ಕೊಟ್ಟ ಸಾಲ ವಾಪಾಸ್ ಕೇಳಿದ್ದಕ್ಕೆ ಜ್ಯೂಸ್ ಪಾಕೆಟ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ನಡೆದಿದೆ.
ಕೋಲಾರ (ಏ.2) ಕೊಟ್ಟ ಸಾಲ ವಾಪಾಸ್ ಕೇಳಿದ್ದಕ್ಕೆ ಜ್ಯೂಸ್ ಪಾಕೆಟ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ನಡೆದಿದೆ.
ಸಾಲ ನೀಡಿರುವ ಆಚಂಪಲ್ಲಿ ಗ್ರಾಮದ ಗೋಪಾಲಪ್ಪ ವಿಷಯುಕ್ತ ಜ್ಯೂಸ್ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳತೂರು ಗ್ರಾಮದ ಶಿವಣ್ಣ ಎಂಬುವವರಿಗೆ ಸಾಲ ನೀಡಿದ್ದ ಗೋಪಾಲಪ್ಪ. ಮಾಂಸದ ಅಂಗಡಿ ಮಾಡುತ್ತೇನೆ ಹಣ ಬೇಕಾಗಿದೆ ಎಂದು ಗೋಪಾಲಕೃಷ್ಣ ಬಳಿ ಸಾಲ ಕೇಳಿದ್ದ ಆರೋಪಿ ಶಿವಣ್ಣ. ವ್ಯಾಪಾರ ಮಾಡಲಿ ಎಂದು ಶಿವಣ್ಣಗೆ 1 ಲಕ್ಷದ 11 ಸಾವಿರ ರೂಪಾಯಿ ಸಾಲ ನೀಡಿದ್ದ ಗೋಪಾಲಪ್ಪ. ಆದರೆ ಸಾಲ ಪಡೆದು ವಾಪಸ್ ನೀಡಲು ವಿಳಂಬ. ಇದರಿಂದ ಗೋಪಾಲಕೃಷ್ಣ ಸಾಲ ವಾಪಸ್ ಕೇಳಲು ಯಲ್ಲೂರು ಗ್ರಾಮಕ್ಕೆ ಬಂದಿದ್ದಾನೆ.
undefined
ಮದುವೆಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ತಾಯಿ-ಮಗಳೊಂದಿಗೆ ಅಸಭ್ಯ ವರ್ತನೆ; ಮಚ್ಚಿನಿಂದ ಹಲ್ಲೆ!
ಸಾಲ ಕೊಡುವುದಾಗಿ ಸ್ವಲ್ಪ ಕಾಲಾವಕಾಶ ಕೊಡು ಅಂತಾ ಕೇಳಿ ಬಸ್ ನಿಲ್ದಾಣಕ್ಕೆ ತನ್ನ ದ್ವಿಚಕ್ರ ವಾಹನದಲ್ಲೇ ಡ್ರಾಪ್ ಮಾಡಿದ ಶಿವಣ್ಣ. ಬಸ್ ನಿಲ್ದಾಣದ ಬಳಿ ಗೋಪಾಲಪ್ಪಗೆ ಜ್ಯುಸ್ ಪ್ಯಾಕೇಟ್ ಕೊಡಿಸಿದ್ದಾನೆ. ಜ್ಯೂಸ್ ಸೇವಿಸಿದ ತಕ್ಷಣ ಗೋಪಾಲಪ್ಪಗೆ ಬಾಯಿ ಉರಿ, ಎದೆಯುರಿ ಶುರುವಾಗಿದೆ. ತಕ್ಷಣ ಜ್ಯೂಸ್ ಪಾಕೆಟ್ ಸಮೇತ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಗೋಪಾಲಪ್ಪ.
ಮುಸ್ಲಿಂ ಮಹಿಳೆ ಜತೆ ಅನೈತಿಕ ಸಂಬಂಧ ಆರೋಪ; ಸಾಮಾಜಿಕ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ!
ಜ್ಯೂಸ್ ನಲ್ಲಿ ಶಿವಣ್ಣ ವಿಷ ಬೆರೆಸಿಕೊಟ್ಟಿದ್ದಾನೆ ಅಂತಾ ಗೋಪಾಲಪ್ಪ ಆರೋಪ ಮಾಡಿದ್ದಾರೆ. ಜ್ಯೂಸ್ ಪಾಕೆಟ್‌ನಲ್ಲಿ ವಿಷ ಬೆರೆಸಿದ್ದನಾ? ಅಥವಾ ಜ್ಯೂಸ್ ಪಾಕೆಟ್ ವಿಷಯುಕ್ತವಾಗಿತ್ತಾ ತನಿಖೆ ನಡೆದರೆ ಹೊರಬರಲಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.