
ಮೂಲ್ಕಿ (ಆ.25): ವಾರಂಟ್ ಜಾರಿಯಾಗಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ತೆರಳಿದ್ದ ವೇಳೆ ಆರೋಪಿ ಏಕಾಏಕಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಘಟನೆ ನಡೆದಿದೆ.
ಅಸ್ವಸ್ಥಗೊಂಡಿದ್ದು, ಆತಂಕದ ನಡುವೆಯೂ ಪೊಲೀಸರು ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪದ ಮುಚ್ಚೂರು ಗ್ರಾಮದ ನಿವಾಸಿ ಕರುಣಾಕರ ಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು, ಆತಂಕದ ನಡುವೆಯೂ ಪೊಲೀಸರು ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾವೇರಿ ಗಲಭೆ ತಡೆಗೆ ನಿಯೋಜನೆಗೊಂಡಿದ್ದ ಮುಖ್ಯಪೇದೆ ಹೃದಯಾಘಾತದಿಂದ ಸಾವು!
ಆತ ಉಡುಪಿಯ ಶಿವಳ್ಳಿಯಲ್ಲಿರುವ ರಸಿಕ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸ್ ಠಾಣಾ ಉಪನಿರೀಕ್ಷಕ ಗುರುಪ್ಪ ಕಾಂತಿ ಮತ್ತು ಸಿಬ್ಬಂದಿ ವಾರಂಟ್ ಆದೇಶ ಕಾರ್ಯಗತಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿ ಕೆಲಸ ಮಾಡಿಕೊಂಡಿರುವ ಬಾರ್‌ಗೆ ತೆರಳಿದ್ದರು.
ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆಹಾಕಿಕೊಂಡು ಬರುವುದಾಗಿ ಬಾರ್‌ನ ಮೇಲೆ ಇರುವ ರೂಮಿನೊಳಗೆ ಹೋದ ಕರುಣಾಕರ, ಏಕಾಏಕಿ ಕೀಟನಾಶಕ ಸೇವನೆ ಮಾಡಿ ಬಂದು ವಾಹನದಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅಸ್ವಸ್ಥಗೊಂಡಿದ್ದರು. ದಾರಿ ಮಧ್ಯೆ ಆರೋಪಿಯ ಚಲನವಲನಗಳನ್ನು ಕಂಡು ಪೊಲೀಸರು ಗಾಬರಿಯಾಗಿ ಕೂಡಲೇ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಕೀಟನಾಶಕ ಸೇವನೆ ಕಕ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ: ಪುತ್ರನ ಆತ್ಮಹತ್ಯೆ ಬೆನ್ನಲ್ಲೇ ನೊಂದು ತಂದೆಯೂ ಆತ್ಮಹತ್ಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ