Chikkamagaluru: ದತ್ತಪೀಠದ ಮಾರ್ಗದಲ್ಲಿ ಮೊಳೆ ಸುರಿದಿದ್ದವ ಕೋರ್ಟ್‍ಗೆ ಸರೆಂಡರ್‌

Published : Dec 18, 2022, 11:59 PM IST
Chikkamagaluru: ದತ್ತಪೀಠದ ಮಾರ್ಗದಲ್ಲಿ ಮೊಳೆ ಸುರಿದಿದ್ದವ ಕೋರ್ಟ್‍ಗೆ ಸರೆಂಡರ್‌

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ ಮಾರ್ಗದಲ್ಲಿ ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್ ಮುಂದೆ ಶರಣಾಗಿದ್ದಾನೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಡಿ.18): ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ ಮಾರ್ಗದಲ್ಲಿ ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್ ಮುಂದೆ ಶರಣಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದಷ್ಟೆ ಗ್ರಾಮಾಂತರ ಪೊಲೀಸರು ಇಬ್ಬರನ್ನ ಬಂಧಿಸಿದ್ದರು. ಇದೀಗ ಮತ್ತೋರ್ವ ಕೋರ್ಟ್ ಮುಂದೆ ಸರೆಂಡರ್‌ ಆಗಿದ್ದಾನೆ. ದತ್ತಜಯಂತಿಯ ಅಂಗವಾಗಿ ಜಿಲ್ಲಾಡಳಿತ ಚಿಪ್ಸ್ ಕೆಫೆ ಮೂಲಕ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಹೋಗಿದ್ದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂಬ ಇಬ್ಬರನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. 

ಅವರು ಎಲ್ಲಿ ಮೊಳೆ ಖರೀದಿಸಿದರು. ಎಂತಹಾ ಮೊಳೆ. ಎಲ್ಲಾ ಮಾಹಿತಿ ಕಲೆ ಹಾಕಿ ಇಬ್ಬರನ್ನ ಬಂಧಿಸಿದ್ದರು. ಆದರೆ, ಉಳಿದಿ ನಾಲ್ಕೈದು ಜನ ತಲೆಮರೆಸಿಕೊಂಡಿದ್ದರು. ಡಿಸೆಂಬರ್ 6-7-8ರಂದು ದತ್ತಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ಡಿಸೆಂಬರ್ 5ನೇ ತಾರೀಖು ಜಿಲ್ಲಾಡಳಿತವೇ ಇವರಿಗೆ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಕಳುಹಿಸಿತ್ತು. ಆಗ ಇಬ್ಬರು ದತ್ತಪೀಠದ ಮಾರ್ಗದ ಸುಮಾರು ಮೂರು ಕಿ.ಮೀ.ನಷ್ಟು ದೂರ ಸಣ್ಣ-ಸಣ್ಣ ಮೊಳೆಯನ್ನ ಸುರಿದು ಬಂದಿದ್ದರು. ಇದರಿಂದ ಪೊಲೀಸರ ವಾಹನ ಸೇರಿ ಐದಾರು ಗಾಡಿಗಳು ಪಂಚರ್ ಆಗಿದ್ದವು.

Chikkamagaluru: ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದವರ ಬಂಧನ

ದತ್ತಜಯಂತಿ ಕಾರ್ಯಕ್ರಮಕ್ಕೆ ವಿಘ್ನ ಉಂಟುಮಾಡುವ ಉದ್ದೇಶ: ನಗರವನ್ನ ಕೇಸರಿಮಯವಾಗಿಸಿದ್ದಾರೆ, ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಕೂಗುತ್ತಾರೆ. ಸಹಿಸಲಾಗದೆ, ಕಾರ್ಯಕ್ರಮವನ್ನ ಹಾಳುಮಾಡಬೇಕೆಂದು ನಾವೇ ಹೀಗೆ ಮಾಡಿದ್ದೇವೆ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು. ಇಬ್ಬರನ್ನ ಅರೆಸ್ಟ್‌ ಮಾಡಿದ್ದ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಶುಕ್ರವಾರ ಇಬ್ಬರು ಅರೆಸ್ಟ್ ಆಗುತ್ತಿದ್ದಂತೆ ಶನಿವಾರ ಸಂಜೆ ಓರ್ವ ನೇರವಾಗಿ ಕೋರ್ಟ್ ಹಾಜರಾಗಿದ್ದಾನೆ. ಪ್ರಕರಣ ಸಂಬಂಧ ಒಟ್ಟು ಮೂವರು ಆರೋಪಿಗಳು ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು