* ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗನ ಸೆರೆ
* ನೋಟಿಸ್ ನೀಡಿದ್ದರೂ ತಲೆ ಮರೆಸಿಕೊಂಡಿದ್ದ ಆರೋಪಿ ಆದಿ
*ಜಯನಗರದಲ್ಲಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ
* ಠಾಣೆ ಜಾಮೀನಿನ ಮೇಲೆ ಬಿಡುಗಡೆ
ಬೆಂಗಳೂರು(ಫೆ. 01) ರಸ್ತೆ ಬದಿ ಮಲಗಿದ್ದ ಬೀದಿ ನಾಯಿ (Dog) ಮೇಲೆ ಕಾರು ಹತ್ತಿಸಿ ಸಾಯಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಉದ್ಯಮಿ ದಿವಂಗತ ಆದಿಕೇಶವಲು (Adikesavalu ) ಅವರ ಮೊಮ್ಮಗ ಆದಿಯನ್ನು ಸೋಮವಾರ ಬಂಧಿಸಿದ್ದ ಸಿದ್ದಾಪುರ ಠಾಣೆ (Bengaluru Police) ಪೊಲೀಸರು ವಿಚಾರಣೆ ನಡೆಸಿ ಠಾಣಾ ಬೇಲ್ ಮೇಲೆ ಬಿಡುಗಡೆಗೊಳಿಸಿದ್ದಾರೆ.
undefined
ಜ.26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್ 10ನೇ ‘ಬಿ’ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಬೀದಿ ನಾಯಿ ಮಲಗಿತ್ತು. ಈ ವೇಳೆ ಆದಿ ಐಷಾರಾಮಿ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಮಲಗಿದ್ದ ಬೀದಿ ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದ. ಕಾರು ನಾಯಿಯ ಮೇಲೆ ಹರಿದ ಪರಿಣಾಮ ನಾಯಿ ಗಾಯಗೊಂಡಿತ್ತು. ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಸಂಬಂಧ ಜಯನಗರ 1ನೇ ಬ್ಲಾಕ್‌ನ ನಿವಾಸಿ ಎಂ.ಎಸ್.ಭದ್ರಿ ಪ್ರಸಾದ್ ಅವರು ಆದಿ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇಲೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಆದಿ ಪತ್ತೆಗೆ ಮುಂದಾಗಿದ್ದರು. ಪೊಲೀಸರು ಮನೆಗೆ ತೆರಳಿದ ವೇಳೆ ಆದಿ ಇರಲಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೂ ಆದಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಸೋಮವಾರ ಕಾರ್ಯಾಚರಣೆ ನಡೆಸಿ ಕಗ್ಗಲೀಪುರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ಮೊಬೈಲ್ ನೋಡ್ತಿದ್ದೆ: ಕಾರು ಚಲಾಯಿಸುವಾಗ ಮೊಬೈಲ್ ನೋಡುತ್ತಿದ್ದೆ. ಈ ವೇಳೆ ಕಾರಿನ ಚಕ್ರ ನಾಯಿ ಮೇಲೆ ಹರಿದಿದೆ ಎಂದು ಆರೋಪಿ ಆದಿ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ. ಆತನ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಠಾಣಾ ಬೇಲ್ ಮಂಜೂರು ಮಾಡಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ.
ಸುಮ್ಮನೆ ಮಲಗಿದ್ದ ಬೀದಿ ನಾಯಿ (Dog) ಮೇಲೆ ಉದ್ದೇಶಪೂರ್ವಕವಾಗಿ ಕಾರು (Car) ಹತ್ತಿಸಿ ದರ್ಪ ಮೆರೆದಿದ್ದಾನೆ. ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ ಆಡಿ ಕಾರನ್ನು ನಾಯಿ ಮೇಲೆ ಹತ್ತಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ(CCTV) ದೃಶ್ಯ ಸೆರೆಯಾಗಿತ್ತು. ಆದಿ ವಿಕೃತಿಗೆ ಸೋಶಿಯಲ್ ಮೀಡಿಯಾದಲ್ಲಿಯೂ ವ್ಯಾಪಕ ಆಕ್ರೋಶ ಕೇಳಿಬಂದಿತ್ತು.
ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ರಕ್ಷಿಸಿದ ಶ್ವಾನ
ಹಿಜಾಬ್ ಧರಿಸಲು ಅವಕಾಶಕ್ಕಾಗಿ ಉಡುಪಿ ವಿದ್ಯಾರ್ಥಿನಿ ಹೈಕೋರ್ಟ್‌ಗೆ:
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿ ವಿವಾದಕ್ಕೆ ಕಾರಣವಾದ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಹಿಜಾಬ್ ಪ್ರಕರಣ ಈಗ (Karnataka Highcourt) ಹೈಕೋರ್ಟ್ ಮೆಟ್ಟಿಲೇರಿದೆ. ತನಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಇಲ್ಲಿನ ವಿದ್ಯಾರ್ಥಿನಿ ರೇಶಮ್ ಫಾರೂಕ್ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಕಾಲೇಜಿನ 6 ವಿದ್ಯಾರ್ಥಿನಿಯರು ತಿಂಗಳ ಹಿಂದೆ ಹಿಜಾಬ್ (ಮುಸ್ಲಿಂ ಸಂಪ್ರದಾಯದ ತಲೆವಸ್ತ್ರ) ಧರಿಸಿ ತರಗತಿಗೆ ಹಾಜರಾಗಿದ್ದರು. ಕಾಲೇಜಿನ ಸಮವಸ್ತ್ರದ ಜೊತೆಗೆ ಧಾರ್ಮಿಕ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ಅವರನ್ನು ತರಗತಿಯಿಂದ ಹೊರ ಕಳುಹಿಸಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿ, ಸರ್ಕಾರ ಹಿಂದಿನ ಸಮವಸ್ತ್ರದ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಿದೆ. ಇದನ್ನೊಪ್ಪದ ಹಿಜಾಬ್ ಪರ ವಿದ್ಯಾರ್ಥಿನಿಯರು, ತರಗತಿ ಹೊರಗೆ ನಿಂತು ಪ್ರತಿಭಟಿಸುತ್ತಿದ್ದಾರೆ.
ಇದೀಗ ವಿದ್ಯಾರ್ಥಿನಿ ರೇಶಮ್ ಫಾರೂಕ್ ಪರ ಕಾಂಗ್ರೆಸ್‌ನ ಎನ್‌ಎಸ್‌ಯುಐನ ರಾಜ್ಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶತಾಬಿಷ್ ಶಿವಣ್ಣ ಅವರು ಹೈಕೋರ್ಟಿಗೆ ರಿಟ್ ಸಲ್ಲಿಸಿದ್ದು, ಸಂವಿಧಾನದ 14 ಮತ್ತು 25ನೇ ವಿಧಿಯನ್ವಯ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು. ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಕಾಲೇಜಿಗೆ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ.