ನಗರದ ಶಕ್ತಿನಗರ ನಾರ್ಲಪದವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.ಹರ್ಷದ್ ಕೌಶಲ್(17) ಮೃತಪಟ್ಟವಿದ್ಯಾರ್ಥಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ಪ್ರತಿಭಾವಂತನಾಗಿದ್ದ. ಕರಾಟೆ ಪಟುವೂ ಆಗಿದ್ದ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್ ಈ ಕೃತ್ಯ ಮಾಡಿಕೊಂಡಿದ್ದಾನೆ.
ಮಂಗಳೂರು: ನಗರದ ಶಕ್ತಿನಗರ ನಾರ್ಲಪದವಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.
ಹರ್ಷದ್ ಕೌಶಲ್(17) ಮೃತಪಟ್ಟವಿದ್ಯಾರ್ಥಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ಪ್ರತಿಭಾವಂತನಾಗಿದ್ದ. ಕರಾಟೆ ಪಟುವೂ ಆಗಿದ್ದ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್ ಈ ಕೃತ್ಯ ಮಾಡಿಕೊಂಡಿದ್ದಾನೆ.
undefined
ಮನೆಯ ಮೇಲಿನ ಅಂತಸ್ತಿನಲ್ಲಿ ಕೌಶಲ್ ಮಾತ್ರ ಇದ್ದು,. ಕೆಳಗೆ ಆತನ ಅಜ್ಜಿ ಮತ್ತು ಸಂಬಂಧಿ ಹುಡುಗಿ ಇದ್ದರು. ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದು, ಕೌಶಲ್ ಕರೆ ಸ್ವೀಕರಿಸಿರಲಿಲ್ಲ. ತಾಯಿ ಕೂಡಲೇ ಹರ್ಷದ್‌ನ ಅಜ್ಜಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಮಹಡಿಯ ಕೋಣೆಯಲ್ಲಿ ನೋಡಿದಾಗ ಆತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಮೊಬೈಲ್ ಬಿಟ್ಟು ಓದು ಎಂದಿದ್ದಕ್ಕೆ ನದಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಓದಲು ಇಷ್ಟವಿಲ್ಲದೆ ವಿದ್ಯಾರ್ಥಿನಿ ಆತ್ಮಹತ್ಯೆ
ದೇವದುರ್ಗ: ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಜರುಗಿದೆ.
ಓದಲು ಇಷ್ಟವಿಲ್ಲದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ತಾಲೂಕಿನ ಬಿ.ಆರ್.ಗುಂಡಾ ಗ್ರಾಮದ ಪವಿತ್ರಾ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಈಕೆ 10ನೇ ತರಗತಿಯಲ್ಲಿ ಓದುತ್ತಿದ್ದಳು. ಓದಲು ಇಷ್ಟವಿಲ್ಲದ ಕಾರಣಕ್ಕೆ ಈಕೆ ಶಾಲೆ ತಪ್ಪಿಸಿ ಮನೆಗೆ ಬಂದಿದ್ದಳು. ಈಕೆಗೆ ಪಾಲಕರು ಬುದ್ಧಿವಾದ ಹೇಳಿ ಮತ್ತೆ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ತರಗತಿ ಸಮಯದಲ್ಲೇ ಕೋಣೆಗೆ ತೆರಳಿದ ಪವಿತ್ರಾ ಫ್ಯಾನ್‌ಗೆ ವೇಲ್ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾಳೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ ಶರಣು