20 ರೂ ಟಿಕೆಟ್‌ಗಾಗಿ ಸ್ಟಾಲ್ ಹಾಕಿದ್ದ ಬಡ ವ್ಯಾಪಾರಿಯ ಕಣ್ಣನ್ನೇ ಕಿತ್ತ ಬೌನ್ಸರ್!

By Suvarna NewsFirst Published Apr 2, 2024, 6:21 PM IST
Highlights

ವ್ಯಾಪಾರ ಮೇಳೆ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸ್ಟಾಲ್ ಹಾಕಿದ್ದ ಬಡ ವ್ಯಾಪಾರಿ ಒಳ ಪ್ರವೇಶಿಸಲು ಬೌನ್ಸರ್ ನಿರಾಕರಿಸಿದ್ದಾರೆ. ತಾನು ವಿಸಿಟರ್ ಅಲ್ಲ, ವ್ಯಾಪಾರಿ ಎಂದರೂ ಕೇಳದ ಬೌನ್ಸರ್ ಕಬ್ಬಿಣದ ರಾಡ್ ಮೂಲಕ ಹಲ್ಲೆ ಮಾಡಿದ್ದಾನೆ. ಪರಿಣಾಮ ವ್ಯಾಪಾರಿ ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
 

ಜೈಪುರ(ಏ.02) ವ್ಯಾಪರ ಮೇಳದಲ್ಲಿ ಸ್ಟಾಲ್ ಹಾಕಿದ್ದ ಬಡ ವ್ಯಾಪಾರಿಯ ಕಣ್ಣನ್ನೇ ಕಿತ್ತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 20 ರೂಪಾಯಿ ಟಿಕೆಟ್‌ಗಾಗಿ ಭದ್ರತೆಗಾಗಿ ನೇಮಿಸಲಾಗಿದ್ದ ಬೌನ್ಸರ್ ಕಬ್ಬಿಣದ ರಾಡ್ ಮೂಲಕ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಭೀಕರ ಹಲ್ಲೆಯಿಂದ ವ್ಯಾಪಾರಿಯ ಒಂದು ಕಣ್ಣಿನ ದೃಷ್ಠಿ ನಷ್ಟವಾಗಿದೆ. ಇತ್ತ ದವಡೆ ಮುರಿತಕ್ಕೊಳಗಾಗಿದೆ. ಕಳೆದ 3 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಾಪಾರಿ ಆರೋಗ್ಯ ಕುರಿತು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಬೌನ್ಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವ್ಯಾಪರ ಹಾಗೂ ವಸ್ತು ಪ್ರದರ್ಶನ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಎಲಂ ಮಮೂಲಕ ಸ್ಟಾಲ್ ಹಾಕಲು ಸ್ಥಳ ಬಾಡಿಗೆ ಪಡೆದಿದ್ದ. ಬಳಿಕ ಮೇಳದಲ್ಲಿ ತನ್ನ ವ್ಯಾಪಾರ ಸಾಮಾಗ್ರಿಗಳನ್ನು ತುಂಬಿಸಿದ್ದ. ಮೇಳ ಆರಂಭಗೊಂಡ ದಿನ, ವ್ಯಾಪಾರಿ ಮಾರಾಟ ಮತ್ತು ವಸ್ತುಪ್ರದರ್ಶನದ ಆವರಣ ಪ್ರವೇಶಿಸಲು ಬೌನ್ಸರ್ಸ್ ಅನುಮತಿ ನಿರಾಕರಿಸಿದ್ದಾರೆ. ಕಾರಣ ಈ ವ್ಯಾಪರಿ ಎಂಟ್ರಿ ಟಿಕೆಟ್ ಖರೀದಿಸಿರಲಿಲ್ಲ.

Latest Videos

ಬೆಂಗಳೂರಲ್ಲಿ ಯುವತಿ ಕಾರು ಚೇಸ್ ಮಾಡಿ ಕಿರಿಕ್, ಪುಂಡರ ಭಯಾನಕ ವಿಡಿಯೋ ವೈರಲ್!

ತಾನು ಈ ಮಾರಾಟ ಹಾಗೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡುತ್ತಿರುವ ವ್ಯಕ್ತಿಯಲ್ಲ, ತಾನು ಸ್ಟಾಲ್ ಹಾಕಿದ್ದೇನೆ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ವಿಸಿಟರ್ಸ್‌ಗೆ ಟಿಕೆಟ್ ಅವಶ್ಯಕತೆ ಇದೆ. ತಾನು ವ್ಯಾಪರಿ ಎಂದು ವಿವರಿಸುವ ಪ್ರಯತ್ನ ಮಾಡಿದ್ದಾನೆ. ಆ ಆದರೆ ಮುಂಭಾಗದಲ್ಲಿ ನಿಯೋಜಿಲಾಗಿದ್ದ ಬೌನ್ಸರ್ಸ್ ಒಳ ಪ್ರವೇಶಿಸಲು ಅನುಮತಿ ನೀಡಿಲ್ಲ. ಆಕ್ರೋಶಗೊಂಡ ವ್ಯಾಪಾರಿ ತಾನು ದುಡ್ಡುಪಾವತಿಸಿ ಸ್ಥಳ ಬಾಡಿಗೆ ಪಡೆದಿದ್ದೇನೆ. ಇದೀಗ ಟಿಕೆಟ್ ಯಾಕೆ ಖರೀದಿಸಬೇಕು ಎಂದು ಪ್ರಶ್ನಿಸಿ ಒಳ ನುಗ್ಗುವ ಪ್ರಯತ್ನ ಮಾಡಿದ್ದಾನೆ.

ಇತ್ತ ಬೌನ್ಸರ್ಸ್ ಏಕಾಏಕಿ ವ್ಯಾಪಾರಿ ಮೇಲೆ ದಾಳಿ ಮಾಡಿದ್ದಾರೆ. ಕಬ್ಬಿಣದ ರಾಡ್ ಮೂಲಕ ಹಲ್ಲೆ ಮಾಡಿದ್ದಾರೆ. ಈ ದಾಳಿಯಲ್ಲಿ ವ್ಯಾಪಾರಿಯ ಕಣ್ಣಿಗೆ ಗಂಭೀರವಾಗಿ ಗಾಯವಾಗಿದೆ. ದವಡೆ ಮುರಿತಕ್ಕೊಳಗಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಾಪರಿ ಕುಸಿದು ಬಿದ್ದಿದ್ದಾನೆ. ಇತ್ತ ಸ್ಥಳದಲ್ಲಿದ್ದ ಇತರರು ನೆರವಿಗೆ ಧಾವಿಸಿ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಗಳೂರು: ಹಣಕ್ಕಾಗಿ ಚಿಕ್ಕಮ್ಮಳ ಕೊಲೆಗೆ ಯತ್ನಿಸಿದ ಸಾಕು ಮಗಳು..!

ಕಳೆದ ಮೂರು ದಿನಗಳಿಂದ ವ್ಯಾಪಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಬ್ಬಿಣದ ರಾಡ್ ಮೂಲಕ ಹಲ್ಲೆ ಮಾಡಿದ ಕಾರಣ ಕಣ್ಮಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ. ವ್ಯಾಪಾರಿ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಬೌನ್ಸರ್ ಹಾಗೂ ಆಯೋಜಕರು ಶಾಮೀಲಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬೌನ್ಸರ್‌ನ್ನು ಬಂಧಿಸಿದ್ದಾರೆ. 

click me!