆರೋಪಿ ಖುಲಾಸೆ
ಮುಂಜಾನೆ ಸ್ಥಳೀಯರ ಕಣ್ಣಿಗೆ ಬಿದ್ದ ಗೃಹಿಣಿಯ ಕರುಣಾಜನಕ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗೃಹಣಿಯನ್ನು ವಿಚಾರಿಸಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ನಾಪತ್ತೆಯಾಗಿರುವ ಸಂತೋಷ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.