ಬೆಂಗ್ಳೂರಲ್ಲಿ ವಾಯುಪಡೆ ಪೈಲಟ್‌ ಸಾವು: ಇಲಾಖಾ ತನಿಖೆಗೆ ಆದೇಶ

By Kannadaprabha NewsFirst Published Sep 26, 2022, 12:41 PM IST
Highlights
  • ಬೆಂಗ್ಳೂರಲ್ಲಿ ಪೈಲಟ್‌ ಸಾವು: ಇಲಾಖಾ ತನಿಖೆಗೆ ಆದೇಶ
  • 6 ವಾಯುಪಡೆ ಅಧಿಕಾರಿಗಳ ಮೇಲೆ ಪ್ರಕರಣ
  • ಜಾಲಹಳ್ಳಿಯಲ್ಲಿ ಮೃತನಾಗಿದ್ದ ಪೈಲಟ್‌ ಅಂಕಿತ್‌

ನವದೆಹಲಿ (ಸೆ.26): ಬೆಂಗಳೂರಿನಲ್ಲಿ ಇತ್ತೀಚೆಗೆ ಮೃತಪಟ್ಟತರಬೇತಿ ಪಡೆಯುತ್ತಿರುವ ವಾಯುಪಡೆ ಪೈಲಟ್‌ ಪ್ರಕರಣದಲ್ಲಿ ಇಲಾಖಾ ತನಿಖೆಗೆ ಭಾರತೀಯ ವಾಯುಪಡೆ ಭಾನುವಾರ ಆದೇಶಿಸಿದೆ. ಇತ್ತೀಚೆಗೆ ಬೆಂಗಳೂರು ಜಾಲಹಳ್ಳಿ ವಾಯುಪಡೆಯ ತಾಂತ್ರಿಕ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಪೈಲಟ್‌ ಅಂಕಿತ್‌ ಕುಮಾರ್‌ ಝಾ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಝಾ ಸಹೋದರನ ದೂರಿನ ಆಧಾರದ ಮೇಲೆ 6 ವಾಯುಪಡೆ ಅಧಿಕಾರಿಗಳ ಮೇಲೆ ಈಗಾಗಲೇ ಗಂಗಮ್ಮನಗುಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಾಯುಪಡೆ ಪ್ರಕಟಣೆಯನ್ನು ಹೊರಡಿಸಿದ್ದು, ‘ಅಂಕಿತ್‌ ತರಬೇತಿಯನ್ನು ಸೆ.20ರಂದು ಮಹಿಳಾ ಸಹೋದ್ಯೋಗಿ ನೀಡಿದ ದೂರಿನ ಆಧಾರದ ಮೇಲೆ ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಮೃತಪಟ್ಟಅಂಕಿತ್‌ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ಪೊಲೀಸರ ಜತೆ ವಾಯುಪಡೆಯು ತನಿಖೆಯಲ್ಲಿ ಸಹಕರಿಸಲಿದೆ. ಸೆ.23ರಂದು ನಡೆದ ಅಂಕಿತ್‌ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಇಲಾಖೆ ತನಿಖೆಗೂ ಆದೇಶ ನೀಡಲಾಗುತ್ತದೆ’ ಎಂದು ತಿಳಿಸಿದೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ವಾಯುಪಡೆಯ ಮಿಗ್-21 ಜೆಟ್ ಪತನ: ಇಬ್ಬರು ಪೈಲಟ್‌ ಸಾವು

click me!