Bengaluru Acid Attack: ನನ್ನ ಹಾಗೆ ಆತನೂ ನರಳಬೇಕು: ಸಂತ್ರಸ್ತೆಯ ಆಕ್ರೋಶ

By Govindaraj S  |  First Published May 15, 2022, 3:10 AM IST

‘ಆ್ಯಸಿಡ್‌ ದಾಳಿ ಮಾಡಿದ ಕಿಡಿಗೇಡಿ ನಾಗೇಶ್‌ಗೆ ತಕ್ಕ ಶಿಕ್ಷೆಯಾಗಬೇಕು. ನಾನು ನೋವಿನಲ್ಲೇ ನರಳುತ್ತಿರುವ ಹಾಗೆ ಆತನೂ ನರಳಿ ನರಳಿ ಸಾಯುವಂತ ಶಿಕ್ಷೆ ನೀಡಬೇಕು’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಹೇಳಿದ್ದಾಳೆ ಎನ್ನಲಾಗಿದೆ. 


ಬೆಂಗಳೂರು (ಮೇ.15): ‘ಆ್ಯಸಿಡ್‌ ದಾಳಿ (Acid Attack) ಮಾಡಿದ ಕಿಡಿಗೇಡಿ ನಾಗೇಶ್‌ಗೆ (Nagesh) ತಕ್ಕ ಶಿಕ್ಷೆಯಾಗಬೇಕು. ನಾನು ನೋವಿನಲ್ಲೇ ನರಳುತ್ತಿರುವ ಹಾಗೆ ಆತನೂ ನರಳಿ ನರಳಿ ಸಾಯುವಂತ ಶಿಕ್ಷೆ ನೀಡಬೇಕು’ ಎಂದು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ (Victim) ಹೇಳಿದ್ದಾಳೆ ಎನ್ನಲಾಗಿದೆ. ಆ್ಯಸಿಡ್‌ ನಾಗನ ಬಂಧನ ಬಗ್ಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂತ್ರಸ್ತೆಯ ಕುಟುಂಬದ ಸದಸ್ಯರು, ‘ಆ ಕಿರಾತಕನಿಗೆ ಶಿಕ್ಷೆ ಆಗಬೇಕು. ನಾನು ನೋವಿನಲ್ಲಿ ನರಳುವಂತೆಯೇ ಆತನಿಗೂ ಚಿತ್ರಹಿಂಸೆಯಾಗುವ ಶಿಕ್ಷೆ ಆಗಬೇಕು. ಅವನೂ ಕೂಡ ನರಳಬೇಕು ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ’ ಎಂದು ತಿಳಿಸಿದರು.

‘ಆತನಿಗೆ ತಕ್ಕ ಶಿಕ್ಷೆ ಆಗಬೇಕು. ಅವನು ಒಂದೇ ಸಲ ಅಲ್ಲ, ನರಳಿ ನರಳಿ ಸಾಯಬೇಕು. ಅಂತಹ ಶಿಕ್ಷೆ ಅವನಿಗೆ ಕೊಡಬೇಕು’ ಎಂದೂ ಆಗ್ರಹಿಸಿದರು. ‘ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್‌ ನಾಗನನ್ನು ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ. ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರಾತಿಕ್ರೂರ ಶಿಕ್ಷೆ ನೀಡಬೇಕು’ ಎಂದೂ ಒತ್ತಾಯಿಸಿದ್ದಾರೆ. ‘ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಪೊಲೀಸರು ನಮಗೆ ಧೈರ್ಯ ತುಂಬಿದರು. ಅವರು ಹೇಳಿದಂತೆ ಆರೋಪಿಯನ್ನು ಬಂಧಿಸಿದ್ದಾರೆ. ನನ್ನ ಮಗಳು ಇನ್ನೂ ಊಟ ಮಾಡುತ್ತಿಲ್ಲ. ಪೈಪ್‌ ಮೂಲಕವೇ ದ್ರವಹಾರ ನೀಡಲಾಗುತ್ತಿದೆ’ ಎಂದು ಸಂತ್ರಸ್ತೆಯ ತಂದೆ ರಾಜಣ್ಣ ಹೇಳಿದ್ದಾರೆ.

Tap to resize

Latest Videos

Bengaluru Crime: ಆ್ಯಸಿಡ್‌ ನಾಗನ ಸುಳಿವು ನೀಡಿದ ಕೈ ಗಾಯ..!

ಪರಾರಿಗೆ ಯತ್ನಿಸಿದ ನಾಗನಿಗೆ ಪೊಲೀಸರ ಗುಂಡೇಟು: ಮಿಳುನಾಡಿನ ಆಶ್ರಮವೊಂದರಲ್ಲಿ ಬಂಧಿಸಿ ನಗರಕ್ಕೆ ಕರೆತರುವಾಗ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆ್ಯಸಿಡ್‌ ದಾಳಿ ಆರೋಪಿ ಕಾಲಿಗೆ ಗುಂಡು ಹಾರಿಸಿ, ಪುನಃ ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಗುಂಡೇಟು ತಿಂದು ಗಾಯಗೊಂಡಿರುವ ಆರೋಪಿ ನಾಗೇಶ್‌ (34)ನನ್ನು ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈತನಿಂದ ಹಲ್ಲೆಗೊಳಗಾಗಿ ಗಾಯಗೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಹೆಡ್‌ ಕಾನ್ಸ್‌ಟೇಬಲ್‌ ಮಹದೇವಯ್ಯ ಅವರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗಿದ್ದೇನು?: ತಮಿಳುನಾಡಿನ ತಿರುವಣ್ಣಾಮಲೈನ ರಮಣ ಆಶ್ರಮದಲ್ಲಿ ಕಾವಿಧಾರಿ ಸ್ವಾಮೀಜಿ ವೇಷದಲ್ಲಿ ಆರೋಪಿ ನಾಗೇಶ್‌ ತಲೆಮರೆಸಿಕೊಂಡಿರುವ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ ಕಾಮಾಕ್ಷಿಪಾಳ್ಯ ಪೊಲೀಸರು ಶುಕ್ರವಾರ ಆಶ್ರಮಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಪೊಲೀಸ್‌ ವಾಹನದಲ್ಲಿ ಆತನನ್ನು ನಗರಕ್ಕೆ ಕರೆತರುವಾಗ, ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಕೆಂಗೇರಿ ಬಳಿಯ ನೈಸ್‌ ರಸ್ತೆಯಲ್ಲಿ ಮೂತ್ರವಿಸರ್ಜನೆಗೆ ಹೋಗಬೇಕು ಎಂದಿದ್ದಾನೆ. ಆದರೂ ಪೊಲೀಸರು ವಾಹನ ನಿಲ್ಲಿಸದೆ ಮುಂದೆ ಬಂದಿದ್ದಾರೆ. ಕೆಂಗೇರಿ ಮೇಲ್ಸೇತುವೆ ಬಳಿ ಮೂತ್ರ ವಿಸರ್ಜಿಸಬೇಕು ಎಂದು ಒತ್ತಾಯಿಸಿದ್ದಾನೆ. ಈ ವೇಳೆ ಪೊಲೀಸ್‌ ವಾಹನದಿಂದ ಕೆಳಗೆ ಇಳಿದ ಆರೋಪಿಯು ಹೆಡ್‌ಕಾನ್ಸ್‌ಟೇಬಲ್‌ ಮಹದೇವಯ್ಯ ಮೇಲೆ ಏಕಾಏಕಿ ಕಲ್ಲಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. 

ಬೆಂಗಳೂರು ಯುವತಿಯ ಮೇಲೆ ಆಸಿಡ್‌ ಎರಚಿದ್ದ ಪ್ರಕರಣ: ಆರೋಪಿ ನಾಗೇಶ್‌ ಬಂಧನ

ಆಗ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಶರಣಾಗದ ಆರೋಪಿ ಪೊಲೀಸರತ್ತ ಕಲ್ಲು ತೂರಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪ್ರಶಾಂತ್‌ ಸರ್ವಿಸ್‌ ಪಿಸ್ತೂಲ್‌ನಿಂದ ಆರೋಪಿಯತ್ತ ಗುಂಡು ಹಾರಿಸಿದ್ದಾರೆ. ಆ ಗುಂಡು ಆರೋಪಿಯ ಬಲಗಾಲಿಗೆ ಹೊಕ್ಕಿದ ಪರಿಣಾಮ ಕುಸಿದು ಬಿದ್ದಿದ್ದಾನೆ. ಕೂಡಲೇ ಸುತ್ತುವರಿದು ವಶಕ್ಕೆ ಪಡೆದ ಪೊಲೀಸರು, ಆತನನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್‌ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ನಡುವೆ, ಈತನನ್ನು ಬಂಧಿಸಿದ ಪೊಲೀಸರಿಗೆ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ 5 ಲಕ್ಷ ರು. ಬಹುಮಾನ ಪ್ರಕಟಿಸಿದ್ದಾರೆ.

click me!