ಹಣದ ವಂಚನೆ ಮಾಡಿದವನನ್ನು ಕೊಂದು, ಶವದ ಸಮೇತ ಠಾಣೆಗೆ ಬಂದ ಆರೋಪಿ

By Sathish Kumar KHFirst Published Nov 22, 2022, 5:23 PM IST
Highlights

ಬೆಂಗಳೂರಿನಲ್ಲಿ ಹಣಕಾಸು ವಿಚಾರದಲ್ಲಿ ಮೋಸ ಮಾಡಿದ ಸ್ನೇಹಿತನನ್ನು ಕೊಲೆ ಮಾಡಿ ಶವದ ಸಮೇತ ಠಾಣೆಗೆ ಆರೋಪಿ ಆಗಮಿಸಿದ ಭಯಾನಕ ಘಟನೆ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ನ.22): ನಗರದಲ್ಲಿ ಹಣಕಾಸು ವಿಚಾರದಲ್ಲಿ ಮೋಸ ಮಾಡಿದ ಸ್ನೇಹಿತನನ್ನು ಕೊಲೆ ಮಾಡಿ ಶವದ ಸಮೇತ ಠಾಣೆಗೆ ಆರೋಪಿ ಆಗಮಿಸಿದ ಭಯಾನಕ ಘಟನೆ ರಾಮಮೂರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯನ್ನು ಮಹೇಶಪ್ಪ (Maheshappa) ಎಂದು ಗುರುತಿಸಲಾಗಿದೆ. ಇನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ವ್ಯಕ್ತಿ ರಾಜಶೇಖರ್‍ (Rajashekhar)‌ ಠಾಣೆಗೆ ಹಾಜರಾಗಿದ್ದಾನೆ. ರಾಜಶೇಖರನ ತಾಯಿ ಸುವಿಧಾ ಅವರಿಗೆ ಲೋನ್‌ (Loan) ಕೊಡಿಸುವುದಾಗಿ ನಂಬಿಸಿ ಮಹೇಶಪ್ಪ ಹಣವನ್ನು ಪಡೆದುಕೊಂಡಿದ್ದನು. ಇದೇ ರೀತಿ ನಗರದ ಹಲವು ಪರಿಚಯಸ್ಥರಿಗೆ ಲೋನ್‌ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿ ಕಣ್ಮರೆಸಿಕೊಂಡು ತಮ್ಮ ಸ್ವಗ್ರಾಮ ನಂಜನಗೂಡಿನ ಬಳಿಯ ಹಿಮ್ಮನಹಳ್ಳಿಗೆ ಹೋಗಿದ್ದನು. ಇವರನ್ನು ಹುಡುಕುತ್ತಾ ಹೋದ ಸುವಿಧಾ ಮಗ ರಾಜಶೇಖರ ಮಹೇಶಪ್ಪನನ್ನು ಪತ್ತೆಹಚ್ಚಿ ಕೊಲೆ ಮಾಡಿದ್ದಾನೆ. ನಂತರ ರಾಮಮೂರ್ತಿ ನಗರ ಪೊಲೀಸ್‌ ಠಾಣೆಗೆ ಶವ ತಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಸಂಶಯದಿಂದ 6 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಕಿತಾ'ಪತಿ'

ಮಹಿಳಾ ಸಂಘದ ಸಾಲದ ನೆಪ:  ನಂಜನಗೂಡು ಹಿಮ್ಮನಹಳ್ಳಿ (Himmanahalli) ಗ್ರಾಮದ ಮಹೇಶಪ್ಪ ಮತ್ತು ಆರೋಪಿ ರಾಜಶೇಖರ್ 13 ವರ್ಷಗಳಿಂದ ಪರಿಚಿತರಾಗಿದ್ದರು. ಮಹೇಶಪ್ಪ ಸಹಕಾರ-ಸಂಘ (Co-operative society) ಸೇರಿ ವಿವಿಧ ಬ್ಯಾಂಕ್ ಗಳಲ್ಲಿ ಹಲವು ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದಿದ್ದ. ಹಣ‌ ಪಡೆದು ತಿಂಗಳುಗಳು ಕಳೆದರೂ ಲೋನ್ ಹಣ ಕೊಡಿಸದೆ ತೆಗೆದುಕೊಂಡ ಹಣವೂ ವಾಪಸ್ ನೀಡಿದೆ ವಂಚಿಸಿದ್ದ ಎನ್ನಲಾಗಿದೆ. ಆರೋಪಿ ರಾಜಶೇಖರ್ ಹಾಗೂ ಆತನ ತಾಯಿ ಸುವಿಧಾ, ಮಹೇಶಪ್ಪನೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಭಾಗಿಯಾಗಿದ್ದರು. ಆದರೆ ಲೋನ್ ಕೊಡಿಸದೆ ವಂಚಿಸಿದ್ದರಿಂದ ರಾಜಶೇಖರ್ ತಮ್ಮ ‌ಮನೆ (Home) ಮಾರಾಟ ಮಾಡಿ ಹಣ ನೀಡಿದ್ದ. ಸ್ನೇಹಿತ ಮಾಡಿದ ವಂಚನೆಯಿಂದಾಗಿ ಕೋಟಿಗಟ್ಟಲೇ ಹಣ ಕಳೆದುಕೊಂಡಿದ್ದೇನೆ ಎಂದು ಪೊಲೀಸರ ಮುಂದೆ ರಾಜಶೇಖರ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಕಾರಿನಲ್ಲಿಯೇ ಕೊಲೆ:  ನಂಜನಗೂಡಿನಿಂದ ಮಹೇಶಪ್ಪನನ್ನು ಕರೆತರುವಾಗ ಇಬ್ಬರ ನಡುವೆಯೂ ಜಗಳ (Hassle) ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಕಾರಿನಲ್ಲಿಯೇ ಇಟ್ಟುಕೊಂಡಿದ್ದ ಕಬ್ಬಿಣದ ರಾಡ್‌ನಿಂದ (Iron rod) ಮಹೇಶಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾದ ಪೆಟ್ಟು ಬಿದ್ದು ಮಹೇಶಪ್ಪ ರಕ್ತಸ್ರಾವ (Bleeding) ಉಂಟಾಗಿ ಕಾರಿನಲ್ಲಿಯೇ ಸಾವನ್ನಪ್ಪಿದ್ದಾನೆ. ಮುಂದೇನು ಮಾಡಬೇಕು ಎಂದು ತಿಳಿಯದೇ ಆರೋಪಿ ರಾಜಶೇಖರ್‍‌ ನೇರವಾಗಿ ಪೊಲೀಸ್‌ ಠಾಣೆಗೆ ಶವದ ಸಮೇತ ಹಾಜರಾಗಿದ್ದಾನೆ. ಈ ಘಟನೆ ಹನಕಾಸು ವ್ಯವಹಾರದಲ್ಲಿ ಮೋಸ ಮಾಡವವರು ಸೇರಿ ಅನೇಕರಿಗೆ ಭಯ ಹುಟ್ಟಿಸಿದೆ.
 

click me!