ACB ಮಿಂಚಿನ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲಂಚ ಬಾಕ ಅಧಿಕಾರಿ

By Suvarna NewsFirst Published Jan 8, 2020, 6:16 PM IST
Highlights

ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸಿದ ಮಿಂಚಿನ ದಾಳಿಯಲ್ಲಿ ಲಂಚ ಬಾಕ ರೆವಿನ್ಯೂ ಇನ್ಸ್‌ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪರಿಹಾರದ ಚೆಕ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ವಿಜಯಪುರ, (ಜ.08):  ಪರಿಹಾರದ ಹಣ ಸಂತ್ರಸ್ತರ ಬಳಿ ಲಂಚಕ್ಕೆ ಬಾಯಿ ತೆರೆದಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ವಿಜಯಪುರ ಜಿಲ್ಲೆಯ ಇಂಡಿಯ ರೆವಿನ್ಯೂ ಇನ್ಸ್‌ಪೆಕ್ಟರ್ ಬಸವರಾಜ ತೇಲಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಇವರು ಮಹಾಂತೇಶ ಅಗಸರ ಎಂಬ ರೈತನಿಂದ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವಿಜಯಪುರ:ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ, 2.5 ಲಕ್ಷ ನಗದು ವಶ

ಎಸಿಬಿ ಡಿವೈಎಸ್‌ಪಿ ವೇಣುಗೋಪಾಲ ಅವರ ಮಾರ್ಗದರ್ಶನದ ಮೇರೆಗೆ ಸಿಪಿಐಗಳಾದ ಶಿವಶಂಕರ ಗಣಾಚಾರಿ, ಸಚಿನ ಚಲವಾದಿ ಹಾಗೂ ಸಿಬ್ಬಂದಿ ದಾಳಿ ನಡೆಸಿದೆ.

 ಘಟನೆ ಹಿನ್ನೆಲೆ...?
ರೈತ ಮಹಾಂತೇಶ ಜಮೀನಿನಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ (KBJNL) ಕಾಲುವೆ ಹಾದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಕಾಲುವೆ ಪರಿಹಾರ ಅಂತ 2 ಲಕ್ಷ 85ಸಾವಿರ ರೂಪಾಯಿ ಬಂದಿತ್ತು.  

ಈ ಪರಿಹಾರದ ಚೆಕ್ ನೀಡಲು 4 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಇಂದು (ಬುಧವಾರ) ಇಂಡಿ ಪಟ್ಟಣದಲ್ಲಿರುವ ವಿಶೇಷ ಭೂ ಸ್ವಾಧಿನಾಧಿಕಾರಿ(SLO) ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ಮಾಡಿದೆ.

click me!