ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ಎರಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ. ಆ್ಯಸಿಡ್ ದಾಳಿಯಿಂದ ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡವರು. ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್(23) ಆಸಿಡ್ ಎರಚಿದ ಆರೋಪಿಗಿದ್ದು, ಪೊಲೀಸರು ಬಂಧಿಸಿದ್ದಾರೆ
ದಕ್ಷಿಣ ಕನ್ನಡ (ಮಾ.4): ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ಎರಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ.
ಆ್ಯಸಿಡ್ ದಾಳಿಯಿಂದ ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡವರು. ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್(23) ಆಸಿಡ್ ಎರಚಿದ ಆರೋಪಿ. ಆರೋಪಿಯನ್ನು ಬಂಧಿಸಿದ ಪೊಲೀಸರು.
ಮೂವರೂ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದಾರೆ. ಶಾಲಾ ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುವ ವೇಳೆ ನಡೆದಿರುವ ದಾಳಿ. ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆ ಮಂಗಳೂರಿಗೆ ರವಾನೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಬೆಂಗಳೂರಿನಿಂದ ತೆರಳುತ್ತಿದ್ದ ಪ್ರಯಾಣಿಕನ ಮೇಲೆ ಚಿತ್ರದುರ್ಗದಲ್ಲಿ ಆಸಿಡ್ ದಾಳಿ!
ಪ್ರೇಮ ವೈಫಲ್ಯದಿಂದ ದಾಳಿ:
ಆಸಿಡ್ ದಾಳಿಗೊಳಗಾದ ವಿದ್ಯಾರ್ಥಿನಿ, ಕೇರಳದ ಮಲಪ್ಪುರಂ ಜಿಲ್ಲೆಯ ನೇಲಂಬುರ್ ತಾಲೂಕಿನ ಅಭಿನ್ ಇಬ್ಬರೂ ಒಂದೇ ರಾಜ್ಯದವರು ಒಂದೇ ಕೋಮಿನವರು. ವಿದ್ಯಾರ್ಥಿನಿ ಕಡಬ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ. ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನ ಟಾರ್ಗೆಟ್ ಮಾಡಿದ್ದ ಆರೋಪಿ ಆಸಿಡ್ ದಾಳಿ ಆಸಿಡ್ ದಾಳಿ ವೇಳೆ ವಿದ್ಯಾರ್ಥಿನಿ ಪಕ್ಕದಲ್ಲಿ ಉಳಿದ ಇಬ್ಬರು ವಿದ್ಯಾರ್ಥಿನಿಯರಿಗೂ ಸಿಡಿದು ಗಾಯವಾಗಿದೆ.
ಮದುಮಗನ ಮೇಲೆ ಆಸಿಡ್ ದಾಳಿ ನಡೆಸಿದ ಎಕ್ಸ್ ಗರ್ಲ್‌ಫ್ರೆಂಡ್ ಅಂದರ್
ಕೃತ್ಯಕ್ಕೂ ಮುನ್ನ ಪ್ಲಾನ್
ಆರೋಪಿ ಆಸಿಡ್ ದಾಳಿಗೆ ಮುನ್ನ ಸಿದ್ಧತೆ ನಡೆಸಿರುವ ಆರೋಪಿ ಕಾಲೇಜು ಯುನಿಫಾರ್ಮ್ ನೀಲಿ-ಬಿಳಿ ಬಣ್ಣದ ಸಮವಸ್ತ್ರ ಧರಿಸಿ ಬೆಳಗ್ಗೆಯೇ ಕಾಲೇಜು ಒಳಗೆ ಎಂಟ್ರಿ ಕೊಟ್ಟಿರುವ ಆರೋಪಿ ಅಭಿನ್. ಯಾರಿಗೂ ಗುರುತು ಸಿಗದಿರಲೆಂದು ತಲೆಗೆ ಹ್ಯಾಟ್, ಮಾಸ್ಕ್ ಧರಿಸಿ ಒಳಗೆ ಪ್ರವೇಶಿಸಿ ಕಾಲೇಜಿನ ಅಂಗಳದಲ್ಲಿ ಸುತ್ತಾಡಿರುವ ಆರೋಪಿ ಅಭಿನ್. ವಿದ್ಯಾರ್ಥಿನಿ ಚಲನವಲನ ಗಮನಿಸಿ ಆಸಿಡ್ ಎರಚಿ ಪರಾರಿಯಾಗಲು ಪ್ಲಾನ್. ಆದರೆ ಒಬ್ಬಳೆ ಕೂತಿರದೇ ಇಬ್ಬರು ವಿದ್ಯಾರ್ಥಿನಿಯರೊಂದಿಗೆ ಕಾಲೇಜು ಕ್ಯಾಂಪಸ್‌ನಲ್ಲಿ ಕೂತಿದ್ದ ವಿದ್ಯಾರ್ಥಿನಿ. ಪರೀಕ್ಷೆ ಹಿನ್ನೆಲೆಯಲ್ಲಿ ಓದುತ್ತಾ ಕೂತಿದ್ದ ಮೂವರು ವಿದ್ಯಾರ್ಥಿನಿಯರು. ಈ ವೇಳೆ ಏಕಾಏಕಿ ನುಗ್ಗಿ ಆಸಿಡ್ ಎರಚಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ. ಆದರೆ ಅಲ್ಲೇ ಇದ್ದ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಆರೋಪಿ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.