
ಬೆಂಗಳೂರು(ಜ. 08) ಜೀವ ಉಳಿಸುವ ಅಂಬ್ಯುಲೆನ್ಸ್ ನಿಂದಲೇ ಇಬ್ಬರ ಜೀವನ ಅಂತ್ಯವಾಗಿದೆ. ಇಬ್ರಾಹಿಂ ಖಲೀಲ್ 30, ಮನ್ಸೂರ್ 28, ಆಂಬ್ಯುಲೆನ್ಸ್ ಡ್ರೈವರ್ ಅಜಾಗರೂಕತೆಗೆ ಬಲಿಯಾಗಿದ್ದಾರೆ.
ಅಶೋಕ್ ನಗರ ಟ್ರಾಫಿಕ್ ಪೊಲೀಸರು ಆಂಬುಲೆನ್ಸ್ ಚಾಲಕ ಅಭಿಷೇಕ್ 27 ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶ್ರೀನಿವಾಗಿಲು ಜಂಕ್ಷನ್ ಬಳಿ ಮಂಗಳವಾರ ರಾತ್ರಿ 9 ಗಂಟೆಗೆ ದುರ್ಘಟನೆ ನಡೆದಿದೆ.
ಆ ಒಂದು ಪತ್ರದಿಂದ ಬಯಲಾದ ಸುರಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ
ಓಲ್ಡ್ ಏರ್ ಪೋರ್ಟ್ ರಸ್ತೆಯ ನಾಗವಾರ ಕಡೆ ಹೊರಟಿದ್ದ ಇಬ್ಬರು ಯುವಕರು ಚಾಲಕನ ಅಜಾಗರೂಕತೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಯುವಕು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು.
ಈ ವೇಳೆ ಅತಿವೇಗವಾಗಿ ಒನ್ ವೇ ನಲ್ಲಿ ಬಂದ ಆಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನ ಸ್ಥಳೀಯ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ