
ಬೆಂಗಳೂರು (ಜು.26): ಬೆಂಗಳೂರಿನಲ್ಲಿ ಓರ್ವ ಖತರ್ನಾಕ್, ಮನೆ ದೋಚಿ ನಿಂಬೆಹಣ್ಣು ಇಡ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಕದ್ದ ಬಳಿಕ ಮನೆ ಬಳಿ ಬಂದು ಬೀರುವಿನಲ್ಲಿ ಎನೋ ಇದೆ ನೋಡಿ. ನಿಮ್ಮ ಬೀಗರು ಮಾಟ ಮಾಡಿಸಿ ಚಿನ್ನಾಭರಣ ಕಾಣೆಯಾಗಿಸಿದ್ದಾರೆಂದು ಬೊಗಳೆ ಬಿಡುತ್ತಿದ್ದ. ನಗರದಲ್ಲಿ ನಿಂಬೆಹಣ್ಣು ಜ್ಯೋತಿಷಿಯಿಂದ ಮನೆ ಕಳ್ಳತನವಾಗುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಈತನ ವಿರುದ್ಧ ದೂರು ದಾಖಲಾಗಿದೆ.
ಅಮವಾಸೆ ದಿನ ದೇವಸ್ಥಾನಕ್ಕೆ ಹೋಗಿ ಎಂದು ಹೇಳಿ ಜ್ಯೋತಿಷಿ ಮನೆ ದೋಚುತ್ತಿದ್ದ. ಹೊಸಪೇಟೆಯ ಸುರೇಶ್ ಪಾಟೀಲ್ ಎಂಬಾತ ಈ ಕೃತ್ಯ ಎಸಗುತ್ತಿದ್ದು, ಸದ್ಯ ಪೊಲೀಸರು ಆತನಿಗೆ ಬಲೆ ಬೀಸಿದ್ದಾರೆ.
Bengaluru: ವಿದ್ಯಾರ್ಥಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ, ಪಿಇಎಸ್ ವಿಶ್ವವಿದ್ಯಾಲಯ
ಇಂದಿರಾ ಎಂಬುವವರು ತನ್ನ ಮಗಳನ್ನು ಗೋವಿಂದೇಗೌಡ ಎಂಬಾತನಿಗೆ ಮದ್ವೆ ಮಾಡಿಸಿದ್ದರು. ಮಗಳು ಪದೇ ಪದೇ ತವರು ಮನೆಗೆ ಬರುತ್ತಿದ್ದಳು. ಹೀಗಾಗಿ ಇಂದಿರಾ ಜ್ಯೋತಿಷಿ ಮೊರೆ ಹೋಗಿದ್ದರು. ಈ ವೇಳೆ ಇಂದಿರಾ ಜ್ಯೋತಿಷಿ ಸುರೇಶ್ ಪಾಟೀಲ್ ಮನೆಗೆ ಕರೆಸಿದ್ದರು. ಮನೆಗೆ ಬಂಧ ಆಸಾಮಿ ನಿಮ್ಮ ಮಗಳನ್ನ ಸರಿ ಮಾಡ್ತಿನಿ ಎಂದು ಹೇಳಿ ಅಮವಾಸ್ಯೆ ದಿನ ಇಂದಿರಾ ಕುಟುಂಬವನ್ನ ದೇವಸ್ಥಾನಕ್ಕೆ ಕಳಿಸಿ ಮನೆ ದೋಚಿದ್ದಾನೆ.
ದೇವಸ್ಥಾನದಿಂದ ಕುಟುಂಬ ಮರಳಿ ಬಂದ ಬಳಿಕ ಮನೆಯ ಬೀರು ನೋಡುವಂತೆ ಹೇಳಿದ್ದ. ಈ ವೇಳೆ ಬೀರುವಿನಲ್ಲಿ ಇಟ್ಟಿದ್ದ ದುಡ್ಡು ಇಲ್ಲದೆ ನಿಂಬೆಹಣ್ಣು ಇರುತ್ತಿತ್ತು. ಮತ್ತೊಂದು ಅಮವಾಸ್ಯೆಗೂ ಕೂಡ ದೇವಸ್ಥಾನಕ್ಕೆ ಹೋಗಲು ಹೇಳಿದ್ದ. ಮತ್ತೆ ವಾಪಾಸ್ ಬಂದಾಗ 5 ಲಕ್ಷ ಮೌಲ್ಯದ ಮಾಂಗಲ್ಯ ಸರ ಸೇರಿ ಚಿನ್ನಾಭರಣ ಕಳುವಾಗಿತ್ತು.
ಹತ್ಯೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ, ಅನೈತಿಕ ಸಂಬಂಧಕ್ಕೆ ಗಂಡನ ಮುಗಿಸಿದ
ವಿಷಯವನ್ನು ತಿಳಿಸಿದಾಗ ಜೋತೀಷ್ಯಿ ನಿಮ್ಮ ಬೀಗರು ಮಾಟ ಮಾಡಿಸಿದ್ದಾರೆಂದು ಹೇಳಿ ತನಗೆ 65 ದಿನ ಟೈಂ ಕೊಡಿ ಎಂದಿದ್ದ. 65 ದಿನದಲ್ಲಿ ಬೀಗರ ಮನೆಯಿಂದ ಚಿನ್ನಾಭರಣ ವಾಪಾಸ್ ತರಿಸುತ್ತೇನೆಂದು ಹೇಳಿ ಜ್ಯೋತಿಷಿ ವಂಚಿಸಿದ್ದು, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ