
ಮಂಡ್ಯ, (ಜ.14): ಮಗಳು (ನಟಿ) ನಿರ್ದೇಶಕನೊಂದಿಗೆ ಪರಾರಿಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ನಟಿ ವಿಜಯಲಕ್ಷ್ಮಿ ತಾಯಿ ಸವಿತಾ. ವಿಜಯಲಕ್ಷ್ಮಿ ನಿರ್ದೇಶಕನೊಂದಿಗೆ ಓಡಿ ಹೋಗಿ ರಿಜಿಸ್ಟರ್ ಮದುವೆಯಾಗಿದ್ದಾಳೆ. ಇದರಿಂದ ಮನನೊಂದು ತಾಯಿ ಅಜ್ಜಿ ಆತ್ಮಹತ್ಯೆ ಯತ್ನಿಸಿದ್ದರು.
"
ಲಕ್ಷಲಕ್ಷಗಟ್ಟಲೇ ಹಣ ಪಡೆದು ಪರಾರಿಯಾದ ವಿಜಯಲಕ್ಷ್ಮೀ ಅಸಲಿ ಅವತಾರ!
ವಿಜಯಲಕ್ಷ್ಮಿ ಓಡಿ ಹೋದ ದಿನವೇ ಅಜ್ಜಿ ಸಾವನ್ನಪ್ಪಿದ್ದಳು. ಇದೀಗ ಇಂದು (ಮಂಗಳವಾರ) ತಾಯಿ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಮದ್ದೂರಿನ ಹರಳಹಳ್ಳಿಯಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ಮುಗಿಸಿದ್ದಾರೆ. ಆದ್ರೆ, ಓಡಿ ಹೋಗಿ ಮದುವೆಯಾಗಿರುವ ವಿಜಯಲಕ್ಷ್ಮಿ ಮೃತ ತಾಯಿಯ ಮುಖ ನೋಡಲು ಸಹ ಬಂದಿಲ್ಲ
'ನಾನ್‌ಸೆನ್ಸ್' ನಟಿಯ ಸ್ಟೋರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್; ಎಸ್ಕೇಪ್ ಕಹಾನಿಯ ಸೀಕ್ರೆಟ್!
ತಾಯಿ ಜೀವನ್ಮರಣ ಹೋರಟ ನಡೆಸುತ್ತಿದ್ದು ಬರುವಂತೆ ನಟಿ ತಂದೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ಆದರೂ ಕೂಡ ನಟಿ ವಿಜಯಲಕ್ಷ್ಮೀ ಆಗಮಿಸಲಿಲ್ಲ. ಇದೇ ಕೊರಗಿನಲ್ಲಿ ನಾಯಕ ನಟಿ ತಾಯಿ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರಕ್ಕೂ ಮಗಳು ಬಾರದ ಹಿನ್ನೆಲೆ ಊರಿನ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ
ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಅಂಜಿನಪ್ಪ ಮತ್ತು ನಟಿ ವಿಜಯಲಕ್ಷ್ಮೀ ಇವರಿಬ್ಬರೂ ನಾಪತ್ತೆಯಾಗಿದ್ದರು. ನಟಿ ನಾಪತ್ತೆಯಾದ ಹಿನ್ನೆಲೆ ಮುಂದಿನ ಚಿತ್ರಗಳಿಗೆ ನಟಿಗೆ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರು ಆಕೆಯ ಮನೆ ಬಾಗಿಲಿಗೆ ಬಂದು ವಿಚಾರಿಸಿದ್ದರು. ಈ ವೇಳೆ, ವಿಜಯಲಕ್ಷ್ಮಿ ನಿರ್ದೇಶಕನ ಜೊತೆ ಓಡಿ ಹೋಗಿರುವುದು ತಿಳಿದು ಬಂದಿತು.
ಮತ್ತು ಅಜ್ಜಿ ಮಾನಕ್ಕೆ ಅಂಜಿ ವಿಷ ಸೇವಿಸಿದ್ದರು. ದುರದೃಷ್ಟಕ್ಕೆ ವೃದ್ಧೆ ಸಾವನ್ನಪ್ಪಿದ್ದಾರೆ. ನಟಿಯ ತಾಯಿ ಗಂಭೀರ ಸ್ಥಿತಿಯಲ್ಲಿದ್ಧಾರೆ. ತನ್ನ ಮಗಳನ್ನು ಆಂಜಿನಪ್ಪ ಕರೆದೊಯ್ದಿದ್ದಾನೆ ಎಂದು ಆ ತಾಯಿ ಆರೋಪಿಸಿದ್ದರು. ಆದರೆ, ಇದಾದ 2 ದಿನದ ಬಳಿಕ ರಾಯಚೂರಿನಲ್ಲಿ ಪತ್ತೆಯಾದ ಇವರಿಬ್ಬರು ತಾವು ಇಷ್ಟಪಟ್ಟು ಕಾನೂನು ಬದ್ಧವಾಗಿ ಮದುವೆಯಾಗಿದ್ದು, ತಮ್ಮನ್ನು ತಮ್ಮ ಪಾಡಿಗೆ ಇರಲು ಬಿಡುವಂತೆ ತಿಳಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ