ಅನಂತರಾಜು ಆತ್ಮಹತ್ಯೆ ಪ್ರಕರಣ: ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ ಆರೋಪಿ ರೇಖಾ ಆತ್ಮಹತ್ಯೆ ಯತ್ನ

Published : Jun 01, 2022, 05:19 PM ISTUpdated : Jun 01, 2022, 05:20 PM IST
ಅನಂತರಾಜು ಆತ್ಮಹತ್ಯೆ ಪ್ರಕರಣ: ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ ಆರೋಪಿ ರೇಖಾ ಆತ್ಮಹತ್ಯೆ ಯತ್ನ

ಸಾರಾಂಶ

Anantharaju Suicide Case: ಸುಮಾ ಅವರ ಟಾರ್ಚರ್‌ಗೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ರೇಖಾ ಬ್ಯಾಡರಹಳ್ಳಿ ಪೊಲೀಸ್ ಠಾಣೆ ರಸ್ತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಬೆಂಗಳೂರು (ಜೂ.1): ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ಆಡಿಯೋ ವೈರಲ್ ಬಳಿಕ ಇದೀಗ ಈ ಕೇಸ್ ಗೆ ಮತ್ತೊಂದು ತಿರುವು‌ ಸಿಕ್ಕಿದೆ. ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ  ಅನಂತರಾಜು ಸ್ನೇಹಿತೆ ರೇಖಾ, ಸುಮಾ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಂತರಾಜು ಆತ್ಮಹತ್ಯೆ ಗೆ ನಾನು ಪ್ರಜೋದನೆ ನೀಡಿಲ್ಲ. ಸುಮಾ ಅವರ ಟಾರ್ಚರ್‌ಗೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ರೇಖಾ ಬ್ಯಾಡರಹಳ್ಳಿ ಪೊಲೀಸ್ ಠಾಣೆ ರಸ್ತೆಯಲ್ಲಿ ಆತ್ಮಹತ್ಯೆಗೆ  ಯತ್ನಿಸಿದ್ದಾರೆ. 

ನಾನು ಹನಿಟ್ಯ್ರಾಪ್ ಮಾಡಿಲ್ಲ ಎಲ್ಲರೂ ಹನಿಟ್ಯ್ರಾಪ್ ಹನಿಟ್ಯ್ರಾಪ್ ಅಂತಾ ಹೇಳುತ್ತಿದ್ದಾರೆ ಎಂದು ಹೇಳಿರುವ ರೇಖಾ ತನಗೆ ನ್ಯಾಯ ಸಿಗತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಸ್‌ಗೆ ಅಡ್ಡ ಹೋಗಿ ಆತ್ಮಹತ್ಯೆ ಗೆ  ರೇಖಾ ಯತ್ನಿಸಿದ್ದಾರೆ.  ನಂತರ ಮಾಧ್ಯಮದವರು ರೇಖಾರ ಮನವೊಲಿಸಿ ರಕ್ಷಣೆ ಮಾಡಿದ್ದಾರೆ. 

ಹನಿಟ್ಯ್ರಾಪ್ ಮಾಡಿಲ್ಲ:  ಪ್ರತಿನಿತ್ಯ ಸುಮಾ  ನನಗೆ ಕಾಲ್ ಮಾಡಿ ಅನಂತರಾಜು ಗೆ ಟಾರ್ಚರ್ ನೀಡುತ್ತೇನೆ ಎಂದು ಹೇಳುತ್ತಿದ್ರು. ಎಲ್ಲಾ ಅಡಿಯೋ ರೆಕಾರ್ಡ್ ಗಳನ್ನು ಪೊಲೀಸರಿಗೆ ನೀಡಿದ್ದೇನೆ. ಪೊಲೀಸರು ಪ್ರಕರಣದ ಬಗ್ಗೆ ಸೂಕ್ತ ವಾದ ತನಿಖೆ ನಡೆಸಬೇಕು ನನಗೆ ನ್ಯಾಯವನ್ನು ಒದಗಿಸಬೇಕು. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸಬೇಕು. ನಾನು ಯಾವುದೇ ಹನಿಟ್ಯ್ರಾಪ್ ಮಾಡಿಲ್ಲ ,ಅವರ ಬಳಿ ಯಾವುದೆ ಆಸ್ತಿ ಯನ್ನು ಪಡೆದುಕೊಂಡಿಲ್ಲ  ಎಂದು ರೇಖಾ ಹೇಳಿದ್ದಾರೆ.

ಇದನ್ನೂ ಓದಿ: ಮೊಮ್ಮಗಳ ಹಠ, ಕ್ಷಣಾರ್ಧದಲ್ಲಿ ಶವವಾದ ಅಜ್ಜ- ಅಜ್ಜಿ: ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದ ಜನ!

ಇನ್ನೂ ಅನಂತರಾಜು ನನಗೆ ಕಳೆದ ಆರು ವರ್ಷದಿಂದ ಪರಿಚಯ. ನನಗೆ ಫೇಸ್‌ಬುಕ್ಕಿನಲ್ಲಿ ಅನಂತರಾಜು ಪರಿಚಯ. ಅದರೂ, ನಂತರ ಇಬ್ಬರು ನಡುವೆ ಸ್ನೇಹ ಬೆಳದಿತ್ತು. ಅನಂತರಾಜು ನಡುವೆ ಕಳೆದ ಆರು ವರ್ಷಗಳಿಂದ ವಿಲಿಂಗ್ ರಿಲೇಶನ್ ಶಿಫ್ ಇತ್ತು. ಅವರ ಜೊತೆ ಉತ್ತಮ ವಾದ ಸಂಬಂಧ ಇತ್ತು. ಅದರೆ ನಾನು ಹನಿಟ್ಯ್ರಾಪ್ ಮಾಡಿಲ್ಲ. ಅವರಿಂದ ಯಾವುದೇ ಹಣ ಪಡೆದಿಲ್ಲ. ಹನಿಟ್ಯ್ರಾಪ್ ಮಾಡೋ ಇನ್ ಟೆಶನ್ ಆರು ವರ್ಷ ತನಕ ಕಾಯೋ ಅವಶ್ಯಕ ಇಲ್ಲ. ನಾನು ತಪ್ಪು ಮಾಡಿದ್ದು ನಿಜ. ಅದರೆ ಹನಿಟ್ಯ್ರಾಪ್ ಮಾಡಿಲ್ಲ. ನನಗೆ ನ್ಯಾಯಬೇಕು ಎಂದು  ರೇಖಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!