
ಬೆಂಗಳೂರು (ಜು.2): ಮಗನ ಹೆಂಡತಿ ತವರು ಮನೆಗೆ ತೆರಳಿದಳೆಂಬ ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಯೋವೃದ್ಧ ತಂದೆ-ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದ್ರಶೇಖರ್ (54) ಹಾಗು ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ, ದಂಪತಿಗಳಿಗೆ ಪ್ರಶಾಂತ ಎಂಬಾತ ಮಗ. ಮಗ ಪ್ರಶಾಂತನಿಗೆ ವರ್ಷದ ಹಿಂದೆಯಷ್ಟೇ ಮದುವೆ ಮಾಡಿದ್ದರು. ಪತ್ನಿಯೊಂದಿಗೆ ಸುಖವಾಗಿರಬೇಕಿದ್ದ ಮಗ ಕುಡಿತದ ಚಟಕ್ಕೆ ಬಲಿಯಾಗಿ ದಿನನಿತ್ಯ ಕುಡಿದು ಮನೆಗೆ ಬರೋದು, ಒಮ್ಮೊಮ್ಮೆ ಮನೆಗೆ ಬಾರದೆ ಎಲ್ಲೋ ಮಲಗಿಬರೋದು ಮಾಡತೊಡಗಿದ್ದ. ಗಂಡನ ಕುಡಿತ, ದುಶ್ಚಟಗಳಿಂದ ನೊಂದ ಪ್ರಶಾಂತನ ಹೆಂಡತಿ ಮೂರು ತಿಂಗಳ ಹಿಂದೆಯಷ್ಟೇ ಗಂಡನ ಮನೆ ತೊರೆದು ತವರು ಮನೆ ಸೇರಿದ್ದಳು. ಇದರಿಂದ ನೊಂದಿದ್ದ ವೃದ್ಧ ದಂಪತಿ. ಸುಖವಾಗಿರುತ್ತಾನೆಂದು ಮದುವೆ ಮಾಡಿಕೊಟ್ಟರು ಕುಡಿತದ ಚಟಕ್ಕೆ ಬಿದ್ದು ದಾಂಪತ್ಯ ಹಾಳುಮಾಡಿಕೊಂಡನಲ್ಲ ಎಂಬ ಚಿಂತೆ ವೃದ್ಧ ತಂದೆತಾಯಿಗಳನ್ನ ಇನ್ನಿಲ್ಲದಂತೆ ಕಾಡಿದೆ. ಮಗನ ಭವಿಷ್ಯ ನೆನೆದು ನಿನ್ನೆ ಎರಡನೇ ಮಗನನ್ನು ಅಂಗಡಿಗೆ ಕಳಿಸಿ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿರುವ ವೃದ್ಧ ದಂಪತಿ. ಅಂಗಡಿಗೆ ಹೋಗಿದ್ದ ಮಗ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಹೊಸಕೋಟೆ ಮೂಲದವರಾದ ವೃದ್ಧ ದಂಪತಿಗಳು ಹಲವು ವರ್ಷಗಳಿಂದ ಹಳೇ ಬೈಯಪ್ಪನಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸ ಮಾಡಿಕೊಂಡಿದ್ರು. ಕಷ್ಟಪಟ್ಟು ದುಡಿದು ಮಕ್ಕಳನ್ನು ಬೆಳೆಸಿ ಮದುವೆ ಮಾಡಿಸಿದರೂ ಕುಡಿತದ ಚಟಕ್ಕೆ ಬಿದ್ದಿದ್ದ ಮಗ ಪ್ರಶಾಂತ, ಪ್ರಶಾಂತ ದಾಂಪತ್ಯ ಹಾಳಾಗಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ